»   »  ಜೋಗಿ ಭಾಗ 2ರ ಸಿದ್ಧತೆಯಲ್ಲಿ ಪ್ರೇಮ್

ಜೋಗಿ ಭಾಗ 2ರ ಸಿದ್ಧತೆಯಲ್ಲಿ ಪ್ರೇಮ್

Subscribe to Filmibeat Kannada

ರಾಜ್ ಚಿತ್ರದ ಬಳಿಕ ನಿರ್ದೇಶಕ ಪ್ರೇಮ್ ತಮ್ಮ ಮುಂದಿನ ಚಿತ್ರದ ಸಿದ್ಧತೆಯಲ್ಲಿದ್ದಾರೆ. ಕನ್ನಡ ಚಿತ್ರೋದ್ಯಮದಲ್ಲಿ ದಾಖಲೆ ನಿರ್ಮಿಸಿದ್ದ 'ಜೋಗಿ' ಚಿತ್ರದ ಮುಂದಿನ ಭಾಗವನ್ನು ನಿರ್ದೇಶಿಸಲು ಒಂದೊಂದೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜೋಗಿ ಚಿತ್ರದಲ್ಲಿ ನಟಿಸಿದ್ದ ಮುಂಬೈ ಬೆಡಗಿ ಜೆನ್ನಿಫರ್ ಕೊತ್ವಾಲ್ ರನ್ನು ಮತ್ತ್ತೆ ಜೋಗಿ ಭಾಗ 2 ಮೂಲಕ ಕನ್ನಡಕ್ಕೆ ಕರೆತರುತ್ತಿದ್ದಾರೆ.

ಜೋಗಿ ಚಿತ್ರದ ''ಎಲ್ಲೋ ಜೋಗಪ್ಪ ನಿನ್ನರಮನೆ...'' ಹಾಡಿಗೆ ಶಿವರಾಜ್ ಕುಮಾರ್ ಜತೆ ಜೆನ್ನಿಫರ್ ಹೆಜ್ಜೆ ಹಾಕಿದ್ದರು. ಆ ಹಾಡು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿತ್ತು. ಜೋಗಿ ಭಾಗ 2 ರಲ್ಲಿ ಅವಕಾಶ ಸಿಕ್ಕಿರುವುದನ್ನು ಜೆನ್ನಿಫರ್ ಸ್ಪಷ್ಟಪಡಿಸಿದ್ದಾರೆ. ಚಿತ್ರತಂಡದಿಂದ ಈಗಾಗಲೇ ತಮಗೆ ಕರೆಬಂದಿದ್ದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಚಿತ್ರಕ್ಕೆ ಇನ್ನೂ ಸಹಿ ಹಾಕಿಲ್ಲ ಎನ್ನ್ನುತ್ತಾರೆ ಜೆನ್ನಿಫರ್.

ಜೋಗಿ ಭಾಗ 2 ಚಿತ್ರ ನೈಜ ಘಟನೆಗಳನ್ನು ಆಧರಿಸಿರುತ್ತದೆ. ಈ ಚಿತ್ರಕ್ಕೂ ನಾನೇ ನಾಯಕಿಯಾಗುತ್ತಿರುವುದು ಖುಷಿಯಾಗಿದೆ. ಚಿತ್ರದಲ್ಲಿ ನನಗಾಗಿಯೇ ಹಾಡೊಂದನ್ನು ಚಿತ್ರೀಕರಿಸಲಾತ್ತದೆ. ಆ ಪಾತ್ರಕ್ಕೆ ನಾನೇ ಸೂಕ್ತ ನಟಿ ಎನ್ನಿಸಿದ ಕಾರಣ ಚಿತ್ರತಂಡ ನನ್ನನ್ನು ಆಯ್ಕೆ ಮಾಡಿದೆ ಎನ್ನ್ನುತ್ತಾರೆ ಜೆನ್ನ್ನಿಫರ್ ಕೊತ್ವಾಲ್.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada