Just In
Don't Miss!
- News
ಗಣರಾಜ್ಯೋತ್ಸವ ಪರೇಡ್ನಲ್ಲಿ ಇದೇ ಮೊದಲ ಬಾರಿ ಲಡಾಖ್ ಸ್ತಬ್ಧಚಿತ್ರ
- Sports
ಟೀಮ್ ಇಂಡಿಯಾದ ನಿರ್ಭೀತ ಆಟಕ್ಕೆ ಆ ಇಬ್ಬರು ಕಾರಣ ಎಂದ ಭರತ್ ಅರುಣ್
- Finance
ಜನವರಿ 1ರಿಂದ 22ರ ತನಕ ಎಫ್ ಪಿಐನಿಂದ ರು. 18,456 ಕೋಟಿ ಹೂಡಿಕೆ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತೀರ್ಥಹಳ್ಳಿಗೆ ಪಾದ ಬೆಳೆಸಿದ ಪವರ್ ಸ್ಟಾರ್ ಪರಮಾತ್ಮ
ಯೋಗರಾಜ್ ಭಟ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ಚಿತ್ರ ಪರಮಾತ್ಮ ಚಿತ್ರೀಕರಣ ಭರದಿಂದ ಸಾಗಿದೆ. ಚಿತ್ರಕ್ಕೆ ಗ್ರಾಫಿಕ್ಸ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು ಅದಾದ ಕೂಡಲೆ ಪುನೀತ್ ಪುನಃ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಚಲನಚಿತ್ರ ವಿತರಕ ಜಯಣ್ಣ ಹಾಗೂ ಯೋಗರಾಜ್ ಭಟ್ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.
ಈಗಾಗಲೆ ಸಕಲೇಶಪುರ ಹಾಗೂ ಮಣಿಪಾಲದಲ್ಲಿ ಪರಮಾತ್ಮ ಏಳು ದಿನಗಳ ಚಿತ್ರೀಕರಣ ಮುಗಿಸಿಕೊಂಡಿದ್ದಾನೆ. ಶೀಘ್ರದಲ್ಲೇ ತೀರ್ಥಹಳ್ಳಿಗೆ ಪರಮಾತ್ಮ ಪಾದಬೆಳೆಸಲಿದ್ದಾನೆ. ಅಲ್ಲಿನ ಸುಂದರ ತಾಣಗಳಲ್ಲಿ ಪರಮಾತ್ಮನ ಬಹುತೇಕ ಭಾಗದ ಚಿತ್ರೀಕರಣ ನಡೆಯಲಿದೆ. ಪುನೀತ್ ಹಾಗೂ ದೀಪಾ ಸನ್ನಿದ್ಧಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ತೀರ್ಥಹಳ್ಳಿಯಲ್ಲಿ ನಡೆಯುವ ಚಿತ್ರೀಕರಣಕ್ಕೆ ಐಂದ್ರಿತಾ ರೇ ಹಾಗೂ ರಮ್ಯಾ ಬಾರ್ನಾ ಸೇರ್ಪಡೆಯಾಗಲಿದ್ದಾರೆ. ಪರಮಾತ್ಮ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಹಾಗೂ ವಿ ಹರಿಕೃಷ್ಣ ಅವರ ಸಂಗೀತವಿದೆ. ಚಿತ್ರದ ತಾರಾಬಳಗದಲ್ಲಿ ಭಟ್ಟರ ಫೇವರೇಟ್ ತಾರೆಗಳಾದ ರಂಗಾಯಣ ರಘು, ಅನಂತನಾಗ್ ಇದ್ದಾರೆ. ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯ ಚಿತ್ರಕ್ಕಿದೆ.