»   » ತಮಿಳು ಚಿತ್ರದಲ್ಲಿ ನಟಿ ರಮ್ಯಾಗೆ ಮತ್ತೊಂದು ಛಾನ್ಸ್

ತಮಿಳು ಚಿತ್ರದಲ್ಲಿ ನಟಿ ರಮ್ಯಾಗೆ ಮತ್ತೊಂದು ಛಾನ್ಸ್

Posted By:
Subscribe to Filmibeat Kannada

ಸೋಮವಾರವಷ್ಟೆ(ನ.29) ಹುಟ್ಟುಹಬ್ಬ ಆಚರಿಸಿಕೊಂಡ ನಟಿ ರಮ್ಯಾಗೆ ಹುಟ್ಟುಹಬ್ಬದ ಉಡುಗೊರೆ ಎಂಬಂತೆ ತಮಿಳು ಚಿತ್ರದಲ್ಲಿ ಮತ್ತೊಂದು ಆಫರ್ ಸಿಕ್ಕಿದೆ. ಈ ಚಿತ್ರವನ್ನು ವಿಜಯ್ ನಿರ್ದೇಶಿಸುತ್ತಿದ್ದು ವಿಕ್ರಮ್ ನಾಯಕ ನಟನಾಗಿ ಅಭಿನಯಿಸಲಿದ್ದಾರೆ. ಈ ಚಿತ್ರ ಇತ್ತೀಚೆಗಷ್ಟೆ ಚೆನ್ನೈನಲ್ಲಿ ಸೆಟ್ಟೇರಿತ್ತು.

ಅನುಷ್ಕಾ ಮತ್ತು ಅಮಲ ಪೌಲ್‌‍ ಮುಖ್ಯಭೂಮಿಕೆಯಲ್ಲಿರುವ ಚಿತ್ರ. ಚಿತ್ರದಲ್ಲಿ ರಮ್ಯಾ ಅವರದು ಗಮನಸೆಳೆಯುವ ಪಾತ್ರವಂತೆ. ಹಾಲಿವುಡ್‍ನ 'I am Sam' ಚಿತ್ರದ ಆಧಾರವಾಗಿ ಇನ್ನೂ ಹೆಸರಿಡದ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಮಾನಸಿಕ ವಿಕಲಚೇತನನೊಬ್ಬ ತನ್ನ ಮಗನನ್ನು ಪಡೆಯಲು ಮಾಡುವ ಹೋರಾಟವೇ ಚಿತ್ರದ ಕಥಾ ಹಂದರ.

ಅಂತರ್ ಜಾಲದಲ್ಲಿ ಸಿನಿಮಾ ಟಿಕೆಟ್. ಕಾಳಸಂತೆಗೆ ಗುಡ್ ಬೈ!

ಈ ಹಿಂದೆ ಈ ಚಿತ್ರಕ್ಕೆ ದೀವ ಮಗನ್ ಎಂದು ಹೆಸರಿಡಲಾಗಿತ್ತು. ಆದರೆ ಈ ಚಿತ್ರಕ್ಕೆ ಯಾವುದೇ ಹೆಸರನ್ನು ಇಟ್ಟಿಲ್ಲ ಎಂದು ಚಿತ್ರದ ನಿರ್ದೇಶಕ ವಿಜಯ್ ಸ್ಪಷ್ಟಪಡಿಸಿದ್ದಾರೆ. ಶಾ ಅವರ ಛಾಯಾಗ್ರಹಣ, ಜಿ ವಿ ಪ್ರಕಾಶ್ ಅವರ ಸಂಗೀತ ಚಿತ್ರಕ್ಕಿದೆ. ತಮಿಳು ಚಿತ್ರರಂಗದಲ್ಲಿ ರಮ್ಯಾ ಮಿಂಚುತ್ತಿರುವುದು ಆಕೆಯ ಅಭಿಮಾನಿಗಳ ಪಾಲಿಗೆ ಖುಷಿಯ ಸಂಗತಿ.

English summary
Actress Ramya A.K.A Divya Spandana to act in Tamil with Vikram upcoming flick. The latest buzz is the the director is likely to sign Kannada star Divya Spandana to play a prominent role in the film. The untitled movie was launched in Chennai recently.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada