»   »  ಪುನೀತ್ ರಿಂದ ರಾಜ್ ಕುರಿತು ಅಪರೂಪ ಪುಸ್ತಕ

ಪುನೀತ್ ರಿಂದ ರಾಜ್ ಕುರಿತು ಅಪರೂಪ ಪುಸ್ತಕ

Posted By:
Subscribe to Filmibeat Kannada
ವರನಟ ಡಾ.ರಾಜ್ ಕುಮಾರ್ ಕುರಿತ ಆಂಗ್ಲ ಪುಸ್ತಕಕ್ಕೆ 'Person behind Personalities' ಎಂದು ಪುನೀತ್ ರಾಜ್ ಕುಮಾರ್ ಹೆಸರಿಟ್ಟಿದ್ದಾರೆ. ಈ ಪುಸ್ತಕ ರಾಜ್ ಕುಮಾರ್ ಅವರ 2500 ಕ್ಕೂ ಹೆಚ್ಚು ಅಪರೂಪದ ಚಿತ್ರಗಳನ್ನು ಒಳಗೊಂಡಿದೆಯಂತೆ.

ತಮ್ಮ ಹಿರಿ ಮಗಳು ದೃತಿ (ಎರಡನೇ ಮಗಳು ವಂದಿತಾ) ಹುಟ್ಟುಹಬ್ಬ್ಬದ ಸಂದರ್ಭದಲ್ಲಿ(ಏ.22) ಈ ಪುಸ್ತಕದ ಬಗ್ಗೆ ಪುನೀತ್ ವಿವರ ನೀಡಿದ್ದರು. ಈ ಪುಸ್ತಕದವು ಬೆರಳೆಣಿಕೆಯಷ್ಟು ಲೇಖನಗಳನ್ನು ಮಾತ್ರ ಒಳಗೊಂಡಿದ್ದ್ದು ಉಳಿದಂತೆ ಅಣ್ಣಾವ್ರ ಅಪರೂಪದ ಚಿತ್ರಗಳನ್ನು ಹೊಂದಿದೆ ಎಂದು ಪುನೀತ್ ತಿಳಿಸಿದ್ದಾರೆ.

ಅಂದಹಾಗೆ ಈ ಅಪರೂಪದ ಪುಸ್ತಕ 2009ನೇ ಸಾಲಿನ ನವೆಂಬರ್ 1ರಂದು ಅಂದರೆ ಕನ್ನಡ ರಾಜ್ಯೋತ್ಸವ ದಿನ ಬಿಡುಗಡೆಯಾಗಲಿದೆ. ಪುಸ್ತಕ ಬಿಡುಗಡೆ ದಿನ ಕನ್ನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಮೂವರು ಮಹನೀಯರನ್ನ್ನು ರಾಜ್ ಕುಟುಂಬ ಸನ್ಮಾನಿಸಲಿದೆ. ಈ ರೀತಿಯ ಪುಸ್ತಕ ಕರ್ನಾಟದಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಚಿತ್ರರಂಗದ ಗಣ್ಯರ ಬಗ್ಗೆ ಕೆಲವು ಅಪರೂಪದ ಲೇಖನಗಳನ್ನು ಪುಸ್ತಕ ಒಳಗೊಂಡಿದೆ ಎನ್ನುತ್ತಾರೆ ಪುನೀತ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ರಾಜ್ ಮುಖ್ಯಮಂತ್ರಿಯಾಗಬಹುದಿತ್ತು:ಜಿಟಿಡಿ
ನನ್ನ ಒಲುಮೆಯ ವ್ಯಕ್ತಿ ಡಾ.ರಾಜ್: ಅಮಿತಾಬ್
ರಾಜ್ ಪುಣ್ಯಭೂಮಿಯಲ್ಲಿ ಅಮೃತ ಮಹೋತ್ಸವ
ಬಂಗಾರದ ಮನುಷ್ಯ ಡಾ.ರಾಜ್ ಹುಟ್ಟುಹಬ್ಬ
ನೆನಪಿನಂಗಳದಲ್ಲಿ ಡಾ|ರಾಜ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada