»   » ರಸ್ನಾ ರೂಪದರ್ಶಿಯ ಕಾಮಸೂತ್ರ ಕನೆಕ್ಷನ್

ರಸ್ನಾ ರೂಪದರ್ಶಿಯ ಕಾಮಸೂತ್ರ ಕನೆಕ್ಷನ್

Posted By:
Subscribe to Filmibeat Kannada

ಹೇಗಾದರೂ ಸರಿ ಫಿಲ್ಮಂ ಇಂಡಸ್ಟ್ರಿಯಲ್ಲಿ ಚಾಲ್ತಿ ಇರಬೇಕು ಎಂಬುದು ಹಲವು ನಟಿಯರ ಆಸೆ ಹಾಗೂ ತೀರದ ಹಂಬಲ ಕೂಡಾ. ನಿಮಗೆ ನೆನಪಿರಬಹುದು, ಪುಟ್ಟ ಪೋರಿಯೊಬ್ಬಳು 'ಐ ಲವ್ ಯೂ ರಸ್ನಾ' ಎನ್ನುತ್ತಾ ಟಿವಿಯಲ್ಲಿ ಬಂದರೆ ಸಾಕು ಎಲ್ಲರ ಗಮನ ಆ ಕಡೆಗೆ ಸೆಳೆದುಬಿಡುತ್ತಿತ್ತು. ಅಷ್ಟು ಚುಂಬಕ ಶಕ್ತಿಯಿತ್ತು ಆ ಪುಟ್ಟ ಹುಡುಗಿ ಅಂಕಿತಾಳ ಕಂಗಳಲ್ಲಿ, ರಸ್ನಾ ಪಾನೀಯ ಜಾಹೀರಾತಿನಲ್ಲಿ. ಆಮೇಲೆ , ಅದೇ ಪೋರಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಳವೂರಲು ಅನೇಕಾನೇಕ ಪ್ರಯತ್ನಗಳನ್ನು ಪಟ್ಟು ವಿಫಲಳಾಗಿ ಈಗ ಮತ್ತದೇ ಜಾಹೀರಾತು ಪ್ರಪಂಚಕ್ಕೆ ಕಾಲಿರಿಸುತ್ತಿದ್ದಾಳೆ. ಆದರೆ, ಈ ಬಾರಿ ತನ್ನ ಪ್ರೌಢಾವಸ್ಥೆಯ ದಿಗ್ದರ್ಶನ ತೋರಲು ಆರಿಸಿಕೊಂಡಿರುವುದು 'ಕಾಮಸೂತ್ರ' ಜಾಹೀರಾತನ್ನು

ಒಮ್ಮೆ ವಿದೇಶದಲ್ಲಿ ಒಂದು ಕಾರ್ಯಕ್ರಮವಿತ್ತು. ಸಾಮಾನ್ಯವಾಗಿ ಬೇಡಿಕೆಯಿರದ ಅಥವಾ ಅತಿ ಹೆಚ್ಚು ಬೇಡಿಕೆಯುಳ್ಳ ನಟಿಯರನ್ನು ಕರೆಸಿ ಈ ಎನ್ನಾರೈಗಳು ಕುಣಿಸಿ, ಹಾಡಿಸಿ, ನಲಿಸಿ ಮನರಂಜನೆ ಹೊಂದುವುದು ಮಾಮೂಲಿ. ಈ ರೀತಿ ಸ್ಟೇಜ್ ಷೋ ಮಾಡುವುದು ನಟಿಯರ ಪಾಲಿಗೆ ಸಿನಿಮಾಗಿಂತ ಹೆಚ್ಚಿನ ಲಾಭ ತಂದು ಕೊಡುತ್ತದೆ ಎಂಬುದು ಒಳಗುಟ್ಟು. ಇದೇ ರೀತಿ ಅಂಕಿತಾ ಒಮ್ಮೆ ವಿದೇಶದಲ್ಲಿ ಕುಣಿಯಲು ಹೋಗಿದ್ದಾಗ ,ಅಲ್ಲಿನ ಜನ ಅಸಭ್ಯವಾಗಿ ವರ್ತಿಸಿ, ಸಿನಿಮಾದಲ್ಲಿ ಹಾಗೆ ಇರ್ತೀಯಾ ಇಲ್ಲೇಕೆ ಹೀಗೆ ಸ್ವಲ್ಪ ಸಹಕರಿಸಿ ಎಂದೆಲ್ಲಾ ಕಾಟ ಕೊಟ್ಟರಂತೆ. ಸಾಕಪ್ಪ ಸಾಕು ಎನ್ನ್ನಾರೈಗಳ ಸಹವಾಸ ಎಂದು ಅಂಕಿತಾ ಇಲ್ಲಿ ಬಂದು ದುಃಖ ದುಮ್ಮಾನಗಳನ್ನು ತೋಡಿಕೊಂಡಿದ್ದರು.

ಇಂತಿರ್ಥ ಅಂಕಿತಾ, ಸಿನಿಮಾಗಳಲ್ಲಿ ನಟನೆಗಿಂತ, ಮೈಮಾಟ ಪ್ರದರ್ಶನಕ್ಕೆ ಹೆಸರುವಾಸಿಯಾದವರು. ಬಹುಶಃ ಈ ಕಾಮಸೂತ್ರ ಜಾಹೀರಾತಿನಿಂದ ಭವಿಷ್ಯದಲ್ಲಿ ಭಾಗ್ಯದ ಬಾಗಿಲು ತೆರೆಯಬಹುದು ಎಂಬ ಎಣಿಕೆಯಲ್ಲಿದ್ದಾರೆ ಅಂಕಿತಾ. ಅಂದ ಹಾಗೆ, ಹೆಚ್ಚಾಗಿ ತೆಲುಗು, ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅಂಕಿತಾ, ಕನ್ನಡದಲ್ಲಿ ಹ್ಯಾಟ್ರಿಕ್ ಹೀರೋ ಜೊತೆ ಶ್ರೀರಾಮ್ ಚಿತ್ರದಲ್ಲಿ ನಟಿಸಿದ್ದಾರೆ. ಸ್ಸಾರಿ, ನಟಿಸಲು ಪ್ರಯತ್ನಿಸಿದ್ದಾರೆ. ಎನಿ ವೇ ,ಬಾಲ್ಯದಿಂದಲೂ ರಸ್ನಾ ಬೇಬ್ ಅಂಕಿತಾಳನ್ನು ಇಷ್ಟಪಡುತ್ತಿದ್ದ ಮಂದಿ, ಇನ್ಮುಂದೆ ಮತ್ತೊಂದು ಜಾಹೀರಾತಿನ ಮೂಲಕ ಹಿಂಬಾಲಕರಾಗಬಹುದು. ಈ ಜಾಹೀರಾತಲ್ಲೂ ಅಂಕಿತಾ ಐ ಲವ್ ಯೂ ಆಲ್ ಅನ್ನುತ್ತಾಳಾ.. ಕಾದು ನೋಡಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada