»   » ಜುಲೈನಲ್ಲಿ ಐಂದ್ರಿತಾ ರೇ ಮನಸಿನ ಮಾತು

ಜುಲೈನಲ್ಲಿ ಐಂದ್ರಿತಾ ರೇ ಮನಸಿನ ಮಾತು

Posted By:
Subscribe to Filmibeat Kannada

ಅಜಯ್ ಹಾಗೂ ಐಂದ್ರಿತಾ ರೇ ನಾಯಕ/ನಾಯಕಿಯರಾಗಿ ಅಭಿನಯಿಸಿರುವ 'ಮನಸಿನ ಮಾತು' ಚಿತ್ರದ ಚಿತ್ರೀಕರಣ ಕುಲು ಮನಾಲಿ ಸೇರಿದಂತೆ ಭಾರತದ ಇತರ ರಮಣೀಯ ತಾಣಗಳಲ್ಲಿ ನಡೆದಿದೆ.ಮಾನಸ ಚಿತ್ರ ಲಾಂಛನದಲ್ಲಿ ಡಿ.ಕೆ.ರಾಮಕೃಷ್ಣ ರವರು ನಿರ್ಮಿಸಿರುವ ಈ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಜುಲೈನಲ್ಲಿ ತೆರೆ ಕಾಣಲಿದೆ.

ಅನಂತರಾಜು 'ಮನಸಿನ ಮಾತು' ಚಿತ್ರಕ್ಕೆ ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ. ಸಿ.ರಾಜಶೇಖರ್ ಸಹ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಸಾಧುಕೋಕಿಲಾ ಅವರ ಸಂಗೀತವಿದೆ. ಎಂ.ಆರ್.ಸೀನು ಛಾಯಾಗ್ರಹಣ, ರಾಂನಾರಾಯಣ್ ಸಂಭಾಷಣೆ, ಅನಿಲ್.ಬಿ.ಕೃಷ್ಣ ನಿರ್ಮಾಣ ನಿರ್ವಹಣೆಯಿದೆ.

ಕಳೆದಸಾಲಿನ ಯಶಸ್ವಿ ಚಿತ್ರಗಳಲೊಂದಾದ 'ಮಸ್ತ್ ಮಜಾ ಮಾಡಿ' ಚಿತ್ರವನ್ನು ನಿರ್ದೇಶಿಸಿದ್ದ ಅನಂತರಾಜು ಚಿತ್ರಕತೆ ಬರೆದು ನಿರ್ದೇಶಿಸುತ್ತಿದ್ದಾರೆ. ಅಜಯ್, ಅಂದ್ರಿತಾ ರೇ, ಅವಿನಾಶ್, ಸಾಧು ಕೋಕಿಲಾ, ತಾರಾ, ಲೋಹಿತ್ ಮುಂತಾದವರ ತಾರಾಬಳಗವಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada