ಅತಡು ಪುನೀತ್ ಜತೆ ತ್ರಿಶಾ ಎಂಟ್ರಿ ಖಚಿತ

ಇದರ ಬೆನ್ನಲ್ಲೇ ಸಪೂರ ಸೊಂಟದ ಹುಡುಗಿ ಗಾಂಧಿನಗರಕ್ಕೆ ಕಾಲಿಡುವುದು ಗ್ಯಾರಂಟಿ ಎಂಬ ಸುದ್ದಿ ಖಚಿತವಾಗಿದೆ. ತೆಲುಗಿನ ಸೂಪರ್ ಹಿಟ್ ಚಿತ್ರ ಮಹೇಶ್ ಬಾಬು ಅಭಿನಯದ ಅತಡು ಚಿತ್ರದ ಕನ್ನಡ ರಿಮೇಕ್ ನಲ್ಲಿ ತ್ರಿಶಾ ನಟಿಸುವುದು ಖಂಡಿತಾ ಎನ್ನುತ್ತಿದ್ದಾರೆ ನಿರ್ಮಾಪಕ ಜಿ.ಕೆ. ವೆಂಕಟೇಶ್ ಹಾಗೂ ರಸಗುಲ್ಲ ನಿರ್ಮಾಪಕ ಕಮ್ ನಿರ್ದೇಶಕ ಗೋವರ್ಧನ್.
ಯೋಗರಾಜ್ ಭಟ್ಟರ ಲಗೋರಿ ಚಿತ್ರದಲ್ಲಿ ನಟಿಸುವುದಾಗಿ ಈ ಮುಂಚೆ ಸುಳ್ಳು ಸುದ್ದಿ ಹರಡಿತ್ತು. ಲಗೋರಿ ಚಿತ್ರೀಕರಣ ನಿಂತು ಭಟ್ಟರು ಖಾಲಿ ಕೂತಿದ್ದು ಆಯ್ತು. ಆದರೆ, ಪುನೀತ್ ಗೆ ಇದರಿಂದ ಏನೂ ನಷ್ಟವಾಗಿಲ್ಲ. ಅತಡು ರಿಮೇಕ್ ನಲ್ಲಿ ತ್ರಿಶಾ ಜತೆ ನಟಿಸುವುದು ಖಾತ್ರಿಯಾಗಿದೆ.
ಪುನೀತ್ ಈಗಾಗಲೇ 40 ದಿನಗಳ ಕಾಲ್ ಶೀಟ್ ನೀಡಿಯಾಗಿದೆ. ತ್ರಿಶಾರ ತೆಲುಗು ಚಿತ್ರ ಕಿಂಗ್ ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿ ಆರಂಭ ಕಂಡಿದೆ. ನಮ್ಮ ಚಿತ್ರಕಥೆಯನ್ನು ಮುಂದಿನ ವಾರದಲ್ಲಿ ಆಕೆಗೆ ಹೇಳಲಿದ್ದೇವೆ. ಆಕೆಗೆ ಇಷ್ಟವಾಗುತ್ತದೆ ಎಂಬ ಭರವಸೆ ಇದೆ ಎನ್ನುತ್ತಾರೆ ನಿರ್ಮಾಪಕ ಜಿಕೆ ವೆಂಕಟೇಶ್
ತೆಲುಗು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ರಿಂದ ಅತಡು ಚಿತ್ರದ ರಿಮೇಕ್ ಹಕ್ಕನ್ನು ಸುಮಾರು 18 ಲಕ್ಷ ಕೊಟ್ಟು ಕನ್ನಡ ನಿರ್ಮಾಪಕರು ಖರೀದಿಸಿದ್ದಾರೆ.ಪುನೀತ್ ಹಾಗೂ ತ್ರಿಶಾ ಬಿಡುವಿಲ್ಲದ ಕಾರಣಜನವರಿ ಕೊನೆ ವಾರದೊಳಗೆ ಕನ್ನಡದಲ್ಲಿ ಅತಡು ಚಿತ್ರೀಕರಣ ಆರಂಭವಾಗುವ ಲಕ್ಷಣಗಳು ಕಂಡು ಬಂದಿದೆ. ಅತಡು ಚಿತ್ರದ ಕನ್ನಡ ಅವತರಣಿಕೆಗೆ ಇನ್ನೂ ನಾಮಕರಣವಾಗಿಲ್ಲ
ಲಗೋರಿ ಆಡಲು ಬರುವಳೇ ಬೆಡಗಿ ತ್ರಿಷಾ


Click it and Unblock the Notifications











