»   »  ಅಂತು ಇಂತು ಪಾಟೀಲರ ಸೆಲ್ಯೂಟ್ ತೆರೆಗೆ

ಅಂತು ಇಂತು ಪಾಟೀಲರ ಸೆಲ್ಯೂಟ್ ತೆರೆಗೆ

Subscribe to Filmibeat Kannada

ಖ್ಯಾತ ನಟ ಬಿ.ಸಿ.ಪಾಟೀಲ್ ಅವರು ನಟಿಸಿ, ನಿರ್ಮಿಸಿ ಹಾಗೂ ನಿರ್ದೇಶಿಸಿರುವ 'ಸೆಲ್ಯೂಟ್ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕ ಬಯಸುವ ಎಲ್ಲಾ ಅಭಿರುಚಿಗಳು ನಮ್ಮ ಚಿತ್ರದಲ್ಲಿದ್ದು, ಖಂಡಿತಾ ನೋಡುಗರು ನಮ್ಮ ಚಿತ್ರವನ್ನು ಮೆಚ್ಚಲಿದ್ದಾರೆ ಎಂದು ಪಾಟೀಲರು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ಕಲಾವಿದರಾಗಿ ಕನ್ನಡ ಚಿತ್ರರಸಿಕರ ಮನಸೂರೆಗೊಂಡು, ರಾಜಕಾರಣಿಯಾಗಿ ರಾಜ್ಯಕ್ಕೆ ಹಿತ ಬಯಸುವ ಅವರು ಈಗ ಮತ್ತೆ ಚಿತ್ರರಂಗದತ್ತ ಹೆಜ್ಜೆ ಹಾಕಿ 'ಸೆಲ್ಯೂಟ್ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದ ನಿರ್ದೇಶಕರೂ ಆಗಿರುವ ಬಿ.ಸಿ.ಪಾಟೀಲರು ತಮ್ಮ ಬದುಕಿನಲ್ಲಿ ನಡೆದ ನೈಜ ಘಟನೆಗಳನ್ನು ಚಿತ್ರದ ಸನ್ನಿವೇಶಕ್ಕೆ ಬಳಸಿಕೊಂಡಿದ್ದಾರೆ.

ಓಂ ಶಕ್ತಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಬಿ.ಸಿ.ಪಾಟೀಲ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಸಾಯಿ ಕಾರ್ತಿಕ್ ಸಂಗೀತ, ನಿರಂಜನ ಬಾಬು ಛಾಯಾಗ್ರಹಣ, ರವಿವರ್ಮ ಸಾಹಸ, ಕೆ.ವಿ.ಮಂಜುನಾಥ ರೆಡ್ಡಿ, ಶಂಕರ್ ಸಹ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಬಿ.ಸಿ.ಪಾಟೀಲ್, ಅಶ್ವಿನಿ, ಬಿ.ವಿ.ರಾಧ, ಶೋಭರಾಜ್, ಅನೂಪ್, ವಿಜಯ್ ಕೌಂಡಿನ್ಯ, ಕೃತಿಕಾ, ಪ್ರಕಾಶ್, ಸತ್ಯಜಿತ್, ಹರೀಶ್ ರಾಯ್, ಅಶೋಕ್ ಖೇಣಿ, ಲಕ್ಷ್ಮಣ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada