»   » ನೃತ್ಯ ನಿರ್ದೇಶಕರಾಗಿ ಯೋಗರಾಜ್ ಭಟ್

ನೃತ್ಯ ನಿರ್ದೇಶಕರಾಗಿ ಯೋಗರಾಜ್ ಭಟ್

Posted By:
Subscribe to Filmibeat Kannada

ನೃತ್ಯ ನಿರ್ದೇಶಕರ ಮೇಲೆ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ನಂಬಿಕೆ ಕಳೆದುಕೊಂಡಂತಿದೆ. 'ಪಂಚರಂಗಿ' ಚಿತ್ರದ ಒಂದು ಹಾಡಿಗೆ ಅವರೆ ನೃತ್ಯ ನಿರ್ದೇಶನ ಮಾಡಿರುವುದೇ ಈ ಅನುಮಾನಕ್ಕೆ ಕಾರಣವಾಗಿದೆ. ಯೋಗರಾಜ್ ಭಟ್ ನೃತ್ಯ ನಿರ್ದೇಶನ ಮಾಡುವ ಮೂಲಕ ಹೊಸ ಅವತಾರ ಎತ್ತಿದ್ದಾರೆ.

ಜಯಂತ ಕಾಯ್ಕಿಣಿ ಸಾಹಿತ್ಯವಿರುವ ಹಾಡಿಗೆ ಸ್ವತಃ ಯೋಗರಾಜ್ ಭಟ್ ನೃತ್ಯ ನಿರ್ದೇಶನ ಮಾಡಿ ಗೆದ್ದಿದ್ದಾರೆ. ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಹಾಡಿನ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಭಟ್ ನೃತ್ಯ ನಿರ್ದೇಶನಕ್ಕೆ ದಿಗಂತ್ ಮತ್ತು ನಿಧಿ ಸುಬ್ಬಯ್ಯ ಹೆಜ್ಜೆ ಹಾಕಿದ್ದಾರೆ.

"ಉಡಿಸುವೆ ಬೆಳಕಿನ ಸೀರೆಯ - ಚೂರು ಸಹಕರಿಸು..." ಎಂಬ ಹಾಡು ನೃತ್ಯ ನಿರ್ದೇಶಕಿ ಮಯೂರಿ ಉಪಾಧ್ಯ ಅವರಿಗೆ ಭಟ್ ಕೆಲವು ಸೂಚನೆಗಳನ್ನು ಕೊಟ್ಟರು. ನಿರ್ದೇಶಕರ ಆಶಯಕ್ಕೆ ತಕ್ಕಂತೆ ಹಾಡಿನ ನೃತ್ಯವಿರಬೇಕು. ನೃತ್ಯ ನಿರ್ದೇಶಕರಿಗೆ ಇದು ಸವಾಲಿದ್ದಂತೆ. ಹಾಗಾಗಿ ಈ ಹಾಡಿಗೆ ನಾನೇ ನೃತ್ಯ ನಿರ್ದೇಶನ ಮಾಡಿದ್ದೇನೆ ಎನ್ನುತ್ತಾರೆ ಯೋಗರಾಜ್ ಭಟ್.

ಚಿತ್ರಕ್ಕೆ ಮನೋಮೂರ್ತಿ ಅವರ ಸಂಗೀತ ಇದೆ. ಚಿತ್ರದ ತಾರಾಬಳಗದಲ್ಲಿ ದಿಗಂತ್, ನಿಧಿಸುಬ್ಬಯ್ಯ, ಅನಂತನಾಗ್, ರಾಜುತಾಳಿಕೋಟೆ, ಪವನ್‌ಕುಮಾರ್, ಸುಂದರ್‌ರಾಜ್, ಪದ್ಮಜಾರಾವ್, ಸುಧಾಬೆಳವಾಡಿ, ರಮ್ಯಾಬರ್ನಾ, ನಾಗೇಂದ್ರ ಶಾ, ಸತೀಶ್, ಸೌಮ್ಯ, ನಾಗರಾಜ್ ಅರಸು, ಸುಧಾಕರ್(ರಾಕ್‌ಲೈನ್ ಪ್ರೊಡಕ್ಷನ್ಸ್) ಮುಂತಾದವರಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada