»   » ಜೋಗಯ್ಯ ಮೊದಲ ವಾರದ ಗಳಿಕೆ 15.44 ಕೋಟಿ

ಜೋಗಯ್ಯ ಮೊದಲ ವಾರದ ಗಳಿಕೆ 15.44 ಕೋಟಿ

Posted By:
Subscribe to Filmibeat Kannada

ಶಿವರಾಜ್ ಕುಮಾರ್ 100ನೇ ಚಿತ್ರ ಬಾಕ್ಸಾಫೀಸಲ್ಲಿ ಸದ್ದು ಮಾಡಿದೆ. ಜೋಗಯ್ಯ ಒಂದೇ ವಾರದಲ್ಲಿ ರು.15.44 ಕೋಟಿ ಗುಡ್ಡೆ ಹಾಕಿದ್ದಾನೆ. 200 ಪ್ಲಸ್ ಚಿತ್ರಗಳಲ್ಲಿ ಜೋಗಯ್ಯ ಗಟ್ಟಿಯಾಗಿ ಕಚ್ಚಿಕೊಂಡಿದ್ದಾನೆ. ಒಂದೇ ವಾರದಲ್ಲಿ ಜೋಗಯ್ಯ ಗಳಿಕೆ ಇಷ್ಟಿದೆ ಎಂದು ಚಿತ್ರದ ನಿರ್ಮಪಕಿ ರಕ್ಷಿತಾ ಪ್ರೇಮ್ ಸ್ಪಷ್ಟಪಡಿಸಿದ್ದಾರೆ.

ಮೊದಲ ದಿನ ಜೋಗಯ್ಯ ಬಾಕ್ಸಾಫೀಸಲ್ಲಿ ರು.3.75 ಕೋಟಿ ಬಾಚುವ ಮೂಲಕ ಜೋರಾಗಿಯೇ ಸದ್ದು ಮಾಡಿದ್ದ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ದಾಖಲೆ ಎನ್ನಬಹುದು. ನಂತರದ ದಿನಗಳಲ್ಲಿ ಜೋಗಯ್ಯ ಜ್ವರ ಕಡಿಮೆಯಾಗಿ ಕಲೆಕ್ಷನ್ ಶೇ.30 ರಿಂದ 40ಕ್ಕೆ ಇಳಿಯಿತು.

ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರ ಕ್ರಮವಾಗಿ ಜೋಗಯ್ಯ ರು.2.44 ಕೋಟಿ ಹಾಗೂ ರು.2.88 ಕೋಟಿ ಬಾಚಿದ್ದಾನೆ. ಆದರೆ ನಿರೀಕ್ಷೆಯಷ್ಟು ಜೋಗಯ್ಯ ದುಡ್ಡು ಮಾಡಿಲ್ಲ ಎಂಬ ಅಂಶ ಶಿವಣ್ಣ ಅಭಿಮಾನಿಗಳಲ್ಲಿ ಕೊಂಚ ನಿರಾಸೆ ಮೂಡಿಸಿದೆ. ಜೋಗಯ್ಯನ ವಾರದ ಗಳಿಕೆ ವಿವರಗಳು ಹೀಗಿವೆ.

ಶುಕ್ರವಾರ:3.75 Crores
ಶನಿವಾರ:2.44 Crores
ಭಾನುವಾರ :2.88 Crores
ಸೋಮವಾರ :2.07 Crores
ಮಂಗಳವಾರ :1.89 Crores
ಬುಧವಾರ:1.23 Crores
ಗುರುವಾರ :1.18 Crores (ದಟ್ಸ್‌ಕನ್ನಡ ಸಿನಿವಾರ್ತೆ)

English summary
Shivaraj Kumar 100th movie Jogayya has continued to rock at the Box Office. The earnings of the film is going on steady in 200 plus theaters. Prem-Rakshita's flick has grossed more than Rs 15 crores at the collection centers in its opening week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada