»   »  ಅಭಿಮಾನಿಗಳ ಸಂಭ್ರಮದಲ್ಲಿ ಸೊರಗಿದ ಅಂಬಿ

ಅಭಿಮಾನಿಗಳ ಸಂಭ್ರಮದಲ್ಲಿ ಸೊರಗಿದ ಅಂಬಿ

Posted By:
Subscribe to Filmibeat Kannada
Ambareesh
ನಟ ಮಳವಳ್ಳಿ ಹುಚ್ಚೇಗೌಡ ಅಂಬರೀಷ್ ಇಂದು 58ನೇ ವಸಂತಕ್ಕೆ ಅಡಿಯಿಟ್ಟರು. ಬೆಂಗಳೂರು ಜೆ ಪಿ ನಗರದ ಮನೆಯ ಮುಂದೆ ಅಂಬರೀಷ್ ರ ಅಪಾರ ಅಭಿಮಾನಿಗಳು ಅವರನ್ನು ನೋಡಲು ಆಗಮಿಸಿದ್ದರು. ತಮ್ಮ ನೆಚ್ಚಿನ ನಾಯಕನನ್ನು ಕಾಣಲು ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಹಲವು ಗಣ್ಯರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.

ಮಂಡ್ಯ ಲೋಕಸಭೆ ಚುನಾವಣೆಯಲ್ಲಿನ ಸೋಲುಅಂಬಿಯ 58ನೇ ಹುಟ್ಟುಹಬ್ಬವನ್ನು ಒಂಚೂರು ಮಂಕಾಗಿಸಿತ್ತು. ಮಂಡ್ಯದಲ್ಲಿನ ಸೋಲು ಅವರನ್ನು ನಿಜಕ್ಕೂ ಕಂಗೆಡಿಸಿದೆ. ಹಾಗಾಗಿ ಅಂಬರೀಷ್ ಮುಖದಲ್ಲಿ ಹುಟ್ಟುಹಬ್ಬದ ಸಂಭ್ರಮ ಇಲ್ಲ ಎನ್ನುತ್ತಾರೆ ಅವರ ಆಪ್ತ ನಿರ್ದೇಶಕರೊಬ್ಬರು. ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಅಂಬರೀಷ್ ಆಚರಿಸಿಕೊಂಡರು. ಅಂಬಿ ಅಭಿಮಾನಿಗಳು ಇಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದರು.

ಸಣ್ಣಪುಟ್ಟ ಪಾತ್ರಗಳಿಂದ ತಮ್ಮ ವೃತ್ತಿ ಜೀವನವನ್ನು ಅರಂಭಿಸಿದ ಅಂಬರೀಷ್ ಅವರಿಗೆ ತಿರುವು ಕೊಟ್ಟಂತಹ ನಿರ್ದೇಶಕರು ಪುಟ್ಟಣ್ಣ ಕಣಗಾಲ್. ಪಡುವಾರಹಳ್ಳಿ ಪಾಂಡವರು, ಶುಭಮಂಗಳ, ರಂಗನಾಯಕಿ ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಂಬರೀಷ್ ಅಭಿನಯಿಸಿದ್ದಾರೆ. 'ಅಂತ' ಚಿತ್ರದಲ್ಲಿನ ಕನ್ವರ್ ಲಾಲ್ ಪಾತ್ರ, ಚಕ್ರವ್ಯೂಹ, ಏಳು ಸುತ್ತಿನ ಕೋಟೆ ,ಹಾಂಕಾಂಗ್ ನಲ್ಲಿ ಏಜೆಂಟ್ ಅಮರ್, ಒಡ ಹುಟ್ಟಿದವರು ಚಿತ್ರಗಳಲ್ಲಿನ ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದವರು ಅಂಬರೀಷ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada