»   »  ಅಮೀರ್ ಖಾನ್ ನೆನಪಿಸುವ ಉಪೇಂದ್ರ: ಸೆಲೀನಾ

ಅಮೀರ್ ಖಾನ್ ನೆನಪಿಸುವ ಉಪೇಂದ್ರ: ಸೆಲೀನಾ

Subscribe to Filmibeat Kannada
ಬಾಲಿವುಡ್ ನಟಿ ಮತ್ತು ಮಾಜಿ 'ಮಿಸ್ ಇಂಡಿಯಾ' ಸೆಲೀನಾ ಜೇಟ್ಲಿ ಸಂಭ್ರಮದಲ್ಲಿದ್ದಾರೆ. ಅವರ ಖುಷಿಗೆ ಕಾರಣ, 'ಶ್ರೀಮತಿ' ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿರುವುದು. ಹಿಂದಿಯ 'ಐತ್ ರಾಜ್' ಚಿತ್ರ ಕನ್ನಡಕ್ಕೆ 'ಶ್ರೀಮತಿ'ಯಾಗಿ ರೀಮೇಕ್ ಆಗಿರುವುದು ಗೊತ್ತಿರುವ ವಿಚಾರ.

'ಐತ್ ರಾಜ್' ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ನಟಿಸಿದ್ದರು. 'ಶ್ರೀಮತಿ'ಯಲ್ಲಿ ಸೆಲೀನಾ ಆ ಪಾತ್ರವನ್ನು ಪೋಷಿಸಿದ್ದಾರೆ. ಚಿತ್ರದ ನಾಯಕ ಸೂಪರ್ ಸ್ಟಾರ್ ಉಪೇಂದ್ರ. ''ಹೈದರಾಬಾದ್ ನಲ್ಲಿ ಇತ್ತೀಚೆಗೆ ಒಂದು ಹಂತದ ಚಿತ್ರೀಕರಣ ಮುಗಿಸಿದ್ದೇವೆ. ಮುಂದಿನ ತಿಂಗಳಿಂದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ನಂತರ ಚಿತ್ರೀಕರಣಕ್ಕೆ ದಕ್ಷಿಣ ಆಫ್ರಿಕಾಗೆ ತೆರಳಲಿದ್ದೇವೆ'' ಎಂದು ಸೆಲೀನಾ ವಿವರ ನೀಡಿದ್ದಾರೆ.

ನಟ ಉಪೇಂದ್ರ ಬಗ್ಗೆ ಸೆಲೀನಾ ಮಾತನಾಡುತ್ತಾ, ಅವರೊಬ್ಬ ಬಹುಮುಖ ಪ್ರತಿಭೆ. ಉತ್ತಮ ಮಾನವೀಯತೆಯುಳ್ಳ ವ್ಯಕ್ತಿ. ಅವರನ್ನು ನೋಡಿದರೆ ಅಮೀರ್ ಖಾನ್ ನೆನಪಿಸುತ್ತಾರೆ ಎನ್ನುತ್ತಾರೆ. ಪ್ರಸ್ತುತ ಸೆಲೀನಾ ಹಿಂದಿಯಲ್ಲಿ ಬ್ಯುಸಿಯಾಗಿದ್ದರೂ ಕನ್ನಡದಲ್ಲಿ ನಟಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಶ್ರೀಮತಿ ಚಿತ್ರಕ್ಕೆ ಸಹಿ ಹಾಕಿದ ಸೆಲೀನಾ ಜೇಟ್ಲಿ
ಹೈದರಾಬಾದ್‌ನಲ್ಲಿ ಉಪೇಂದ್ರ ಅವರ ಶ್ರೀಮತಿ
ಉಪೇಂದ್ರ ರಜನಿ ಚಿತ್ರದಲ್ಲಿ ಆರತಿ ಛಾಬ್ರಿಯಾ
ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಉಪೇಂದ್ರ
ಉಪೇಂದ್ರ ಭೀಮೂಸ್... ವೆಬ್ ಸೈಟ್ ಗೆ ಚಾಲನೆ
ರಮ್ಯಾ ಮತ್ತು ಬಾಬು ನಡುವೆ ಬ್ಯಾಂಗ್ ಬ್ಯಾಂಗ್!

Please Wait while comments are loading...