»   »  ಕಲಾಕಾರ್ ಚಿತ್ರದ ಬಗ್ಗೆ ರಾಧಿಕಾ ಗಾಂಧಿ ಏನಂತಾರೆ?

ಕಲಾಕಾರ್ ಚಿತ್ರದ ಬಗ್ಗೆ ರಾಧಿಕಾ ಗಾಂಧಿ ಏನಂತಾರೆ?

Subscribe to Filmibeat Kannada
Radhika Gandhi back in Kalakar
'ಚಿಕ್ಕ ಮಗಳೂರ ಚಿಕ್ಕ ಮಲ್ಲಿಗೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ರಾಧಿಕಾ ಗಾಂಧಿ(17) ಅಡಿಯಿಟ್ಟಿದ್ದರು.ರಾಧಿಕಾ ಅಭಿನಯದ ಎರಡನೇ ಚಿತ್ರ 'ಕಲಾಕಾರ್' ಮೇ 29ರಂದು ತೆರೆ ಕಂಡಿದೆ. ಚಿಕ್ಕ ಮಗಳೂರ ಚಿಕ್ಕ ಮಲ್ಲಿಗೆ ಚಿತ್ರ ಹೇಳಿಕೊಳ್ಳುವಂತಹ ಹೆಸರನ್ನೇನು ರಾಧಿಕಾರಿಗೆ ತರಲಿಲ್ಲ. ಆದರೆ ಚಿಕ್ಕ ಮಲ್ಲಿಗೆ...ಚಿತ್ರ ಒಳ್ಳೆಯ ಅನುಭವ ತಂಡುಕೊಟ್ಟಿತು ಎನ್ನುತ್ತಾರೆ ರಾಧಿಕಾ ಗಾಂಧಿ.

ಅನುಭವ ಗಳಿಸಲು ಚಿಕ್ಕಮಗಳೂರ ಚಿಕ್ಕ ಮಲ್ಲಿಗೆ ನನಗೆ ಸಹಕಾರಿಯಾಯಿತು. ಆ ಚಿತ್ರದಿಂದ ಬಹಳಷ್ಟು ಕಲಿತಿದ್ದೇನೆ. ಚಿಕ್ಕ ಮಲ್ಲಿಗೆ ಚಿತ್ರದಲ್ಲಿನ ತಪ್ಪುಗಳನ್ನು ಕಲಾಕಾರ್ ಚಿತ್ರದಲ್ಲಿ ತಿದ್ದಿಕೊಂಡಿದ್ದೇನೆ ಎನ್ನುತ್ತಾರೆ ಮುದ್ದು ಮುಖದ ರಾಧಿಕಾ. ನನ್ನ ಎಲ್ಲ ಚಿತ್ರಗಳು ಬಾಕ್ಸಾಫೀಸಲ್ಲಿ ಗೆದ್ದೇ ಗೆಲ್ಲುತ್ತವೆ ಎಂಬ ನಿರೀಕ್ಷೆಯನ್ನು ನಾನು ಇಟ್ಟುಕೊಂಡಿಲ್ಲ. ಚಿತ್ರದ ಸೋಲು ನನ್ನ ಆತ್ಮ ವಿಶ್ವಾಸಕಕ್ಕೂ ಭಂಗ ತರುವುದಿಲ್ಲ ಎಂದು ಚಿಕ್ಕಮಲ್ಲಿಗೆ ಚಿತ್ರದ ಸೋಲನ್ನು ಒಪ್ಪಿಕೊಳ್ಳುತ್ತಾರೆ.

ಹರೀಶ್ ರಾಜ್ ನಿರ್ದೇಶಿಸಿ ಅಭಿನಯಿಸಿರುವ ಕಲಾಕಾರ್ ಚಿತ್ರದ ಬಗ್ಗೆ ಮಾತನಾಡುತ್ತಾ, ಚಿತ್ರದ ಒಳಗೆ ಮತ್ತೊಂದು ಚಿತ್ರ ಹೊಂದಿದೆ 'ಕಲಾಕಾರ್'.ಇದೊಂದು ತ್ರಿಕೋಣ ಪ್ರೇಮಕತೆ ಎನ್ನುತ್ತಾರೆ ರಾಧಿಕಾ. ಸುಮನ್ ರಂಗನಾಥ್ ಮತ್ತು ರಾಧಿಕಾ ಗಾಂಧಿ ಚಿತ್ರದಲ್ಲಿನ ಇಬ್ಬರು ನಾಯಕಿಯರು. ಇಬ್ಬರು ನಾಯಕಿಯರಿರುವ ಚಿತ್ರದಲ್ಲಿ ನಟಿಸಲು ತಮ್ಮದೇನು ಅಭ್ಯಂತರ ಇಲ್ಲ. ಚಿತ್ರದಲ್ಲಿ ಎರಡು ಪಾತ್ರಗಳು ಸಮಾನಂತರವಾಗಿವೆ ಎಂದು ವಿವರಣೆ ರಾಧಿಕಾ ಅವರದು.

ನನ್ನ ವಯಸ್ಸಿಗೆ ತಕ್ಕಂತಹ ಪಾತ್ರಗಳನ್ನು ಮಾತ್ರ ನಾನು ಮಾಡುತ್ತೇನೆ. ಆ ರೀತಿಯ ಪಾತ್ರಗಳಿಗೆ ನಮ್ಮ ಕುಟುಂಬದವರೂ ಒಪ್ಪಿಗೆ ಸೂಚಿಸುತ್ತಾರೆ. ನನ್ನ ಎಲ್ಲ ಚಿತ್ರಗಳನ್ನು ಅಕ್ಕ ಪೂಜಾಗಾಂಧಿ ಅಂಗೀಕರಿಸಿದ ಬಳಿಕವಷ್ಟೇ ನಾನು ಒಪ್ಪಿಕೊಳ್ಳುವುದು. ಪ್ರಸ್ತುತ ಫ್ಯಾಶನ್ ಡಿಸೈನ್ ಕೋರ್ಸ್ ಮಾಡುತ್ತಿರುವ ರಾಧಿಕಾ, ಅಕ್ಕನಂತೆ ತಾನೂ ಕನ್ನಡವನ್ನು ಕಲಿಯಲು ಪ್ರಯತ್ನಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada