»   » ಹೆಸರು ಬದಲಾವಣೆ ಹುಡುಗಾಟವೋ ಹುಚ್ಚುತನವೋ?

ಹೆಸರು ಬದಲಾವಣೆ ಹುಡುಗಾಟವೋ ಹುಚ್ಚುತನವೋ?

Posted By: Staff
Subscribe to Filmibeat Kannada
Actress Rekha
ಇದೇನು ಹುಡುಗಾಟವೋ ಹುಚ್ಚುತನವೋ ತುಂಟಾಟವೋ ಚೆಲ್ಲಾಟವೋ ಅಂತೂ ರೇಖಾ ಬದಲಾಗಿದ್ದಾರೆ. ಕ್ಷಮಿಸಿ ಅವರು ಹೆಸರು ಬದಲಾಯಿಸಿಕೊಂಡಿದ್ದಾರೆ.

ಅವರೀಗ ಅಕ್ಷರ!

ಶಿವರಾಜ್‌ಕುಮಾರ್, ಗಣೇಶ್ ಅಷ್ಟೇ ಯಾಕೆ ನಾನೂ ಕೂಡ ಹ್ಯಾಟ್ರಿಕ್ ಹೀರೋಯಿನ್ ಅಂತಲೇ ಎಲ್ಲೆಡೆ ಹೇಳಿಕೊಳ್ಳುವ ರೇಖಾಳಿಗೆ ಅದೃಷ್ಟವೂ ಜೊತೆಗಿದೆ. ಅವರ ಇತ್ತೀಚಿನ ಚಿತ್ರ ಗಣೇಶ ಜೊತೆ ನಟಿಸಿರುವ ಹುಡುಗಾಟ ಶತದಿನೋತ್ಸವ ಕೂಡ ಆಚರಿಸಿದೆ.

ಅದಲ್ಲದೆ ಅವರು ಸದ್ಯಕ್ಕೆ ಕನ್ನಡದಲ್ಲಿ ಅತ್ಯಂತ ಬಿಜಿ ನಟಿ ಅಂದರೂ ಪರವಾಗಿಲ್ಲ. ನೆನಪಿರಲಿ ಪ್ರೇಮ್ ಜೊತೆ ಗುಣವಂತ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ರಮೇಶ್ ಅರವಿಂದ್ ನಾಯಕಿಯಾಗಿ ಅಭಿನಯಿಸುತ್ತಿರುವ ಆಕ್ಸಿಡೆಂಟ್ ಅವರ ಬೇಡಿಕೆ ಎಂಥದ್ದೆಂದು ಜಾಹೀರಾತು ಮಾಡಿದೆ.

ಇಷ್ಟೆಲ್ಲ ಇದ್ದರೂ ಹೆಸರಿನ ಬದಲಾವಣೆಯೇಕೆ? ಕನ್ನಡದಲ್ಲಿ ಅವರು ರೇಖಾ ಆಗಿಯೇ ಗುರುತಿಸಿಕೊಳ್ಳಿಲಿದ್ದಾರೆ. ಹೆಸರು ಬದಲಾಗಿರುವುದು ತೆಲುಗು ಚಿತ್ರಕ್ಕಾಗಿ. ಇಲ್ಲಿ ರೇಖಾ ಅಲ್ಲಿ ಅಕ್ಷರ. ಸದ್ಯಕ್ಕೆ ದ್ವಿಪಾತ್ರ ಅಭಿನಯ.

ನಿನ್ನ ನೇನು ರೇಪು ತೆಲುಗು ಚಿತ್ರ ಪ್ರಾರಂಭವಾಗುವ ಮುನ್ನ ತಮ್ಮ ಹೆಸರು ಬದಲಾಯಿಸಿಕೊಂಡದ್ದನ್ನು ಅವರೇ ಬಹಿರಂಗಪಡಿಸಿದ್ದಾರೆ. ತೆಲುಗು ಚಿತ್ರಗಳಲ್ಲಿ ಅವರು ಸಾಕಷ್ಟು ಗ್ಲಾಮರಸ್ಸಾಗಿ ಕಾಣಿಸಿಕೊಳ್ಳುತ್ತಿದ್ದರೂ ಅದೃಷ್ಟ ಕೈಕೊಟ್ಟಿದೆ. ಆದ್ದರಿಂದಲೇ ಹೆಸರಿನ ಬದಲಾವಣೆಯೇ? ಅವರೇ ಉತ್ತರಿಸಬೇಕು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada