For Quick Alerts
  ALLOW NOTIFICATIONS  
  For Daily Alerts

  ಜಾಕಿ ಪುನೀತ್ ಜೊತೆ ಅಭಿಮಾನಿಗಳ 'ಸಂಗಮ'

  By Mahesh
  |

  ಸಾಮಾನ್ಯವಾಗಿ ಚಿತ್ರದ ರೆಸ್ಪಾನ್ಸ್ ಹೇಗಿದೆ ಎಂದು ಹೀರೋಗಳು ಫೋನ್ ಮಾಡಿ ಕೇಳುತ್ತಾರೆ. ಕೆಲ ಹೀರೋಗಳು ಸಿನಿಮಾ ಮುಗಿಸಿದ ಮೇಲೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಕಮ್ಮಿ. ಸಿನಿಮಾ ಫಸ್ಟ್ ಷೋ ಬಿಟ್ಟರೆ ನಂತರ ಥಿಯೇಟರ್ ಕಡೆ ಹೀರೋಗಳು ಕಾಣಿಸಿಕೊಳ್ಳುವುದು ಅಪರೂಪ.

  ಆದರೆ, ಪುನೀತ್ ರಾಜ್ ಕುಮಾರ್ ಅಭಿಮಾನಿಗಳನ್ನು ನೋಡುವ ಕಾತುರದಿಂದ ಇಂದು ಸಂಗಮ್ ಥಿಯೇಟರ್ ಅನ್ನು ಹೊಕ್ಕೇ ಬಿಟ್ಟರು. ಈ ಅನಿರೀಕ್ಷಿತ ಭೇಟಿಯಿಂದ ಉಂಟಾದ ಸಂತೋಷವನ್ನು ಹೇಗೆ ವ್ಯಕ್ತಪಡಿಸಬೇಕೆಂದು ತಿಳಿಯದ ಪ್ರೇಕ್ಷಕ ಪ್ರಭುಗಳು ಕೆಲಕಾಲ ಮೂಕ ವಿಸ್ಮಿತರಾಗಿದ್ದರು. ನಂತರ ಬೆಲ್ಲಕ್ಕೆ ಇರುವೆ ಮುತ್ತುವಂತೆ ಮುತ್ತುರಾಜನ ಕುವರನೆಡೆಗೆ ಧಾವಿಸಿದರು.

  ಪುನೀತ್ ನೋಡುವ ಆಸೆಯಲ್ಲಿ ಒಮ್ಮೆಗೆ ಎಲ್ಲರೂ ನುಗ್ಗಿದ ಪರಿಣಾಮ, ನೂಕಾಟ, ತಳ್ಳಾಟ ಉಂಟಾಯಿತು. ಪೊಲೀಸರು ಇದೇ ಚಾನ್ಸ್ ಎಂದು ಲಘು ಲಾಠಿ ಪ್ರಹಾರ ಕೂಡಾ ಮಾಡಿ ಜನರನ್ನು ತಕ್ಕಮಟ್ಟಿಗೆ ನಿಯಂತ್ರಿಸಿದರು. ಎಷ್ಟೇ ಗಲಾಟೆ, ಗದ್ದಲವಾದರೂ ಪುನೀತ್ ಮಾತ್ರ ತಾಳ್ಮೆಯಿಂದ ಅಭಿಮಾನಿಗಳ ಅಭಿಪ್ರಾಯ ಸಂಗ್ರಹಿಸಿ, ಅವರ ಶುಭ ಹಾರೈಕೆ ಸ್ವೀಕರಿಸಿದರು. ಅವರ ಜೊತೆ ಬೆರೆತು ಕೆಲಕಾಲ ತಾವು ಸಿನಿಮಾ ಹೀರೋ ಎಂಬುದನ್ನು ಮರೆತು ನಲಿದರು. ಅಭಿಮಾನಿಗಳಿಗೆ ಲಾಠಿ ಬೀಸಿದ್ದ ಪೊಲೀಸರು ಕೊನೆಗೆ ಪುನೀತ್ ಗೆ ಟಾಟಾ ಮಾಡಿ ಬೀಳ್ಕೊಟ್ಟರು.

  ನಂತರ ಮಾತನಾಡಿದ ಪುನೀತ್, 'ಇಡೀ ಕರ್ನಾಟಕ ಜನತೆಗೆ ನನ್ನ ಧನ್ಯವಾದಗಳು. ಜನ ಸಿನಿಮಾ ನೋಡಿ ಇಷ್ಟಪಟ್ಟಿದ್ದಾರೆ ಅದೇ ದೊಡ್ಡ ಸಂತೋಷ. ರಾಘಣ್ಣ, ಸೂರಿ ಸಾರ್ ಅವರ ನಿರ್ದೇಶನದಂತೆ ನಾನು ನಟಿಸಿದ್ದೀನಿ. ಅಪ್ಪಾಜಿ ಹೇಳಿದಂತೆ ಪ್ರೇಕ್ಷಕರು ತೃಪ್ತರೋಗೋದು ಮುಖ್ಯ. ಆದರೆ, ನಾವು ಪಡೋ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗೋದು. ಇವತ್ತು ಮೈಸೂರು ಜನರ ಅಭಿಮಾನದಿಂದ ಸಕತ್ ಖುಷ್ ಆಗಿದ್ದೀನಿ' ಎಂದು ತಮ್ಮ ಸಂತಸ ಹಂಚಿಕೊಂಡರು.

  ಬಾಕ್ಸಾಫೀಸ್ ನಲ್ಲಿ ಹಿಟ್ : ಮೈಸೂರಿನಲ್ಲಿ ಷೂ ಷೋರೂಂ ಉದ್ಘಾಟನೆಗಾಗಿ ಪುನೀತ್ ರಾಜ್ ಕುಮಾರ್ ಆಗಮಿಸಿದ್ದರು. ಪುನೀತ್ , ಭಾವನಾ(ಮಲೆಯಾಳಂ), ಹರ್ಷಿಕಾ ಪೂಣಚ್ಚ, ರಂಗಾಯಣ ರಘು ಮತ್ತಿತ್ತರರು ಅಭಿನಯಿಸಿರುವ 'ಜಾಕಿ' ಚಿತ್ರ ರಾಜ್ಯದೆಲ್ಲೆಡೆ ಒಳ್ಳೆ ಕಲೆಕ್ಷನ್ ಮಾಡುತ್ತಿದೆ. ಚೆನ್ನೈನಲ್ಲೂ ಬಿಡುಗಡೆಯಾಗಿರುವ ಜಾಕಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೂಲಗಳ ಪ್ರಕಾರ ಮೈಸೂರು, ಮಂಡ್ಯ, ಹಾಸನ ಏರಿಯಾಗಳಲ್ಲಿ ಮೊದಲವಾರದ ಗಳಿಕೆ 1.1 ಕೋಟಿ ರು ಇತ್ತು. ಸದ್ಯಕ್ಕೆ 127 ಕೇಂದ್ರಗಳಿಂದ ಒಟ್ಟು 10 ಕೋಟಿ ಗಳಿಸಿರುವ ಚಿತ್ರ ಇದೇ ರೇಂಜ್ ನಲ್ಲಿ 50 ದಿನಗಳವರೆಗು ಸಾಗಿದರೆ ಎಲ್ಲಾ ದಾಖಲೆಗಳನ್ನು ಅಳಿಸುವ ಸಾಧ್ಯತೆಗಳಿವೆ.

  ವಿಡಿಯೋಗಳು:.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |

  ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X