For Quick Alerts
  ALLOW NOTIFICATIONS  
  For Daily Alerts

  'ನಾಗರಹಾವು' ಉತ್ಸವದ ಮಧ್ಯೆ ಬರ್ತಿದೆ ಮೂರು ಚಿತ್ರಗಳು

  By Bharath Kumar
  |

  ಯಾರ ಬಾಯಲ್ಲಿ ಕೇಳು ನಾಗರಹಾವು, ಯಾರ ಫೇಸ್ ಬುಕ್ ನಲ್ಲಿ ನೋಡಿದ್ರು ನಾಗರಹಾವು, ಯಾರದ್ದೇ ಸ್ಟೇಟಸ್ ನೋಡಿದ್ರೆ ನಾಗರಹಾವು. 45 ವರ್ಷದ ಹಿಂದಿನ ಸಿನಿಮಾ ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಬಿಡುಗಡೆಯಾಗ್ತಿರೋದು ಸ್ಯಾಂಡಲ್ ವುಡ್ ನಲ್ಲಿ ಹಬ್ಬ ಉಂಟು ಮಾಡಿದೆ.

  ನಾಗರಹಾವು ಚಿತ್ರದ ಈ ಜಾತ್ರೆಯ ಮಧ್ಯೆ ಥಿಯೇಟರ್ ಗೆ ಬರ್ತಿರುವ ಉಳಿದ ಚಿತ್ರಗಳನ್ನ ನಾವು ಮರೆಯವಂತಿಲ್ಲ. ಈ ವಾರ ನಾಗರಹಾವು ಒಂದೇ ಸಿನಿಮಾ ಎಂದುಕೊಂಡಿದ್ದರೇ ತಪ್ಪು, ಅದರ ಜೊತೆಯಲ್ಲಿ ಎರಡು ಕನ್ನಡ ಸಿನಿಮಾ ರಿಲೀಸ್ ಆಗ್ತಿದೆ.

  ಅಂದ್ರೆ, ಈ ವಾರ ಒಟ್ಟು ಮೂರು ಕನ್ನಡ ಸಿನಿಮಾಗಳು ಗಾಂಧಿನಗರಕ್ಕೆ ಬರ್ತಿದೆ. ಈ ಮೂರು ಚಿತ್ರಗಳ ಜೊತೆ ಮತ್ತೊಂದು ದೊಡ್ಡ ಸಿನಿಮಾನೂ ನಿಮ್ಮ ಮುಂದೆ ಬರಲಿದೆ. ಅದೇ ಶ್ರೀದೇವಿ ಪುತ್ರಿಯ ಚೊಚ್ಚಲ ಸಿನಿಮಾ. ಹಾಗಿದ್ರೆ, ಈ ವಾರ ತೆರೆಕಾಣಲಿರುವ ಆ ಚಿತ್ರಗಳು ಯಾವುದು.? ಮತ್ತು ಅದರ ವಿಶೇಷತೆಗಳೇನು ಎಂಬುದನ್ನ ಮುಂದೆ ನೋಡೋಣ.

  ಈ ವಾರ ಬಿಡುಗಡೆ 'ಕೀಚಕರು'

  ಈ ವಾರ ಬಿಡುಗಡೆ 'ಕೀಚಕರು'

  ಉಗ್ರಂ ರೆಡ್ಡಿ, ಜಯ ನಾಯಕ್, ಜಗ್ಗಿ ಕಲಾಕರ್, ಬುಲ್ಲೆಟ್ ರವಿ, ಚಾರ್ಲಿ ಸುನಿಲ್ ಅಭಿನಯದ 'ಕೀಚಕರು' ಈ ವಾರ ತೆರೆಕಾಣುತ್ತಿದೆ. ಆಂಧ್ರ ಪ್ರದೇಶ ಮೂಲದ ಶಿವಮಣಿ ನಿರ್ದೇಶನ ಜೊತೆ ಕಥೆ, ಚಿತ್ರಕಥೆ ಬರೆದು ಸ್ನೇಹಿತರನ್ನು ಒಟ್ಟುಗೂಡಿಸಿ ನಿರ್ಮಾಣ ಸಹ ಮಾಡಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಾಲಿ ಕುಂಭ ರಾಶಿ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದು, ವಿನು ಮನಸ್ಸು ಅವರು ಈ ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದ್ದಾರೆ. ಅತ್ಯಾಚಾರ, ದೌರ್ಜನ್ಯ ಹೆಣ್ಣಿನ ಬಗ್ಗೆ ಹೆಚ್ಚಾಗುತ್ತ ಇರುವ ಇಂದಿನ ದಿವಸಗಳಲ್ಲಿ 'ಕೀಚಕರು' ಕನ್ನಡ ಸಿನಿಮಾ ತಪ್ಪು ಮಾಡಿದವರಿಗೆ ಶಿಕ್ಷೆ ಅಲ್ಲದೆ ಅಂತಹ ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಯ ಕುಟುಂಬದ ಆಗು ಹೋಗುಗಳನ್ನು ಈ ಸಿನಿಮಾ ಸೆರೆ ಹಿಡಿದಿದೆ.

  ಈ ವಾರ ತೆರೆಗೆ 'ನವೋದಯ ಡೇಸ್'

  ಈ ವಾರ ತೆರೆಗೆ 'ನವೋದಯ ಡೇಸ್'

  'ನವೋದಯ ಡೇಸ್' ಎಂಬ ಸಿನಿಮಾ ಈ ವಾರ ಈ ಚಿತ್ರ ತೆರೆಗೆ ಬರುತ್ತಿದೆ. 6 ನೇ ತರಗತಿಗೆ ಬಂದು ಇಲ್ಲಿ ಸೇರಿ 12 ನೇ ತರಗತಿಯವರೆಗೆ ವ್ಯಾಸಂಗ ಮಾಡುವಲ್ಲಿನ ನಡುವೆ ನಡೆಯುವ ಕೆಲ ಘಟನೆಗಳೇ ಈ ಚಿತ್ರದ ಕಥಾ ವಸ್ತು. ಹೇಮಂತ್, ಚಂದ್ರಿಕಾ. ಕಾರ್ತಿಕ್, ಚಂದನ್, ಶಶಿಕಿರಣ್, ಸಾಗರ್. ಗೌರೀಶ್ ಅಕ್ಕಿ, ಅಭಿ, ಸಿರಿ, ಮಾಸ್ಟರ್ ಅನುಜ್, ಮಾಸ್ಟರ್ ಹರ್ಷ, ಮಾಸ್ಟರ್ ಗಗನ್ ದೀಪ್, ಮಾಸ್ಟರ್ ಶ್ರೇಯಸ್, ಮಾಸ್ಟರ್ ಸಾಗರ್ ಅಭಿನಯಿಸಿದ್ದಾರೆ. ಈ ಚಿತ್ರವನ್ನ ಜೈಕುಮಾರ್ ಮಂಜು ನಿರ್ದೇಶನ ಮಾಡಿದ್ದು, ಶ್ರೀನಂದಿ ನಿರ್ಮಾಣ ಮಾಡಿದ್ದಾರೆ.

  ಶ್ರೀದೇವಿ ಪುತ್ರಿ 'ದಢಕ್'

  ಶ್ರೀದೇವಿ ಪುತ್ರಿ 'ದಢಕ್'

  ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾ ದಢಕ್ ಇದೇ ವಾರ ಬಿಡುಗಡೆಯಾಗುತ್ತಿದೆ. ಮರಾಠಿಯ 'ಸೈರಾಟ್' ಚಿತ್ರದ ಹಿಂದಿ ರಿಮೇಕ್ ಆಗಿರುವ 'ದಡಕ್' ಚಿತ್ರವನ್ನ ಶಶಾಂಕ್ ಕೈತನ್ ನಿರ್ದೇಶನ ಮಾಡಿದ್ದಾರೆ. ಕರಣ್ ಜೋಹರ್ ನಿರ್ಮಾಣ ಮಾಡಿದ್ದು, ಜುಲೈ 20 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

  ಜಾಹ್ನವಿ ಪಾಲಿಗೆ ಶ್ರೀದೇವಿ ಕೆಟ್ಟ ತಾಯಿ ಆಗಿದ್ದ ಸಂದರ್ಭ ಇದು.!ಜಾಹ್ನವಿ ಪಾಲಿಗೆ ಶ್ರೀದೇವಿ ಕೆಟ್ಟ ತಾಯಿ ಆಗಿದ್ದ ಸಂದರ್ಭ ಇದು.!

  ಹೊಸ ರೂಪದಲ್ಲಿ 'ನಾಗರಹಾವು'

  ಹೊಸ ರೂಪದಲ್ಲಿ 'ನಾಗರಹಾವು'

  ಪುಟ್ಟಣ್ಣ ಕಣಗಾಲ್ ನಿರ್ದೇಶನ ಹಾಗೂ ವಿಷ್ಣುವಧನ್ ಅಭಿನಯದಲ್ಲಿ ಮೂಡಿ ಬಂದಿದ್ದ ಎವರ್ ಗ್ರೀನ್ ಸಿನಿಮಾ 'ನಾಗರಹಾವು' ಮತ್ತೆ ಹೊಸ ತಂತ್ರಜ್ಞಾನದಲ್ಲಿ ಇದೇ ವಾರ (ಜುಲೈ 20) ರಿ-ರಿಲೀಸ್ ಆಗುತ್ತಿದೆ. ಶಿವರಾಜ್ ಕುಮಾರ್, ಅಂಬರೀಶ್, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಅನೇಕರ ನಾಗರಹಾವು ಸಿನಿಮಾ ನೋಡಲು ಕಾಯ್ತಿದ್ದಾರೆ.

  'ನಾಗರಹಾವು' ಸಿನಿಮಾ ನೋಡಿ ಪುಟ್ಟಣ್ಣ ಬಳಿ ಶಿವಣ್ಣ ಹೇಳಿದ್ದೇನು.?'ನಾಗರಹಾವು' ಸಿನಿಮಾ ನೋಡಿ ಪುಟ್ಟಣ್ಣ ಬಳಿ ಶಿವಣ್ಣ ಹೇಳಿದ್ದೇನು.?

  English summary
  sridevi daughter janhvi kapoor's dhadak movie, keechakaru and navodaya days movie will be releasing along with dr vishnuvardhan's nagarahavu on july 20th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X