»   » ತೆರೆಯ ಮೇಲೆ ಹಾರಲು ಭಟ್ ಪಂಚರಂಗಿ ಸಿದ್ಧ

ತೆರೆಯ ಮೇಲೆ ಹಾರಲು ಭಟ್ ಪಂಚರಂಗಿ ಸಿದ್ಧ

Posted By:
Subscribe to Filmibeat Kannada

ಜಯಂತ್‌ ಕಾಯ್ಕಿಣಿ ರವರು ರಚಿಸಿರುವ 'ಉಡಿಸುವೆ ಬೆಳಕಿನ ಸೀರೆಯ - ಚೂರು ಸಹಕರಿಸು' ಎಂಬ ಗೀತೆಯನ್ನು ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ಚಿತ್ರಿಸಿಕೊಳ್ಳುವುದರೊಂದಿಗೆ ನಿರ್ದೇಶಕ ಯೋಗಾರಾಜ್‌ಭಟ್ 'ಪಂಚರಂಗಿ' ಚಿತ್ರದ ಚಿತ್ರೀಕರಣವನ್ನು ಮುಕ್ತಾಯಗೊಳಿಸಿದ್ದಾರೆ. ದಿಗಂತ್ ಹಾಗೂ ನಿಧಿಸುಬ್ಬಯ್ಯ ಅಭಿನಯಿಸಿದ ಈ ಗೀತೆಗೆ ನೃತ್ಯಗಾರ್ತಿ ಮಯೂರಿ ಉಪಾದ್ಯ ರವರ ಸಹಕಾರದೊಂದಿಗೆ ನಿರ್ದೇಶಕರೇ ನೃತ್ಯ ನಿರ್ದೇಶನ ಮಾಡಿದ್ದಾರೆ.

ಯೋಗರಾಜ್ ಮೂವೀಸ್ ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆಯ ಮೂಲಕ ಈ ಚಿತ್ರ ನಿರ್ಮಾಣವಾಗುತ್ತಿದೆ. ಯೋಗರಾಜಭಟ್ ಹಾಗೂ ಎಂ.ಕೆ.ಸುಬ್ರಹ್ಮಣ್ಯ ಈ ಚಿತ್ರದ ನಿರ್ಮಾಪಕರು. ಪವನ್‌ಕುಮಾರ್ ಅವರೊಂದಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆ ಹೊತ್ತಿರುವ ಯೋಗರಾಜಭಟ್ ಸ್ವತಃ ಸಂಭಾಷಣೆ ಬರೆದಿದ್ದಾರೆ.

ಮನೋಮೂರ್ತಿ ಸಂಗೀತ, ತ್ಯಾಗರಾಜನ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಶಶಿಧರ್ ಅಡಪ ಕಲಾನಿರ್ದೇಶನ ಮತ್ತು ಹರ್ಷ ನೃತ್ಯನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ದಿಗಂತ್, ನಿಧಿಸುಬ್ಬಯ್ಯ, ಅನಂತನಾಗ್, ರಾಜುತಾಳಿಕೋಟೆ, ಪವನ್‌ಕುಮಾರ್, ಸುಂದರ್‌ರಾಜ್, ಪದ್ಮಜಾರಾವ್, ಸುಧಾಬೆಳವಾಡಿ, ರಮ್ಯಾಬರ್ನಾ, ನಾಗೇಂದ್ರ ಶಾ, ಸತೀಶ್, ಸೌಮ್ಯ, ನಾಗರಾಜ್ ಅರಸು, ಸುಧಾಕರ್(ರಾಕ್‌ಲೈನ್ ಪ್ರೊಡಕ್ಷನ್ಸ್) ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada