For Quick Alerts
  ALLOW NOTIFICATIONS  
  For Daily Alerts

  'ಭಕ್ತಕುಂಬಾರ' ಹಲವು ಬಾರಿ ನೋಡಿದ್ದ ಆಚಾರ್ಯ

  By Rajendra
  |

  ಬಿಜೆಪಿಯ ಥಿಂಕ್ ಟ್ಯಾಂಕ್, ಹಿರಿಯ ಸಜ್ಜನ ರಾಜಕಾರಣಿ ವಿ.ಎಸ್.ಆಚಾರ್ಯ ನಮ್ಮಿಂದ ಮರೆಯಾಗಿದ್ದಾರೆ. ಸಂಘದ ಕೆಲಸಗಳು, ಚುನಾವಣೆ, ಸಚಿವ ಸ್ಥಾನ ಹೀಗೆ ಬಿಡುವಿಲ್ಲದ ಕಾರ್ಯಗಳ ನಡುವೆಯೇ ಆಚಾರ್ಯರು ಸಿನಿಮಾಗಳನ್ನು ನೋಡುತ್ತಿದ್ದರು. ಚಿತ್ರರಂಗದೊಂದಿಗೆ ಹೆಚ್ಚಿನ ಒಡನಾಟ ಇಟ್ಟುಕೊಂಡಿದ್ದರು. ಸದಭಿರುಚಿಯ ಚಿತ್ರಗಳನ್ನು ಇಷ್ಟಪಡುತ್ತಿದ್ದರು.

  ಬೇಡರ ಕಣ್ಣಪ್ಪ, ಹೇಮರೆಡ್ಡಿ ಮಲ್ಲಮ್ಮ, ಜಗನ್ಮೋಹಿನಿ ಆಚಾರ್ಯರಿಗೆ ತುಂಬಾ ಇಷ್ಟವಾಗಿದ್ದವು. ಉಡುಪಿಯ ರಾಮಕೃಷ್ಣ ಟಾಕೀಸಿನಲ್ಲಿ 'ಭಕ್ತ ಕುಂಬಾರ' ಚಿತ್ರವನ್ನು ಹಲವಾರು ಬಾರಿ ಆಚಾರ್ಯರು ನೋಡಿದ್ದರು. ಆಕ್ಷನ್ ಸಿನಿಮಾಗಳಿಗಿಂತ ಹೆಚ್ಚಾಗಿ ಕಾಮಿಡಿ ಚಿತ್ರಗಳನ್ನು ಇಷ್ಟಪಡುತ್ತಿದ್ದರು. ಪಕ್ಷ ಸಂಘಟನೆಗೆ ನಿಧಿ ಸಂಗ್ರಹಿಸಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಪುನೀತ್ ಫಾರಂ ಬಾಗಿಲು ತಟ್ಟಿದ ಆಚಾರ್ಯರನ್ನು ಸ್ವತಃ ಡಾ. ರಾಜ್ ಸ್ವಾಗತಿಸಿದ್ದರು.

  ತಿಂಡಿ, ಕಾಫಿ ಜೊತೆಗೆ ನಿರ್ಮಲ ಮನಸ್ಸಿನ ರಾಜ್‌ಕುಮಾರ್ ಜೊತೆ ಆಚಾರ್ಯ ಚಿತ್ರರಂಗದ ಕುರಿತು ಮಾತನಾಡಿದ್ದರು. ಆಚಾರ್ಯಅವರು ಬಂದ ಉದ್ದೇಶ ತಿಳಿಸಿದಾಗ, ರಾಜ್ ಪಾರ್ವತಮ್ಮನವರ ಮುಖ ನೋಡಿದ್ದರು. ಪಾರ್ವತಮ್ಮನವರು ಆ ಕಾಲಕ್ಕೆ ಅತಿ ಹೆಚ್ಚು ಎನ್ನಹುದಾಗಿದ್ದ ಕಂತೆಯೊಂದನ್ನು ಕೈಗಿಟ್ಟು ಒಳ್ಳೆದಾಗಲಿ ಎಂದಿದ್ದರು. ಹೀಗೆ ಆಚಾರ್ಯರ ಸಿನಿಮಾನುಭವ ಇನ್ನು ನೆನಪು ಮಾತ್ರ. (ಒನ್‍ಇಂಡಿಯಾ ಕನ್ನಡ)

  English summary
  Karnatak's former minister and a senior Bharatiya Janata Party leader late VS Acharya was a big fan of Kannada films. He watched Kannada matinee idol Dr.Rajkumar's 'Bhakta Kumbara' several times in Upudi's Ramakrishna talkies

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X