»   » ವಿಷ್ಣುವರ್ಧನ್ ಅಂತಿಮ ಯಾತ್ರೆ ಆರಂಭ

ವಿಷ್ಣುವರ್ಧನ್ ಅಂತಿಮ ಯಾತ್ರೆ ಆರಂಭ

Subscribe to Filmibeat Kannada
Last journey of Vishnuvardhan starts
ಬೆಂಗಳೂರು, ಡಿ. 30 : ಬಸವನಗುಡಿ ನ್ಯಾಶನಲ್ ಕಾಲೇಜಿನಲ್ಲಿ ಅಂತಿಮ ದರ್ಶನದ ಬಳಿಕ ಸಾಹಸಸಿಂಹ ವಿಷ್ಣುವರ್ಧನ್ ಅಂತಿಮಯಾತ್ರೆ ಪ್ರಾರಂಭವಾಗಿದೆ. ಉತ್ತರಹಳ್ಳಿಯಲ್ಲಿರುವ ಬಾಲಣ್ಣನ ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಬನಶಂಕರಿ ಮತ್ತು ಪದ್ಮನಾಭನಗರ ಮುಖಾಂತರವಾಗಿ ಉತ್ತರಹಳ್ಳಿಯ ಅಭಿಮಾನ್ ಸ್ಟುಡಿಯೋ ತಲುಪಲಿದೆ. ಅಲ್ಲಿ ಅಭಿಮಾನ್ ಸ್ಟುಡಿಯೋ ಅಭಿಮಾನದಿಂದ ವಿಷ್ಣುಗೆ ನೀಡಿರುವ ಎರಡು ಎಕರೆ ಜಮೀನಿನಲ್ಲಿ ವಿಷ್ಣು ಪಂಚಭೂತಗಳಲ್ಲಿ ವಿಲೀನರಾಗಲಿದ್ದಾರೆ. ದಾರಿಗುಂಟ ಯಾವುದೇ ಅವಗಢ ಸಂಭವಿಸದಂತೆ ಭಾರೀ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಅಂತಿಮಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

ಅಂತಿಮ ದರುಶನ ಪಡೆಯದ ಬಸವನಗುಡಿಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದತ್ತ ಧಾವಿಸುತ್ತಿದ್ದಾರೆ. ತಮ್ಮ ನಾಯಕನಟನನ್ನು ಕಳೆದುಕೊಂಡಿರುವ ಅಭಿಮಾನಿಗಳ ಆಕ್ರೋಶವಂತೂ ಮುಗಿಲು ಮುಟ್ಟಿದೆ. ನಗರದಾದ್ಯಂತ 40ಕ್ಕೂ ಹೆಚ್ಚು ಬಿಎಂಟಿಸಿ ಬಸ್ಸುಗಳು ಜಖಂಗೊಂಡಿವೆ. ಈ ಕಾರಣದಿಂದಾಗಿ ಸರಕಾರ ಉತ್ತರಹಳ್ಳಿ ಮಾರ್ಗದಲ್ಲಿ ಬಿಎಂಟಿಸಿ ಓಡಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಅಭಿಮಾನಿಗಳಿಗಾಗಿ ಅಭಿಮಾನ್ ಮಾರ್ಗ : ಅಭಿಮಾನಿಗಳು ಬನಶಂಕರಿ, ದೇವೇಗೌಡ ಪೆಟ್ರೋಲ್ ಬಂಕ್, ಪದ್ಮನಾಭನಗರ, ಉತ್ತರಹಳ್ಳಿ, ಚಿಕ್ಕಲಸಂದ್ರ ಮಾರ್ಗವಾಗಿ ಅಭಿಮಾನ್ ಸ್ಟುಡಿಯೋವನ್ನು ತಲುಪಬಹುದು. ಮೈಸೂರು ರಸ್ತೆ ಮುಖಾಂತರ ಬರುವವರು ಕೆಂಗೇರಿ ಉಪನೊಂದಣಾಧಿಕಾರಿ ಕಚೇರಿಗಿಂತ ಮೊದಲಿರುವ ತಿರುವಿನಲ್ಲಿ ಎಡಕ್ಕೆ ತಿರುಗಿದರೆ ನೇರವಾಗಿ ಅಭಿಮಾನ್ ಸ್ಟುಡಿಯೋಗೆ ಬರಬಹುದು. ಕನಕಪುರ ಮಾರ್ಗವಾಗಿ ಬರುವವರು ಕೋಣನಕುಂಟೆ ಕ್ರಾಸಿನಲ್ಲಿ ಬಲಕ್ಕೆ ತಿರುವಿಕೊಂಡರೆ ವಸಂತಪುರ ಮಾರ್ಗವಾಗಿ ನೇರವಾಗಿ ಅಭಿಮಾನ್ ಸ್ಟುಡಿಯೋ ತಲುಪಬಹುದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada