»   »  ಉಪೇಂದ್ರ ರಜನಿ ಚಿತ್ರದಲ್ಲಿ ಆರತಿ ಛಾಬ್ರಿಯಾ

ಉಪೇಂದ್ರ ರಜನಿ ಚಿತ್ರದಲ್ಲಿ ಆರತಿ ಛಾಬ್ರಿಯಾ

Posted By:
Subscribe to Filmibeat Kannada
ಉಪೇಂದ್ರ ಅಭಿನಯದ ರಜನಿ ಚಿತ್ರ ಮುಕ್ತಾಯ ಹಂತದಲ್ಲಿದ್ದು ಪ್ರಸ್ತುತ ಮೈಸೂರಿನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದ ನಾಯಕಿ ಮತ್ತು ಖಳ ನಟ ಹಿಂದಿ ಚಿತ್ರರಂಗದವರಾಗಿರುವುದು ಈ ಚಿತ್ರದ ವಿಶೇಷ.

ಚಾಕೊಲೇಟ್ ಮುಖದ ಮುಕುಲ್ ದೇವ್ ಚಿತ್ರದ ಖಳ ನಟ. ಕೋಲ್ಗೇಟ್ ಮುಖದ ಆರತಿ ಛಾಬ್ರಿಯಾ ಚಿತ್ರದ ನಾಯಕಿ. ತೆಲುಗಿನ ಕೃಷ್ಣ ಚಿತ್ರದ ರೀಮೇಕ್ ಆದ ಈ ಚಿತ್ರವನ್ನು ಥ್ರಿಲ್ಲರ್ ಮಂಜು ನಿರ್ದೇಶಿಸಿದ್ದಾರೆ. ಮೂಲ ಚಿತ್ರವನ್ನು ತೆಲುಗಿನಲ್ಲಿ ಯಶಸ್ವಿ ನಿರ್ದೇಶಕ ಎಂದೇ ಖ್ಯಾತರಾಗಿರುವ ವಿ ವಿ ವಿನಾಯಕ್ ನಿರ್ದೇಶಿಸಿದ್ದರು. ರವಿತೇಜ ಮತ್ತು ಮುಕುಲ್ ದೇವ್ ಕ್ರಮವಾಗಿ ನಾಯಕ ಮತ್ತು ಖಳ ನಟನ ಪಾತ್ರವನ್ನು ಪೋಷಿಸಿದ್ದರು.

ಕನ್ನಡದಲ್ಲಿ ಆರತಿ ಛಾಬ್ರಿಯಾ ಅಭಿನಯಿಸುತ್ತಿರುವ ಮೂರನೇ ಚಿತ್ರ ರಜನಿ. ಮೂಲ ಚಿತ್ರದಲ್ಲಿ ತ್ರಿಶಾ ಅಭಿನಯಿಸಿದ್ದರು. ಬಾಲಾಜಿ ಮತ್ತು ಮುರಳಿ ಅಭಿನಯದ 'ಅಹಂ ಪ್ರೇಮಾಸ್ಮಿ' ಚಿತ್ರದಲ್ಲಿ ಈ ಹಿಂದೆ ಆರತಿ ಛಾಬ್ರಿಯಾ ನಟಿಸಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ರಜನಿ ಚಿತ್ರದ ನಾಯಕಿಯಾಗಿ ಆರತಿ ಛಾಬ್ರಿಯಾ
ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಉಪೇಂದ್ರ
ರಜನಿ ಚಿತ್ರಕ್ಕೆ ಮೈಸೂರಿನಲ್ಲಿ ಅದ್ದೂರಿ ಕ್ಲೈಮ್ಯಾಕ್ಸ್
ಹೈದರಾಬಾದ್‌ನಲ್ಲಿ ಉಪೇಂದ್ರ ಅವರ ಶ್ರೀಮತಿ
ಉಪೇಂದ್ರ ಭೀಮೂಸ್... ವೆಬ್ ಸೈಟ್ ಗೆ ಚಾಲನೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada