»   »  ಜಗ್ಗೇಶ್ ಅಭಿನಯದಲ್ಲಿ 'ಐತಲಕ್ಕಡಿ'

ಜಗ್ಗೇಶ್ ಅಭಿನಯದಲ್ಲಿ 'ಐತಲಕ್ಕಡಿ'

Subscribe to Filmibeat Kannada

ಬಹು ತಾರಾಗಣದೊಂದಿಗೆ ಅದ್ದೂರಿಯಾಗಿ ಮೂಡಿ ಬರುತ್ತಿರುವ ಚಿತ್ರ 'ಐತಲಕ್ಕಡಿ. 'ಕನ್ನಡ ಚಿತ್ರರಂಗದ ಖ್ಯಾತ ನಟರು ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಸಿರಿವಂತಿಕೆ ಇಮ್ಮಡಿಗೊಳ್ಳಲಿದೆ ಎಂದು ನಿರ್ದೇಶಕ ಜೆ.ಜಿ.ಕೃಷ್ಣ ತಿಳಿಸಿದ್ದಾರೆ. ಕನ್ನಡದ ಮಟ್ಟಿಗೆ ಇದು ದಾಖಲೆಯೇ ಸರಿ.

ತಮ್ಮ ಅಮೋಘ ಅಭಿನಯದಿಂದ ಅಭಿಮಾನಿಗಳ ಹೃದಯಕ್ಕೆ ಹತ್ತಿರರಾಗಿರುವ ನವರಸ ನಾಯಕ ಜಗ್ಗೇಶ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದ ನಿರ್ವಹಣೆ ಮಾಡುತ್ತಿದ್ದಾರೆ.ಸಾಹಿತಿ ತುಷಾರ್ ರಂಗನಾಥ್ ಬರೆದಿರುವ 'ಐತಲಕ್ಕಡಿ ಐತಲಕ್ಕಡಿ ಐತಲಕ್ಕಡಿ - ಹೈ ಕಳ್ಳಸ್ವಾಮಿ, ಒಳ್ಳೆಸ್ವಾಮಿ ಕಿರಿಸ್ವಾಮಿ, ಡಲ್‌ಸ್ವಾಮಿ, ಗಾಂಜಾಸ್ವಾಮಿ ಎಂಬ ಗೀತೆಗೆ ಜಗ್ಗೇಶ್ ಹೆಜ್ಜೆ ಹಾಕಿದ್ದಾರೆ.

ಮಿನರ್ವ ಮಿಲ್ ಆವರಣದಲ್ಲಿ ಚಿತ್ರೀಕರಣಗೊಂಡ ಈ ಗೀತೆಗೆ ಫೈವ್‌ಸ್ಟಾರ್ ಗಣೇಶ್ ನೃತ್ಯ ಸಂಯೋಜಿಸಿದ್ದಾರೆ.ಈ ಹಾಸ್ಯ ಭರಿತ ಕುತೂಹಲ ಕಥಾನಕವನ್ನು ಚಿತ್ರಕುಟೀರ ಸಂಸ್ಥೆ ನಿರ್ಮಿಸುತ್ತಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವ ಜೆ.ಜಿ.ಕೃಷ್ಣ ಅವರು ಚಿತ್ರಕ್ಕೆ ಛಾಯಾಗ್ರಹಣ ನೀಡುವುದರೊಂದಿಗೆ ನಿರ್ದೇಶನವನ್ನು ಮಾಡುತ್ತಿದ್ದಾರೆ.

ಸಾಧುಕೋಕಿಲಾರ ಸಂಗೀತ ಸಂಯೋಜನೆ, ತುಷಾರ ರಂಗನಾಥ್ ಸಂಭಾಷಣೆ, ಆರ್.ಡಿ.ರವಿ ಸಂಕಲನವಿರುವ 'ಐತಲಕ್ಕಡಿ ಚಿತ್ರದ ತಾರಾಬಳಗದಲ್ಲಿ ಜಗ್ಗೇಶ್, ರಂಗಾಯಣ ರಘು, ಬುಲೆಟ್ ಪ್ರಕಾಶ್, ಸಾಧುಕೋಕಿಲಾ, ನೀತು, ಶೋಭ್‌ರಾಜ್, ಜೈಜಗದೀಶ್, ಕೋಮಲ್, ಶರಣ್, ಗಿರಿಜಾ ಲೋಕೇಶ್, ಪದ್ಮಜಾರಾವ್, ಕರಿಬಸವಯ್ಯ, ಮೋಹನ್ ಜುನೇಜಾ, ಬ್ಯಾಂಕ್ ಜನಾರ್ದನ್, ಎಂ.ಎಸ್.ಉಮೇಶ್, ಶಂಕರ್‌ರಾವ್, ದೊಡ್ಡಣ್ಣ, ಹರೀಶ್‌ರಾಯ್, ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada