For Quick Alerts
  ALLOW NOTIFICATIONS  
  For Daily Alerts

  ವಿಷ್ಣುವರ್ಧನ್ ಜೀವನ ಸಿಂಹಾವಲೋಕನ

  By * ಮಹೇಶ್ ಮಲ್ನಾಡ್
  |

  ಮೂಲನಾಮ : ಸಂಪತ್ ಕುಮಾರ್
  ಚಿತ್ರರಂಗದ ಹೆಸರು : ವಿಷ್ಣುವರ್ಧನ್ (ಇಟ್ಟಿದ್ದು ಪುಟ್ಟಣ್ಣ ಕಣಗಾಲ್, ನಾಗರಹಾವು ಚಿತ್ರದಲ್ಲಿ)
  ಜನನ : ಸೆ. 18, 1950, ನಿಧನ: ಡಿ. 30, 2009
  ಜನ್ಮಸ್ಥಳ : ಚಾಮುಂಡಿಪುರಂ,ಮೈಸೂರು
  ಕುಟುಂಬ : ವೈದಿಕ ಕುಟುಂಬ
  ತಂದೆ : ಎಚ್ ಎಲ್ ನಾರಾಯಣ ರಾವ್
  ತಾಯಿ : ಕಮಲಾಕ್ಷಮ್ಮ
  ಅಣ್ಣ : ರವಿಕುಮಾರ್
  ತಂಗಿ : ಇಂದ್ರಾಣಿ
  ಅಕ್ಕ : ಜಯಶ್ರೀ
  ತಂಗಿ : ಪೂರ್ಣಿಮಾ
  ತಂಗಿ : ರಮಾ ರಾಮಚಂದ್ರ
  ಪತ್ನಿ : ಭಾರತಿ ವಿಷ್ಣುವರ್ಧನ್
  ಮದುವೆಯಾದ ದಿನ : ಫೆ.27, 1975, ಕುಚಲಾಂಬ ಕಲ್ಯಾಣ ಮಂಟಪ, ಜಯನಗರ, ಬೆಂಗಳೂರು
  ಮಕ್ಕಳು(ದತ್ತು): ಕೀರ್ತಿ ಹಾಗೂ ಚಂದನ
  ಅಳಿಯ : ಅನಿರುದ್ಧ್ ಜತ್ಕರ್(ಕೀರ್ತಿ ವಿಷ್ಣುವರ್ಧನ್ ಪತಿ), ಸಿದ್ದಾರ್ಥ(ಚಂದನ ವಿಷ್ಣುವರ್ಧನ್ ಪತಿ)
  ನಿವಾಸ : ಸುದರ್ಶನ್ ವಿದ್ಯಾಮಂದಿರಶಾಲೆ ಬಳಿ, 26ನೇ 'ಏ' ಮುಖ್ಯರಸ್ತೆ, 4 ನೇ 'ಟಿ' ಬಡಾವಣೆ, ಜಯನಗರ, ಬೆಂಗಳೂರು
  ವಿಷ್ಣು ಕುಟುಂಬದಲ್ಲಿ ಒಂದಾಗಿದ್ದ ಇತರ ಸದಸ್ಯರು : ಶ್ರೀಧರ(ಅಡುಗೆ), ಮಹಮದ್ ಬೇಗ್ (ಚಿತ್ರೀಕರಣದ ಸಮಯದಲ್ಲಿ ಸಹಾಯಕ), ಶ್ರೀನಿವಾಸನ್ (ಮೇಕಪ್ ಮ್ಯಾನ್)
  ಗುರುಗಳು: ಹೆಚ್ .ನರಸಿಂಹಯ್ಯ(ಶಿಕ್ಷಣ),ಡಾ. ಎ ಆರ್ ಸೀತಾರಾಂ(ಯೋಗು), ಬನ್ನಂಜೆ ಗೋವಿಂದಾಚಾರ್ಯ(ಆಧ್ಯಾತ್ಮ)
  ಆಪ್ತ ಗೆಳೆಯರು : ಅಂಬರೀಷ್, ರಮಾನಂದ್, ನಿತ್ಯಾನಂದ್, ರಿನಿ ಎಫೆನ್
  ವಿಷ್ಣುಗೆ ಸ್ಮರಣೀಯ ನಿರ್ದೇಶಕರು: ಪುಟ್ಟಣ್ಣ ಕಣಗಾಲ್, ಭಾರ್ಗವ, ರಾಜೇಂದ್ರ ಸಿಂಗ್ ಬಾಬು, ಕೆವಿ ಜಯರಾಂ, ದಿನೇಶ್ ಬಾಬು, ಎಸ್ ನಾರಾಯಣ್
  ವಿಷ್ಣು ಅಂತಿಮ ಸಂಸ್ಕಾರ ಸ್ಥಳ/ಸ್ಮಾರಕ: ನಟ ದಿ.ಬಾಲಕೃಷ್ಣ ನಿರ್ಮಿತ ಅಭಿಮಾನ್ ಸ್ಟುಡಿಯೋ, ಬೆಂಗಳೂರು

  ವಿದ್ಯಾಭ್ಯಾಸ :
  ಪ್ರಾಥಮಿಕ : ಗೋಪಾಲಸ್ವಾಮಿ ಶಾಲೆ, ಮೈಸೂರು
  ಮಾಧ್ಯಮಿಕ : ಕನ್ನಡ ಮಾದರಿ ಶಾಲೆ, ಬೆಂಗಳೂರು
  ಕಾಲೇಜು : ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಂಗಳೂರು

  ನಟನೆ, ಗಾಯನ, ಚಿತ್ರರಂಗ ಜೀವನ :
  * ವಂಶವೃಕ್ಷ ಮೂಲಕ ಚಿತ್ರರಂಗ ಪ್ರವೇಶ. ನಾಯಕನಟನಾಗಿ ಮೊದಲ ಚಿತ್ರ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು'.
  * ನಾಗರಹಾವು ಚಿತ್ರ ಡಿ.29, 1979ರಲ್ಲಿ ಬೆಂಗಳೂರಿನ ಸಾಗರ್ ಚಿತ್ರ ಮಂದಿರದಲ್ಲಿ ತೆರೆ ಕಂಡು, ಸತತ 25 ವಾರಗಳ ಕಾಲ ಯಶಸ್ವಿ ಪ್ರದರ್ಶನ ಪೂರೈಸಿತು.
  * 1980ರಲ್ಲಿ ಸಿಂಹಜೋಡಿ ಚಿತ್ರದ ಮೂಲಕ ವಿಷ್ಣು ಎಡಗೈಗೆ ಕಡಗ ಧರಿಸಲು ಆರಂಭಿಸಿದರು. ಬೀದರ್ ನ ಗುರುದ್ವಾರದಲ್ಲಿ ಆಶೀರ್ವಾದ ಪೂರ್ವಕವಾಗಿ ಪಡೆದ ಕಡಗ ಕೊನೆಯುಸಿರುವವರೆಗೂ ಜೊತೆಯಲ್ಲೇ ಇತ್ತು.
  * ಗುರುಗಳ ಅಣತಿಯ ಮೇರೆಗೆ ವಿಷ್ಣು ರುದ್ರಾಕ್ಷಿ ಮಾಲೆಯನ್ನು ಇತ್ತೀಚೆಗೆ ತೊಡಲು ಪ್ರಾರಂಭಿಸಿದ್ದರು.

  ಗಾಯಕರಾಗಿ ವಿಷ್ಣುವರ್ಧನ್ :
  ನಾಗರಹೊಳೆ ಚಿತ್ರದಲ್ಲಿ 'ಈನೋಟಕೆ ಮೈಮಾಟಕೆ..'
  ಸಾಹಸಸಿಂಹ ಚಿತ್ರದ 'ಹೇಗಿದ್ದರೂ ನೀನೇ ಚೆನ್ನ..'
  ಜಿಮ್ಮಿ ಗಲ್ಲು ಚಿತ್ರದ 'ತುತ್ತು ಅನ್ನ ತಿನ್ನೋಕೆ..'
  ಸಿಡಿದೆದ್ದ ಸಹೋದರ ಚಿತ್ರದ 'ಬೇಡ ಅನ್ನೋರುಂಟೆ ಹುಡ್ಗಿ..'
  ಮೋಜುಗಾರ ಸೋಗಾಸುಗಾರ ಚಿತ್ರದ 'ಕನ್ನಡವೇ ನಮ್ಮಮ್ಮ..'
  ವಿಶ್ವಪ್ರೇಮಿ ಅಯ್ಯಪ್ಪ. ಜ್ಯೋತಿರೂಪ ಅಯ್ಯಪ್ಪ ಭಕ್ತಿಗೀತೆಗಳ ಆಲ್ಬಂ, ತಾಯಿ ಬನಶಂಕರಿ ಭಕ್ತಿಗೀತೆಗಳು, ಧರ್ಮಸ್ಥಳ ಮಂಜುನಾಥಸ್ವಾಮಿ, ಮಲೆ ಮಾದೇಶ್ವರ, ರಣಚಂಡಿ ಚಾಮುಂಡಿದೇವಿ ಕುರಿತ ಭಕ್ತಿಗಳನ್ನು ಹಾಡಿದ್ದಾರೆ.

  ಪ್ರಶಸ್ತಿ, ಪುರಸ್ಕಾರ, ಬಿರುದು :

  * 7 ಬಾರಿ ರಾಜ್ಯ ಪ್ರಶಸ್ತಿ, 5 ಬಾರಿ ಫಿಲ್ಮಂಫೇರ್, ಸಿನಿಮಾ ಎಕ್ಸ್ ಪ್ರೆಸ್, ಇಂದಿರಾ ಪ್ರತಿಷ್ಠಾನ, ಇಂಡಿಯನ್ ಎಕ್ಸ್ ಪ್ರೆಸ್, ಆರ್ ಎನ್ ಆರ್ ಪ್ರಶಸ್ತಿ, ರಾಜ್ಯೋತ್ಸವ, ಮದ್ರಾಸ್ ಫಿಲ್ಮಂ ಅಸೋಸಿಯೇಷನ್ , ಕೇರಳ ಕಲ್ಚರಲ್ ಮತ್ತು ಆರ್ಟ್ ಪ್ರಶಸ್ತಿ, ಡಾ. ರಾಜ್ ಕುಮಾರ್ ಪ್ರಶಸ್ತಿ.
  * 1988ರಲ್ಲಿ ತೆರೆಕಂಡ ಸುಪ್ರಭಾತ ಚಿತ್ರಕ್ಕೆ 8 ಪ್ರಶಸ್ತಿಗಳು (ಅರಗಿಣಿ ಓದುಗರ ಪ್ರಶಸ್ತಿ, ಫಿಲ್ಮಂಫೇರ್, ಸಿನಿ ಎಕ್ಸ್ ಪ್ರೆಸ್, ತರಂಗಿಣಿ ಬರ್ಕಲಿ, ಆರ್ ನಾಗೇಂದ್ರರಾವ್, ಇಂದಿರಾಪ್ರತಿಷ್ಠಾನ, ಕನ್ನಡ ಚಲನಚಿತ್ರ ಅಭಿಮಾನಿಗಳ ಸಂಘ, ಕಲಾದೇವಿ ಪ್ರಶಸ್ತಿ(ಚೆನ್ನೈ)) ಲಭಿಸಿವೆ. ಇದು ಇನ್ನೂ ದಾಖಲೆಯಾಗಿ ಉಳಿದಿದೆ.
  * ರಾಜ್ಯಪ್ರಶಸ್ತಿ ಪಡೆದ ಚಿತ್ರಗಳು ನಾಗರಹಾವು(1972), ಹೊಂಬಿಸಿಲು(1978), ಬಂಧನ(1984), ಸುಪ್ರಭಾತ(1988), ಲಯನ್ ಜಗಪತಿ ರಾವ್( 1991) , ಲಾಲಿ (1998), ವೀರಪ್ಪನಾಯ್ಕ(1999)
  * ಬೆಂಗಳೂರು ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವ (ಜನವರಿ 6,2006)ದಲ್ಲಿ ವಿಷ್ಣುವರ್ಧನ್ ಗೆ ಗೌರವ ಡಾಕ್ಟರೇಟ್ ಪ್ರದಾನ.

  ವಿಷ್ಣು ಇಷ್ಟವಾದ ಸಂಗತಿಗಳು :
  ಇಷ್ಟವಾದ ಬಣ್ಣ : ಬಿಳಿ
  ಇಷ್ಟವಾದ ಪ್ರಾಣಿ : ನಾಯಿ.
  ಮೆಚ್ಚಿನ ಕ್ರಿಕೆಟರ್ : ವಿವಿಯನ್ ರಿಚರ್ಡ್
  ಆಟಗಳು : ಟೆನ್ನಿಸ್, ಕ್ರಿಕೆಟ್
  ಹಾಲಿವುಡ್ ನಟರು : ಬ್ರೂನೊ, ಅರ್ನಾಲ್ಡ್ ಸ್ವರ್ಜ್ನೆಗ್ಗರ್
  ಹಾಲಿವುಡ್ ನಟಿ : ಮರ್ಲಿನ್ ಮನ್ರೋ
  ನಿರ್ದೇಶಕರು : ಪುಟ್ಟಣ್ಣ ಕಣಗಾಲ್, ಸುಭಾಶ್ ಘಾಯ್, ವಿಲಿಯಂ ವೈಲರ್(ಬೆನ್ ಹರ್ ಚಿತ್ರ ಖ್ಯಾತಿಯ)
  ಬಾಲಿವುಡ್ ನಟ : ಶಮ್ಮಿ ಕಪೂರ್, ರಾಜ್ ಕುಮಾರ್, ದಿಲೀಪ್ ಕುಮಾರ್
  ಬಾಲಿವುಡ್ ನಟಿ : ಮೌಶಮಿ ಚಟರ್ಜಿ, ಶರ್ಮಿಳಾ ಠಾಕೂರ್, ಹೆಲೆನ್

  ಇದು ವಿಷ್ಣುವರ್ಧನ್ ಅವರ ಸಂಕ್ಷಿಪ್ತ ವಿವರ, ಸಮಗ್ರ ವಿವರ ಸಂಗ್ರಹಿಸಲು ಸಹಕರಿಸಿ.. ನಿಮ್ಮ ಬಳಿ ಇರುವ ಮಾಹಿತಿ ನಮಗೆ ತಲುಪಿಸಿ

  Pay your tributes to Dr. Vishnuvardhan. Click Here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X