»   » ಗಾಯಕ ಸಿ ಅಶ್ವಥ್ ಗೆ ಅಂತಿಮ ನಮನ

ಗಾಯಕ ಸಿ ಅಶ್ವಥ್ ಗೆ ಅಂತಿಮ ನಮನ

Posted By:
Subscribe to Filmibeat Kannada
Last Respects for singer C Ashwath
ಗಾಯಕ ಸಿ ಅಶ್ವಥ್ ಅವರ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ. ಮಂಗಳವಾರ ಮಧ್ಯಾಹ್ನ 3ಗಂಟೆಯಿಂದ ಸಾರ್ವಜನಿಕರು ಅಶ್ವಥ್ ಅವರ ಪಾರ್ಥೀವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.

ಯಶವಂತಪುರ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಿಂದ ಅವರ ಪಾರ್ಥೀವ ಶರೀರವನ್ನು ಎನ್ ಆರ್ ಕಾಲೋನಿಯ ಅವರ ಸ್ವಗೃಹಕ್ಕೆ ಕೊಂಡೊಯ್ಯಲಾಯಿತು. ಆನಂತರ ಸಂಸ ಬಯಲು ರಂಗ ಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿದೆ.ಇಂದು ಸಂಜೆ 5ಗಂಟೆಗೆ ಅಶ್ವಥ್ ಅವರ ಅಂತಿಮ ಸಂಸ್ಕಾರವನ್ನು ಬನಶಂಕರಿಯಲ್ಲಿರುವ ಚಿತಾಗಾರದಲ್ಲಿ ನೆರೆವೇರಿಸಲಾಗುತ್ತದೆ ಎಂದು ಅಶ್ವಥ್ ಕುಟುಂಬ ಮೂಲಗಲು ತಿಳಿಸಿವೆ.

ಸುಗಮ ಸಂಗೀತ ಚೇತನ ಅಶ್ವಥ್ ಅವರ ನಿಧನಕ್ಕೆ ಗಣ್ಯರು ಕಂಬನಿ ಗರೆದಿದ್ದಾರೆ. ಅಶ್ವಥ್ ಅವರ ನಿಧನ ಹಿನ್ನೆಲೆಯಲ್ಲಿ ವಿಧಾನ ಮಂಡಲ ಕಲಾಪವನ್ನು ಬುಧವಾರಕ್ಕೆಮುಂದೂಡಲಾಗಿದೆ. ಏತನ್ಮಧ್ಯೆ ಸಂಗೀತ ಅಕಾಡೆಮಿಯನ್ನು ಕಾಲೇಜಾಗಿ ಪರಿವರ್ತಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಣಿ ತಿಳಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada