»   » ಕನ್ನಡದ ಮೂರು ಮುದ್ದು ನಟಿಯರಿಗಿಂದು ಜನುಮದಿನದ ಸಂಭ್ರಮ

ಕನ್ನಡದ ಮೂರು ಮುದ್ದು ನಟಿಯರಿಗಿಂದು ಜನುಮದಿನದ ಸಂಭ್ರಮ

Posted By:
Subscribe to Filmibeat Kannada

ಕಳೆದ ಮೂರು ದಿನಗಳಿಂದ ಟಿವಿ, ಪೇಪರ್, ಫೇಸ್ ಬುಕ್, ಟ್ವಿಟ್ಟರ್ ಎಲ್ಲೇ ನೋಡಿದ್ರು ಐಟಿ ದಾಳಿ ಕುರಿತ ಸುದ್ದಿ, ಚರ್ಚೆ. ಈ ನಡುವೆ ಕನ್ನಡದ ಮೂರು ನಟಿಯರಿಗೆ ಇಂದು ಶುಭದಿನ ಎಂಬುದು ಅನೇಕರಿಗೆ ಗೊತ್ತಿಲ್ಲ. ಹೌದು, ಆಗಸ್ಟ್ 5, ಚಂದನವನದ ಮೂವರು ಮುದ್ದು ನಟಿಯರು ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ..

'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಎಲ್ಲರ ಗಮನ ಸೆಳೆದು, ಸದ್ಯ ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ನಟಿ ಶುಭಾ ಪೂಂಜಾ ಅವರಿಗೆ ಜನುಮದಿನದ ಸಂಭ್ರಮ.

3 Kannada Actress Birthday on August 5th

ಶುಭಾ ಪೂಂಜಾ ಇಲ್ಲಿಯವರೆಗೂ 'ಚಂಡ', 'ಸ್ಲಂ ಬಾಲ', 'ಕನ್ನಡದ ಕಂಠೀರವ', 'ತರ್ಲೆ ನನ್ ಮಕ್ಳು', 'ಜೈ ಮಾರುತಿ 800, 'ಹಾಗೂ ಈ ವಾರವಷ್ಟೇ ಬಿಡುಗಡೆಯಾದ 'ತಾತನ್ ತಿಥಿ ಮೊಮ್ಮಗನ ಪ್ರಸ್ಥ' ಚಿತ್ರದವರೆಗೂ ಹಲವು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದಾರೆ.

3 Kannada Actress Birthday on August 5th

'ಕ್ರೇಜಿಬಾಯ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಜಿಗಿದು, 'ಮುಗುಳುನಗೆ'ಯಲ್ಲಿ ಗಣೇಶ್ ಜೊತೆ ಹೆಜ್ಜೆ ಹಾಕಿ ಇನ್ನು ಹಲವು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ಆಶಿಕಾ ರಂಗನಾಥ್ ಅವರಿಗೆ ಕೂಡ ಇಂದು ಜನಮದಿನದ ಸಂಭ್ರಮ.

3 Kannada Actress Birthday on August 5th

'ಸಪ್ನೊಂಕಿ ರಾಣಿ', 'ವಾಟ್ಸ್ ಅಪ್ ಲವ್' ಚಿತ್ರಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಉದಯೋನ್ಮಖ ನಟಿ ಐಶ್ವರ್ಯ ಸಿಂಧೋಗಿ ಅವರಿಗೆ ಕೂಡ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಮೂವರು ನಟಿಯರಿಗೆ ನಿಮ್ಮ ಫಿಲ್ಮಿಬೀಟ್ ಕಡೆಯಿಂದ ಜನಮದಿನದ ಶುಭಾಶಯಗಳು.....

English summary
Kannada Actress Shubha Poonja, Ashika Ranganath, Aishwarya Sindhogi are Celebrating Their Birthdays on August 5th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada