»   »  ಮಠ ಡಿವಿಡಿ ಸೂಪರ್ ಡೂಪರ್ ಹಿಟ್

ಮಠ ಡಿವಿಡಿ ಸೂಪರ್ ಡೂಪರ್ ಹಿಟ್

Subscribe to Filmibeat Kannada

ಕನ್ನಡ ಚಿತ್ರ ಉದ್ಯಮದಲ್ಲಿ ಏನೆಲ್ಲಾ ವಂಡರ್‌ಗಳಾಗುತ್ತವೆ ನೋಡಿ. ಮಠ ಚಿತ್ರದ ಮೂರು ಲಕ್ಷಕ್ಕೂ ಹೆಚ್ಚು ಡಿವಿಡಿಗಳು ಖರ್ಚಾಗಿವೆಯಂತೆ!

'ಮಠ' ಸಿನಿಮಾ ತೆರೆಕಂಡಾಗ ಮೊದಲು ಸಿಕ್ಕಿದ ಪ್ರತಿಕ್ರಿಯೆ ಡಲ್ಲಾಗಿತ್ತು. ಆಮೇಲೆ ಅದರ ಕ್ಯಾನ್‌ವಾಸನ್ನು ಅರ್ಥ ಮಾಡಿಕೊಂಡವರು ಭಿನ್ನ ಸಿನಿಮಾ ಅಂತ ಹೊಗಳಿದರು. ಸಂಭಾಷಣೆಯ ಚುರುಕುತನ ಇಷ್ಟಪಟ್ಟವರ ಸಂಖ್ಯೆಯೂ ದೊಡ್ಡದು. ಹೀಗೆ ಬಾಯಿಮಾತಿನ ಪ್ರಚಾರ ಪಡೆದುಕೊಂಡ ಮಠದ ಡಿವಿಡಿ ಮಾರಾಟ ಬಲು ಜೋರಾಗಿದೆ. ಮೊದಲು ನಲವತ್ತೈದು ಐವತ್ತು ರೂಪಾಯಿಗೆ ಒಂದು ಡಿವಿಡಿ ಸಿಗುತ್ತಿತ್ತು. ಈಗ ಅದರ ಬೆಲೆ ಎಪ್ಪತ್ತು ರೂಪಾಯಿಗೆ ಏರಿದೆ.

ಜಗ್ಗೇಶ್ ಚಿತ್ರಗಳಿಗೆ ಒಳ್ಳೆಯ ಟೀವಿ ರೈಟ್ಸ್ ಇದೆ ಎಂಬುದು ಗೊತ್ತಿತ್ತು. ಡಿವಿಡಿ ಮಾರುಕಟ್ಟೆಯೇ ಜೋರಾಗಿದೆ ಎಂಬುದು ಈಗ ಬಹಿರಂಗವಾಗಿರುವ ಸತ್ಯ. ಅಂದಹಾಗೆ, ಮಠ ಚಿತ್ರದ ಡಿವಿಡಿ ಹಕ್ಕನ್ನು ಆನಂದ್ ಆಡಿಯೋದವರು ಬರೀ ಮೂರು ಲಕ್ಷ ಕೊಟ್ಟು ಖರೀದಿಸಿದ್ದರು. ಅಲ್ಲಿಗೆ, ಅವರಿಗೆ ಬಂದಿರುವ ಲಾಭದ ಪರ್ಸೆಂಟೇಜು ನಿರ್ಮಾಪಕರಿಗೆ ಸಿಕ್ಕಿರುವ ಲಾಭದ ಪರ್ಸೆಂಟೇಜಿಗಿಂತ ಜಾಸ್ತಿಯಾಯಿತು. ಇದಪ್ಪಾ ವ್ಯಾಪಾರ ಅಂದರೆ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada