»   » ಹೊಸವರ್ಷದಿನ ಗುಲಾಮನಾಗಿ ಪ್ರಜ್ವಲ್

ಹೊಸವರ್ಷದಿನ ಗುಲಾಮನಾಗಿ ಪ್ರಜ್ವಲ್

Subscribe to Filmibeat Kannada
prajwal devaraj
ಪ್ರಜ್ವಲ್ ದೇವರಾಜ್ ಹಾಗೂ ಸೋನು ಮುಖ್ಯ ಭೂಮಿಕೆಯಲ್ಲಿರುವ "ಗುಲಾಮ" ಈ ವಾರ ತೆರೆಕಾಣಲಿದೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿರುವ ತುಷಾರ್ ರಂಗನಾಥ್ ಅವರ ಸ್ವತಂತ್ರ ನಿರ್ದೇಶನದ ಪ್ರಥಮ ಚಿತ್ರ. ಸುಮಾರು 10 ಕ್ಕೂ ಹೆಚ್ಚು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ತುಷಾರ್, ರಾಮು ಬ್ಯಾನರ್ ನಲ್ಲಿ ಬಂದ ರಾಕ್ಷಸ, ಸುಂಟರಗಾಳಿ ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದರು. 12 ಚಿತ್ರಗಳಿಗೆ ಸಂಭಾಷಣೆ ಬರೆದಿರುವ ತುಷಾರ್ ಗೆ ಗೀತರಚನೆಯಲ್ಲೂ ಅನುಭವವಿದೆ.

" ಗುಲಾಮ" ಚಿತ್ರ ತುಷಾರ್ ಅವರ ಬಹು ವರ್ಷದ ಕನಸು. ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿರುವ ಇವರು, ಚಿತ್ರವನ್ನು ಪ್ರೇಕ್ಷಕ ಮಹಾ ಪ್ರಭುಗಳು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎನ್ನುವ ಭಯ ಕಾಡುತ್ತಿದೆ. ಗುರುಕಿರಣ್ ಸಂಗೀತ ಇರುವ ಈ ಚಿತ್ರದ ಒಂದು ಹಾಡು ಈಗಾಗಲೇ ಹಿಟ್ ಆಗಿದೆ, ಬಹಳ ಶ್ರಮಪಟ್ಟು ತಯಾರಿಸಿದ ಈ ಚಿತ್ರದಲ್ಲಿ ತಾಜಾತನ ಇದ್ದು ಪ್ರೇಕ್ಷಕರಿಗೆ ಹೊಸ ಅನುಭವ ತಂದು ಕೊಡಲಿದೆ ಹಾಗೂ ಪ್ರಜ್ವಲ್ ಗೆ ಹೊಸ ಇಮೇಜ್ ತಂದು ಕೊಡಲಿದೆ ಎನ್ನುತ್ತಾರೆ ನಿರ್ದೇಶಕ ತುಷಾರ್ ರಂಗನಾಥ್.

ಒಟ್ಟಿನಲ್ಲಿ 2008 ರ ಸೋಲಿನಿಂದ ಕಂಗಾಲಾಗಿರುವ ಕನ್ನಡ ಚಿತ್ರರಂಗ, 2009 ಹೊಸ ವರ್ಷದ ಮೊದಲ ದಿನವೇ ಬಿಡುಗಡೆ ಗೊಳ್ಳುತ್ತಿರುವ ಈ ಚಿತ್ರದೊಂದಿಗೆ ಉತ್ತಮ ಯಶಸ್ಹ್ಶು ಸಾಧಿಸಲಿ ಅನ್ನುವುದು ಚಿತ್ರಪ್ರೇಮಿಗಳ ಹಾರೈಕೆ.-
(ದಟ್ಸ್ ಕನ್ನಡ ಚಿತ್ರವಾರ್ತೆ)
ಭರದ ಚಿತ್ರೀಕರಣದಲ್ಲಿ ಪ್ರಜ್ವಲ್ ರ 'ನನ್ನವನು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada