»   »  ಮಾತಿನ ಮನೆಯಲ್ಲಿಗಣೇಶನ ಉಲ್ಲಾಸ ಉತ್ಸಾಹ!

ಮಾತಿನ ಮನೆಯಲ್ಲಿಗಣೇಶನ ಉಲ್ಲಾಸ ಉತ್ಸಾಹ!

Posted By:
Subscribe to Filmibeat Kannada
Ganesh in Ullasa Utsaha
ಕಾಂತಿ ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಉಲ್ಲಾಸ ಉತ್ಸಾಹ' ಚಿತ್ರಕ್ಕೆ ನಗರದ ಆಕಾಶ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ನಿರ್ಮಾಪಕ ಬಿ.ಪಿ.ತ್ಯಾಗರಾಜ್ ತಿಳಿಸಿದ್ದಾರೆ.

ಕರುನಾಡ ಪ್ರತಿಭೆಗಳಾದ ಯಶೋ ಸಾಗರ್ ಹಾಗೂ ಸ್ನೇಹ ಉಲ್ಲಾಳ್ ನಾಯಕ-ನಾಯಕಿಯರಾಗಿ ಅಭಿನಯಿಸಿದ 'ಉಲ್ಲಾಸಂಗ ಉತ್ಸಾಹಂಗ' ತೆಲುಗಿನಲ್ಲಿ ಯಶಸ್ವಿಯಾದ ಚಿತ್ರ. ಇದೇ ಚಿತ್ರ ಕನ್ನಡದಲ್ಲಿ 'ಉಲ್ಲಾಸ ಉತ್ಸಾಹ' ಶೀರ್ಷಿಕೆಯಿಂದ ಹೊರ ಹೊಮ್ಮುತ್ತಿದ್ದು ಖ್ಯಾತ ನಟ ಗಣೇಶ್ ಹಾಗೂ ಬೆಡಗಿ ಯಾಮಿ ಗೌತಮಿ ಚಿತ್ರದ ನಾಯಕ-ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಖ್ಯಾತನಾಮರ ಬಳಿ ಸಹಾಯಕರಾಗಿದ್ದ ದೇವರಾಜ್ ಪಾಲನ್ ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ಹದಿಹರೆಯದ ಹುಡುಗರ ಹುಡುಗಾಟ ಹಾಗೂ ಆ ಹುಡುಗಾಟದಲ್ಲಿ ಹುಟ್ಟುವ ಪ್ರೀತಿ, ಅದರ ಪೋಷಣೆ ಹೀಗೆ ಹಲವು ಸ್ವಾರಸ್ಯಕರ ಘಟನೆಗಳನ್ನೊಳಗೊಂಡ ಈ ಚಿತ್ರಕ್ಕೆ ಕರುಣಾಕರನ್ ಕತೆ ಬರೆದಿದ್ದಾರೆ. ಜಿ.ವಿ.ಪ್ರಕಾಶ್‌ಕುಮಾರ್ ಸಂಗೀತ, ಜಿ.ಎಸ್.ವಿ.ಸೀತಾರಾಂ ಛಾಯಾಗ್ರಹಣ, ಪಿ.ಆರ್.ಸೌಂದರ್‌ರಾಜ್ ಸಂಕಲನ, ಇಮ್ರಾನ್ ನೃತ್ಯ, ರವಿಶಂಕರ್, ದತ್ತಣ್ಣ ನಿರ್ಮಾಣ ನಿರ್ವಹಣೆಯಿದೆ. ಗಣೇಶ್, ಯಾಮಿ ಗೌತಮಿ, ರಂಗಾಯಣ ರಘು, ಸಾಧು ಕೋಕಿಲಾ, ತುಳಸಿ ಶಿವಮಣಿ, ಪ್ರೀತಿ ಚಂದ್ರಶೇಖರ್, ದೊಡ್ಡಣ್ಣ ಮುಂತಾದವರ ತಾರಾಬಳಗವನ್ನು ಚಿತ್ರ ಹೊಂದಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಯಶಸ್ಸಿನ ಸಾಗರದಲ್ಲಿ ಪಲಾಯನವಾದ ಪ್ರತಿಭೆ
ಗಣೇಶ್ ರಿಮೇಕ್ ಚಿತ್ರಕ್ಕೆ ಆಮದು ಬೆಡಗಿ ಯಾಮಿ
ಗಣೇಶನ ಸದ್ಯದ ನಂಬರ್ ನಾಟ್ ರೀಚಬಲ್!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada