»   » 'ಪ್ರೇಮಿಸಂ'ನಲ್ಲಿ ಸುನಿಲ್ ರಾವ್; ಗುಟ್ಟು ರಟ್ಟು!

'ಪ್ರೇಮಿಸಂ'ನಲ್ಲಿ ಸುನಿಲ್ ರಾವ್; ಗುಟ್ಟು ರಟ್ಟು!

Posted By:
Subscribe to Filmibeat Kannada

ರತ್ನಜ ನಿರ್ದೇಶಿಸುತ್ತಿರುವ 'ಪ್ರೇಮಿಸಂ' ಚಿತ್ರದಲ್ಲಿ ಸುನಿಲ್ ರಾವ್ ಸಹ ಒಂದು ಪಾತ್ರ ಮಾಡಿದ್ದಾರೆ. ಫ್ಲಾಶ್ ಬ್ಯಾಕ್ ನಲ್ಲಿ ಬಂದು ಹೋಗುವ ಪಾತ್ರ ಅವರದ್ದು. ಸುನಿಲ್ ರಾವ್ ಜೊತೆಗೆ ಈ ಚಿತ್ರದಲ್ಲಿ ಚೇತನ್ ಚಂದ್ರ ಮತ್ತು ವರುಣ್ ಮತ್ತಿಬ್ಬರು ನಾಯಕರು. ನಾಯಕಿ ಮಾತ್ರ ಒಬ್ಬಳೆ, ಅಮೂಲ್ಯ.

ಇಷ್ಟಕ್ಕೂ ಸುನಿಲ್ ರಾವ್ ಅತಿಥಿ ಪಾತ್ರದಲ್ಲಿ ಕಾಣಿಸುತ್ತಾರೋ ಅಥವಾ ಮುಖ್ಯಪಾತ್ರದಲ್ಲಿ ದರ್ಶನ ನೀಡುತ್ತಾರೋ ಎಂಬುದು ಸದ್ಯಕ್ಕೆ ಸಸ್ಪೆನ್ಸ್. 'ಮಿನುಗು' ಚಿತ್ರದಲ್ಲಿ ನಟಿಸುತ್ತಿದ್ದ ಸಂದರ್ಭದಲ್ಲೇ ಸುನಿಲ್ ಈ ಚಿತ್ರಕ್ಕೂ ಬಣ್ಣ ಬಳಿದುಕೊಂಡಿದ್ದರಂತೆ. ಸುನಿಲ್ ಪಾತ್ರವನ್ನು ವಿದೇಶದಲ್ಲೂ ಚಿತ್ರೀಕರಿಸಿದ್ದಾರೆ ಎನ್ನುತ್ತವೆ ಮೂಲಗಳು.

'ಪ್ರೇಮಿಸಂ' ಚಿತ್ರದಲ್ಲಿ 'ಎಕ್ಸ್ ಕ್ಯೂಸ್ ಮಿ' ಯ ಸುನಿಲ್ ರಾವ್ ನಟಿಸಿರುವುದು ಇಷ್ಟು ದಿನ ಗುಟ್ಟಾಗಿ ಇಡಲಾಗಿತ್ತು. ಪ್ರೇಕ್ಷಕರಿಗೆ ಸರ್ ಪ್ರೈಸ್ ಕೊಡಬೇಕೆಂಬ ರತ್ನಜರ ಯೋಜನೆ ಇದೀಗ ತಲೆಕೆಳಗಾಗಿದೆ. ಸುನಿಲ್ ರಾವ್ ಪಾತ್ರ ಯಾವ ರೀತಿಯದು ಎಂಬಷ್ಟರ ಮಟ್ಟಿಗೆ ರತ್ನಜ ಗುಟ್ಟನ್ನು ಕಾಪಾಡಿಕೊಂಡಿದ್ದಾರೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada