For Quick Alerts
  ALLOW NOTIFICATIONS  
  For Daily Alerts

  ಈ ವಾರ ತೆರೆ ಕಾಣುತ್ತಿರುವ ಕನ್ನಡ ಚಿತ್ರಗಳು

  By Bharath Kumar
  |

  ಸ್ಯಾಂಡಲ್ ವುಡ್ ಚಿತ್ರಪ್ರೇಮಿಗಳಿಗೆ ಈ ವಾರ ಗಣೇಶ ಹಬ್ಬದ ಪ್ರಯುಕ್ತ ವಿಭಿನ್ನ ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಕನ್ನಡ ಪ್ರೇಕ್ಷಕರಿಗೆ ಈ ವಾರ ತ್ರಿಬಲ್ ಧಮಕಾ.

  ಕನ್ನಡದಲ್ಲಿ ಈ ವಾರ ಒಟ್ಟು ಮೂರು ಚಿತ್ರಗಳು ಬಿಡುಗಡೆಯಾಗುತ್ತಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ 'ಸಾಹೇಬ', ನಿಧಿ ಸುಬ್ಬಯ್ಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ '5ಜಿ' ಹಾಗೂ ಬಹು ತಾರಬಳಗ ಹೊಂದಿರುವ 'ಮಾರ್ಚ್-22' ಚಿತ್ರಗಳು ಈ ವಾರ ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿವೆ.

  'ಸಾಹೇಬ' ಚಿತ್ರದ ಬಗ್ಗೆ

  'ಸಾಹೇಬ' ಚಿತ್ರದ ಬಗ್ಗೆ

  ಮನೋರಂಜನ್ ಅಭಿನಯದ ಚೊಚ್ಚಲ ಸಿನಿಮಾ 'ಸಾಹೇಬ'. ಮನೋರಂಜನ್ ಗೆ 'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ ಶ್ರೀವಾತ್ಸವ್ ಜೊತೆಯಾಗಿದ್ದಾರೆ. ಈ ಚಿತ್ರಕ್ಕೆ ಭರತ್ ಆಕ್ಷನ್ ಕಟ್ ಹೇಳಿದ್ದು, ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.

  'ಗಣೇಶ'ನ ಜೊತೆ 'ಸಾಹೇಬ'ನ ಎಂಟ್ರಿ

  '5ಜಿ' ಚಿತ್ರದ ವಿಶೇಷತೆ

  '5ಜಿ' ಚಿತ್ರದ ವಿಶೇಷತೆ

  'ಸಿಂಪಲಾಗ್ ಇನ್ನೊಂದು ಲವ್ ಸ್ಟೋರಿ' ಖ್ಯಾತಿಯ ನಟ ಪ್ರವೀಣ್ ಹಾಗೂ ನಿಧಿ ಸುಬ್ಬಯ್ಯ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ವಿಭಿನ್ನ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವುದು ಗುರುವೇಂದ್ರ ಶೆಟ್ಟಿ. ಶ್ರೀಧರ್ ವಿ.ಸಂಭ್ರಮ್ ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದ್ದಾರೆ. ಗುರು ಪ್ರಶಾಂತ ರೈ ಅವರು ಛಾಯಗ್ರಾಹಣ ಈ ಚಿತ್ರಕ್ಕಿದೆ. ಜಗದೀಶ, ದೀಪು ಹಾಗೂ ಗಿರೀಶ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

  ಆಗಸ್ಟ್ 25 ರಂದು ಸ್ಯಾಂಡಲ್ ವುಡ್ ಗೆ '5G' ಎಂಟ್ರಿ

  'ಮಾರ್ಚ್-22' ಸಿನಿಮಾ ಕಥೆ

  'ಮಾರ್ಚ್-22' ಸಿನಿಮಾ ಕಥೆ

  ಮಂಗಳೂರು ಮೂಲದ ದುಬೈನ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಅವರ ಪತ್ನಿ ಶರ್ಮಿಳಾ ಶೇರಿಗಾರ್ 'ಮಾರ್ಚ್-22' ಚಿತ್ರವನ್ನ ನಿರ್ಮಿಸಿದ್ದಾರೆ. ಆರ್ಯವರ್ಧನ್ ಹಾಗೂ ಕಿರಣ್ ರಾಜ್ ಎಂಬ ನವ ನಟರು ಈ ಚಿತ್ರದಲ್ಲಿ ನಾಯಕನಟರಾಗಿದ್ದು, ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನುಳಿದಂತೆ ಅನಂತ್ ನಾಗ್, ಗೀತಾ, ರಮೇಶ್ ಭಟ್, ಸಾಧುಕೋಕಿಲಾ, ಜೈಜಗದೀಶ್, ಆಶಿಶ್ ವಿದ್ಯಾರ್ಥಿ, ಪದ್ಮಜಾ ರಾವ್ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಕೂಡ ಕಾಣಿಸಿಕೊಂಡಿದ್ದಾರೆ.

  ನಿಮ್ಮ ಆಯ್ಕೆ ಯಾವುದು?

  ನಿಮ್ಮ ಆಯ್ಕೆ ಯಾವುದು?

  ಈ ಮೂರು ಚಿತ್ರಗಳಲ್ಲಿ ನಿಮ್ಮ ಆಯ್ಕೆ ಯಾವುದು? ಯಾವ ಸಿನಿಮಾವನ್ನ ಮೊದಲ ದಿನ, ಮೊದಲ ಶೋ ನೋಡುತ್ತೀರಾ ಎಂದು ಕೆಳಗೆ ನೀಡಿರುವ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ....

  English summary
  manoranjan starrer 'Saheba', guruvendra shetty directional movie '5g' and 'March 22' movies are releasing on august 25th

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X