»   »  ರೌಡಿಗಳಿಂದ 'ದೇವದಾಸ್' ಮೇಲೆ ಹಲ್ಲೆ

ರೌಡಿಗಳಿಂದ 'ದೇವದಾಸ್' ಮೇಲೆ ಹಲ್ಲೆ

Posted By:
Subscribe to Filmibeat Kannada

ರೋಹಿಣಿ ಕ್ರಿಯೇಷನ್ಸ್ ಲಾಂಛನದಲ್ಲಿ ಎ.ಬಿ.ಸಿ.ಡಿ. ಶಾಂತಕುಮಾರ್, ಕಥೆ, ಚಿತ್ರಕಥೆ, ರಚಿಸಿ ನಿರ್ಮಾಣದ ಜೊತೆ ನಿರ್ದೇಶನ ಮಾಡುತ್ತಿರುವ 'ದೇವದಾಸ್' ಚಿತ್ರಕ್ಕೆ ಈಗಾಗಲೇ ಶೇ.75 ಭಾಗದಷ್ಟು ಚಿತ್ರೀಕರಣ ಪೂರೈಸಿದೆ. ಪ್ರೀತಿಗೆ ಮತ್ತೊಂದು ಹೆಸರೇ ದೇವದಾಸ್. ನಾಯಕ ದೇವದಾಸ್‌ಗೆ ನಾಯಕಿಯ ಪ್ರೀತಿಯ ಗಳಿಸಬೇಕೆಂಬ ಛಲ.

ಆದರೆ ನಾಯಕಿಗೆ ಆತನನ್ನು ಕಂಡರೆ ಆಗೊಲ್ಲ ಇವನ ಕಾಟವನ್ನು ತಡೆಯಲಾರದೆ ಕೆಲ ಬಾಡಿಗೆ ರೌಡಿಗಳನ್ನು ಬಿಟ್ಟು ಆತನನ್ನು ಹೊಡೆಸುತ್ತಾಳೆ. ಇಷ್ಟಾದರೂ ನಾಯಕನಿಗೆ ಆಕೆಯ ಮೇಲಿನ ಪ್ರೀತಿ ಎಳ್ಳಷ್ಟು ಕಡಿಮೆಯಾಗುವುದಿಲ್ಲ. ಈ ಮೇಲ್ಕಂಡ ದೃಶ್ಯವನ್ನು ಮಹಾಲಕ್ಷ್ಮೀ ಲೇಔಟ್‌ನ ಕಮಲಮ್ಮನ ಗುಂಡಿ ಆಟದ ಮೈದಾನದಲ್ಲಿ ನಾಯಕ ಯೋಗೇಶ್, ನಾಯಕಿ ಜಿನಾಲ್ ಪ್ಯಾಂಡೆ ಹಾಗೂ ಸಾಹಸ ಕಲಾವಿದರು ಪಾಲ್ಗೊಂಡಿದ್ದ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಯಿತು.

ಜಿ.ರೇಣುಕುಮಾರ್, ಛಾಯಾಗ್ರಹಣ, ಹರಿಕೃಷ್ಣ ಸಂಗೀತ, ಎಸ್.ಮಂಜುನಾಥ ಸಂಭಾಷಣೆ, ಶ್ಯಾಂ ಸಂಕಲನ, ಡಿಫರೆಂಟ್‌ಡ್ಯಾನಿ ಸಾಹಸ, ಜಿ.ನರಸಿಂಹ, ಬಿ.ಎ. ಕಿರಣ್‌ಕುಮಾರ್ ಸಹನಿರ್ಮಾಪಕರಾಗಿದ್ದು ವಿಜಿ ಭದ್ರಾವತಿ, ಮೋಹನ್ ಮಾಳಗಿ, ಎಸ್. ಕೃಷ್ಣ ಸಹ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಯೋಗೇಶ್, ಜೀನಲ್ ಪ್ಯಾಂಡೆ, ತಾರಾ, ರಂಗಾಯಣ ರಘು ರಮೇಶ್ ಭಟ್, ಸಾಧುಕೋಕಿಲ, ಅವಿನಾಶ್, ಶರಣ್, ಧರ್ಮ, ಅರವಿಂದ್, ಪ್ರಮೀಳಾ ಜೋಷಾಯ್ ಮುಂತಾದವರು ಅಭಿನಯಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada