»   » ಚಿತ್ರನಟಿ ನಯನತಾರಾ ಕಾರು ಚಾಲಕನ ಬಂಧನ

ಚಿತ್ರನಟಿ ನಯನತಾರಾ ಕಾರು ಚಾಲಕನ ಬಂಧನ

Posted By:
Subscribe to Filmibeat Kannada

ಕಾಂಗ್ರೆಸ್ ಮುಖಂಡ ದಿವಾಕರನ್ (39) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟಿ ನಯನತಾರಾ ಅವರ ಕಾರು ಚಾಲಕನನ್ನು ಕೇರಳ ಅಲೆಪ್ಪಿಯ ಛೆರ್ತಾಲಾ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ಅಲೆಪ್ಪಿ ಬಳಿಯ ಛೆರ್ತಾಲ ಮನೆಯಲ್ಲಿ ದಿವಾಕರನ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು.

ಕೊಲೆಗಾರನ ಪತ್ತೆಗಾಗಿ ವಿಶೇಷ ಪೊಲೀಸ್ ಪಡೆ ಜಾಲ ಬೀಸಿತ್ತು. ಕಡೆಗೂ ಕೊಲೆಗಾರ ಪೊಲೀಸರ ಬಲೆಗೆ ಬಿದ್ದಿದ್ದು ಆತನನ್ನು ನಯನತಾರಾ ಅವರ ಮಾಜಿ ಕಾರು ಚಾಲಕ ಸೇತುಕುಮಾರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೊಲೆಗೆ ಕಾರಣ ಏನಿರಬಹುದು? ಕೊಲೆಯಲ್ಲಿ ಇನ್ನೂ ಯಾರು ಯಾರು ಭಾಗಿಯಾಗಿದ್ದಾರೆ ಎಂಬ ಮಹತ್ವದ ಮಾಹಿತಿಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಒಟ್ಟಿನಲ್ಲಿ ನಯನತಾರಾ ಒಂದಿಲ್ಲೊಂದು ಘಟನೆಗಳಿಂದ ಸುದ್ದಿಯಾಗುತ್ತಿದ್ದಾರೆ. ಸೇತುಕುಮಾರ್ ಬಂಧನಕ್ಕೆ ಸಂಬಂಧಿಸಿದಂತೆ ನಯನತಾರಾ ಏನೊಂದನ್ನು ಪ್ರತಿಕ್ರಿಯಿಸಿಲ್ಲ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada