For Quick Alerts
  ALLOW NOTIFICATIONS  
  For Daily Alerts

  'ಅಮವಾಸೆ' ದಿನ 'ಅಯೋಗ್ಯ'ನಿಗೆ 'ಒಂಥರಾ' ಆಗಿದೆ

  By Naveen
  |

  ಕಳೆದ ವಾರ ಕನ್ನಡದಲ್ಲಿ ಒಂದೇ ದಿನಕ್ಕೆ ಹತ್ತು ಸಿನಿಮಾಗಳು ಬಿಡುಗಡೆಯಾಗಿತ್ತು. ಅದರ ನಂತರ ಈ ಶುಕ್ರವಾರ ಸಹ ಹೊಸ ಹೊಸ ಸಿನಿಮಾಗಳು ತೆರೆಗೆ ಬರುವುದಕ್ಕೆ ಸಿದ್ಧವಾಗಿವೆ.

  'ಟಗರು' ಹಾಗೂ 'ರಾಂಬೋ 2' ಸಿನಿಮಾದ ನಂತರ ರೀ ರಿಲೀಸ್ ಆದ 'ನಾಗರಹಾವು' ಚಿತ್ರಕ್ಕೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿತ್ತು. ಈ ಎಲ್ಲ ಚಿತ್ರಗಳ ಅಬ್ಬರ ಈಗ ಕಡಿಮೆ ಆಗಿದ್ದು, ಬೇರೆ ಬೇರೆ ಚಿತ್ರಗಳು ಚಿತ್ರಮಂದಿರಗಳಲ್ಲಿ ಜಾಗ ಪಡೆಯುತ್ತಿವೆ. ಕನ್ನಡದಲ್ಲಿ ಈ ವಾರ ಮೂರು ಚಿತ್ರಗಳು ಬಿಡುಗಡೆಯಾಗಲಿದೆ. 'ಅಯೋಗ್ಯ', 'ಒಂಥರಾ ಬಣ್ಣಗಳು' ಹಾಗೂ 'ಅಮವಾಸೆ' ಈ ಮೂರು ಸಿನಿಮಾಗಳು ನಾಳೆ ತೆರೆಗೆ ಬರುತ್ತಿವೆ.

  ಆಷಾಢ ಮುಗಿತು, ಶ್ರಾವಣದಲ್ಲಿ ಶುರುವಾಗುತ್ತೆ ಸಿನಿಮಾ ಸಂಭ್ರಮಆಷಾಢ ಮುಗಿತು, ಶ್ರಾವಣದಲ್ಲಿ ಶುರುವಾಗುತ್ತೆ ಸಿನಿಮಾ ಸಂಭ್ರಮ

  ಈ ಶುಕ್ರವಾರ ಬಿಡುಗಡೆಯಾಗುತ್ತಿರುವ ಕನ್ನಡದ ಈ ಮೂರು ಸಿನಿಮಾಗಳ ವಿವರ ಮುಂದಿದೆ ಓದಿ...

  'ಅಯೋಗ್ಯ'

  'ಅಯೋಗ್ಯ'

  ನಟ ಸತೀಶ್ ನೀನಾಸಂ ಅಭಿನಯದ 'ಅಯೋಗ್ಯ' ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಮೊದಲ ಬಾರಿಗೆ ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಈ ಚಿತ್ರದಲ್ಲಿ ಒಂದಾಗಿದ್ದಾರೆ. ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಟಿ ಆರ್ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾದ ನಾಲ್ಕೂ ಹಾಡುಗಳು ಸೂಪರ್ ಹಿಟ್ ಆಗಿವೆ. ಎಲ್ಲ ಹಾಡುಗಳನ್ನು ಬಹದ್ದೂರ್ ಚೇತನ್ ಕುಮಾರ್ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಿನಿಮಾದಲ್ಲಿದೆ.

  ಮುಖ್ಯ ಚಿತ್ರಮಂದಿರ : ನರ್ತಕಿ

  ಒಂಥರಾ ಬಣ್ಣಗಳು

  ಒಂಥರಾ ಬಣ್ಣಗಳು

  ಚಿತ್ರದ ಶೀರ್ಷಿಕೆ ಮೂಲಕ ಗಮನ ಸೆಳೆದ 'ಒಂಥರಾ ಬಣ್ಣಗಳು' ಸಿನಿಮಾ ಸಹ ಇದೇ ಶುಕ್ರವಾರ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಸೋನು ಗೌಡ, ಹಿತಾ ಚಂದ್ರಶೇಖರ್, ಪ್ರವೀಣ್, ಕಿರಣ್ ಶ್ರೀನಿವಾಸ್, ಹಾಗೂ ಪ್ರತಾಪ್ ನಾರಾಯಣ್ ನಟಿಸಿದ್ದಾರೆ. 'ಒಂಥರಾ ಬಣ್ಣಗಳು' ಚಿತ್ರವನ್ನು ಸುನೀಲ್ ಭೀಮ್ ರಾವ್ ನಿರ್ದೇಶನ ಮಾಡಿ ನಿರ್ಮಾಣ ಮಾಡಿದ್ದಾರೆ. ಭರತ್ ಬಿ ಜೆ ಸಂಗೀತ ನೀಡಿದ್ದಾರೆ.

  'ಅಮವಾಸೆ'

  'ಅಮವಾಸೆ'

  ಈ ವಾರ ಒಂದು ಹೊಸ ತಂಡ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. 'ಅಮವಾಸೆ' ಸಿನಿಮಾ ನಾಳೆ ತೆರೆಗೆ ಬರುತ್ತಿದೆ. ಇದೊಂದು ಹಾರರ್ ಚಿತ್ರವಾಗಿದ್ದು, ಪ್ರಶಾಂತ್ ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಘು, ಲೋಕಿ, ವಿನಯ್ ಹಾಗೂ ಅಭಯ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಲೀಡ್ ಪಾತ್ರಗಳಾದ 'ಅ'ಮರ್, 'ಮ'ಹೇಶ್ 'ವಾ'ಸು, ''ಸೆಂ'ದಿ ಈ ನಾಲ್ಕು ಪಾತ್ರಗಳ ಮೊದಲ ಅಕ್ಷರವೇ ಸಿನಿಮಾದ ಟೈಟಲ್ ಆಗಿದೆ.

  ಮುಖ್ಯ ಚಿತ್ರಮಂದಿರ : ತ್ರಿವೇಣಿ

  ನಿಮ್ಮ ಆಯ್ಕೆ ಯಾವುದು?

  ನಿಮ್ಮ ಆಯ್ಕೆ ಯಾವುದು?

  ನಾಳೆ ಕನ್ನಡದಲ್ಲಿ ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಈ ಚಿತ್ರಗಳಲ್ಲಿ ನೀವು ನೋಡಲು ಬಯಸಿದ ಸಿನಿಮಾದ ಹೆಸರನ್ನು ಕೆಳಗಿನ ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ.

  English summary
  'Ayogya', 'Onthara Bannagalu' and 'Amavase' kannada movies will release Tomorrow (August 17th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X