»   »  ಏಪ್ರಿಲ್ 3 ರಿಂದ ರಾಮು ನಿರ್ಮಾಣದಲ್ಲಿ ರಜನಿ

ಏಪ್ರಿಲ್ 3 ರಿಂದ ರಾಮು ನಿರ್ಮಾಣದಲ್ಲಿ ರಜನಿ

Posted By:
Subscribe to Filmibeat Kannada
Upendra in Rajani
ರಾಮು ಎಂಟರ್‌ಪ್ರೈಸಸ್ ಲಾಂಛನದಲ್ಲಿ ಉಪೇಂದ್ರ ಅಭಿನಯಿಸುತ್ತಿರುವ ಮತ್ತೊಂದು ಅದ್ದೂರಿ ಚಿತ್ರ ರಜನಿ ಏಪ್ರಿಲ್ 3ರಿಂದ ಚಿತ್ರೀಕರಣ ಆರಂಭಿಸಲಿದೆ.ಯುಗಾದಿ ಹಬ್ಬದ ಕೊಡುಗೆಯಾಗಿ ಮಾಲಾಶ್ರೀ ಅಭಿನಯದ ಅದ್ದೂರಿ ಚಿತ್ರ 'ಕಿರಣ್ ಬೇಡಿ' ಬಿಡುಗಡೆ ಮಾಡಿದ ನಂತರ ನಿರ್ಮಾಪಕ ರಾಮು ಕೈಗೆತ್ತಿಕೊಂಡಿರುವ ಮತ್ತೊಂದು ಅದ್ದೂರಿ ಚಿತ್ರ ಇದಾಗಿದೆ.

ರಾಮು ನಿರ್ಮಾಣದ 27ನೇ ಚಿತ್ರ ಇದಾಗಲಿದ್ದು, ಮೈಸೂರು ಹಾಗೂ ಬೆಂಗಳೂರು ಸುತ್ತಮುತ್ತ ಸತತ 60 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು,ಒಂದೇ ಹಂತದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ನಿರ್ಮಾಪಕ ರಾಮು ತಿಳಿಸಿದ್ದಾರೆ.ಚಿತ್ರಕ್ಕೆ ರಾಂ ನಾರಾಯಣ್ ಸಂಭಾಷಣೆ, ಜನಾರ್ದನ್ ಛಾಯಾಗ್ರಹಣ, ಹಂಸಲೇಖಾ ಸಂಗೀತ, ಇಸ್ಮಾಯಿಲ್ ಕಲೆ, ಶ್ರೀನಿವಾಸ್‌ಕುಮಾರ್ ನಿರ್ದೇಶನ ಸಹಾಯ, ಅನಿಲ್, ಸೋಮು ನಿರ್ಮಾಣ-ನಿರ್ವಹಣೆಯಿದ್ದು, ಚಿತ್ರದ ಸಾಹಸ ಚಿತ್ರಕಥೆ ಮತ್ತು ನಿರ್ದೇಶನ ಥ್ರಿಲ್ಲರ್ ಮಂಜು.

ಉಪೇಂದ್ರ, ಆರತಿ ಛಾಬ್ರಿಯಾ, ಚರಣ್‌ರಾಜ್, ದೊಡ್ದಣ್ಣ, ಅವಿನಾಶ್, ರಮೇಶ್‌ಭಟ್, ರಂಗಾಯಣ ರಘು, ಕೋಮಲ್‌ಕುಮಾರ್, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಸತ್ಯಜಿತ್, ಪವಿತ್ರಾ ಲೋಕೇಶ್, ಚಿತ್ರಾಶೆಣೈ, ತುಳಸಿ, ಮುಕುಲ್‌ದೇವ್ (ಮುಂಬೈ), ದಂಡಪಾಣಿ (ಚೆನ್ನೈ) ಶರತ್ ಲೋಹಿತಾಶ್ವ ಮುಂತಾದವರ ಅಭಿನಯವನ್ನು ಚಿತ್ರ ಹೊಂದಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ರಜನಿ ಚಿತ್ರದ ನಾಯಕಿಯಾಗಿ ಆರತಿ ಛಾಬ್ರಿಯಾ
ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಉಪೇಂದ್ರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada