»   »  ಸಿನಿಮಾ ಪ್ರದರ್ಶನ ವೇಳೆಯಲ್ಲಿ ಮತ್ತೆ ಬದಲಾವಣೆ

ಸಿನಿಮಾ ಪ್ರದರ್ಶನ ವೇಳೆಯಲ್ಲಿ ಮತ್ತೆ ಬದಲಾವಣೆ

Subscribe to Filmibeat Kannada
Film timings changed again
ಮೇ 29ರಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ಸಿನಿಮಾಗಳ ಪ್ರದರ್ಶನ ವೇಳೆ ಮತ್ತೊಮ್ಮೆ ಬದಲಾಗಿದೆ. ಸಿನಿಮಾ ಪ್ರೇಕ್ಷಕರ ಅನುಕೂಲಕ್ಕೆ ಈ ಬದಲಾವಣೆ ಮಾಡಲಾಗಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಹೊಸ ಬದಲಾದ ಸಮಯದ ಪ್ರಕಾರ ಬೆಳಗಿನ ಪ್ರದರ್ಶನ 11ಗಂಟೆಗೆ, ಮ್ಯಾಟಿನಿ 2, ಸಂಜೆ ಆಟ 5 ಗಂಟೆಗೆ ಮತ್ತು ರಾತ್ರಿ ಆಟ 8 ಗಂಟೆಗೆ.

ಕರ್ನಾಟಕ ಚಲನಚಿತ್ರ ಮಂಡಳಿ ಅಂತಿಮಗೊಲಿಸಿದ್ದ ಈ ಹಿಂದಿನ ಸಮಯಕ್ಕೆ ಕೆಲವು ನಿರ್ಮಾಪಕರು ಅಪಸ್ವರ ಎತ್ತಿದ್ದರು. ಮೇ 22ನೇ ತಾರೀಕಿನಿಂದ 11.15, 2.30, 6.15 ಮತ್ತು ರಾತ್ರಿ 9 ಗಂಟೆಗೆ ಸಿನಿಮಾ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಿಸಿತ್ತು. ಆದರೆ ನಿರ್ಮಾಪಕರ ಹಿತ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಂಡಳಿಯ ಕಾರ್ಯದರ್ಶಿ ಥಾಮಸ್ ಡಿಸೋಜ ಹೇಳಿದ್ದಾರೆ.

ಈ ಹಿಂದೆ ಪ್ರಕಟಿಸಿದ್ದ ಬೆಳಗಿನ ಹಾಗೂ ಮಧ್ಯಾಹ್ನದ ಪ್ರದರ್ಶನ ವೇಳೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಸಂಜೆ 6 ಗಂಟೆಗೆ ನಿಗದಿಯಾಗಿದ್ದ ಪ್ರದರ್ಶನ ವೇಳೆ ಈಗ ಸಂಜೆ 5 ಗಂಟೆಗೆ ಬದಲಾಗಿದೆ. ರಾತ್ರಿ 8.30ಕ್ಕೆ ನಿಗದಿಯಾಗಿದ್ದ ರಾತ್ರಿ ಆಟ ಈಗ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada