»   » ಮಾಲಾಶ್ರೀ ಜೊತೆ ನಟಿಸುವ ಆಸೆ: ವಿಜಯ್

ಮಾಲಾಶ್ರೀ ಜೊತೆ ನಟಿಸುವ ಆಸೆ: ವಿಜಯ್

Posted By:
Subscribe to Filmibeat Kannada

ದುನಿಯಾ ವಿಜಯ್ ಮತ್ತು ನಟಿ ಮಾಲಾಶ್ರೀ ಕಾಂಬಿನೇಷನ್ ನಲ್ಲಿ ಮುಂದೊಂದು ದಿನ ಚಿತ್ರ ಬರುವ ಸಾಧ್ಯತೆಯಿದೆ. ಅದು ಯಾವ ರೀತಿಯ ಚಿತ್ರ ಎಂಬುದು ಪ್ರೇಕ್ಷಕರ ಊಹೆಗೆ ಬಿಟ್ಟಿದ್ದು. ಮಾಲಾಶ್ರೀ ಮೇಡಂ ಜೊತೆ ಸಾಹಸ ಪ್ರಧಾನ ಚಿತ್ರದಲ್ಲಿ ನಟಿಸಬೇಕು ಎಂಬ ಆಸೆಯನ್ನು ವಿಜಿ ತೋಡಿಕೊಂಡಿದ್ದಾರೆ. ಇದಕ್ಕೆ ಮಾಲಾಶ್ರೀ ಮೇಡಂ ಸಹ ಐ ಡೋಂಟ್ ಮೈಂಡ್ ಎಂದಿದ್ದಾರೆ.

ಸಾಹಸ ಪ್ರಧಾನ ಚಿತ್ರಗಳಲ್ಲಿ ಮಾಲಾಶ್ರೀ ಅವರ ಅಭಿನಯ ನಾಯಕ ನಟರು ನಾಚುವಂತಿರುತ್ತದೆ. ಎರಡು ದಶಕಗಳ ಕಾಲ ನಾಯಕಿಯಾಗಿ ಮಾಲಾಶ್ರೀ ಕನ್ನಡ ಚಿತ್ರರಂಗದಲ್ಲಿ ತಮ್ಮ ತಾಕತ್ ಏನು ಎಂಬುದನ್ನು ತೋರಿಸಿದ್ದಾರೆ ಎಂದು ವಿಜಯ್ ಪ್ರಶಂಸಿದ್ದಾರೆ. ಸಂದರ್ಭ 'ಕಂಠೀರವ' ಚಿತ್ರದ ಮುಹೂರ್ತ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ 'ಕಂಠೀರವ' ಚಿತ್ರಕ್ಕೆ ಚಾಲನೆ ನೀಡಲಾಯಿತು. ತೆಲುಗಿನ ಯಶಸ್ವಿ ಚಿತ್ರ ಼'ಸಿಂಹಾದ್ರಿ'ಯ ರೀಮೇಕ್ ಇದಾಗಿದೆ. ವಿಜಯ್ ಗೆ ಜೊತೆಯಾಗಿ ಶುಭಾ ಪೂಂಜಾ ಮತ್ತು ರಿಶಿಕಾ ಸಿಂಗ್ ಅಭಿನಯಿಸುತ್ತಿದ್ದಾರೆ. ರಾಮು ಎಂಟರ್ ಪ್ರೈಸಸ್ ನಿರ್ಮಿಸುತ್ತಿರುವ ಮತ್ತೊಂದು ಅದ್ದೂರಿ ಚಿತ್ರ.

ಮೈಸೂರು, ಬೆಂಗಳೂರು ಮತ್ತು ಕೇರಳದಲ್ಲಿ ಚಿತ್ರೀಕರಣ ನಡೆಯಲಿದೆ. ಮೂಲ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದ ದಾಸರಿ ಸೀನು ಅವರ ಛಾಯಾಗ್ರಹಣ 'ಕಂಠೀರವ' ಚಿತ್ರಕ್ಕಿದೆ. ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರ ಮಗಳು ರಿಶಿಕಾ ಸಿಂಗ್ ಚಿತ್ರದ ನಾಯಕಿಯರಲ್ಲಿ ಒಬ್ಬರು. ತುಷಾರ್ ರಂಗನಾಥ್ ಅವರ ನಿರ್ದೇಶನ 'ಕಂಠೀರವ' ಚಿತ್ರಕ್ಕಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada