For Quick Alerts
  ALLOW NOTIFICATIONS  
  For Daily Alerts

  ಜೀವರಾಜ್ ಆಳ್ವ ಪುತ್ರಿ ಜೊತೆ ವಿವೇಕ್ ಮದುವೆ

  By Rajendra
  |

  ಬಾಲಿವುಡ್ ನಟ ವಿವೇಕ್ ಒಬೆರಾಯ್ ಗೆ ಕಂಕಣ ಕೂಡಿಬಂದಿದೆ. ಜೆಡಿ(ಯು) ಮುಖಂಡ ದಿವಂಗತ ಜೀವರಾಜ್ ಆಳ್ವ ಅವರ ಮಗಳ ಕೈಹಿಡಿಯಲಿದ್ದಾರೆ ವಿವೇಕ್. ಜೀವರಾಜ್ ಆಳ್ವ ಅವರ ಪತ್ನಿ ಖ್ಯಾತ ನೃತ್ಯಪಟು ನಂದಿನಿ ಆಳ್ವ ಅವರ ಪುತ್ರಿ ಪ್ರಿಯಾಂಕರನ್ನು ವಿವೇಕ್ ಮದುವೆಯಾಗುತ್ತಿದ್ದಾರೆ. ಈ ಮೂಲಕ ವಿವೇಕ್ ಕರ್ನಾಟಕದ ಅಳಿಯ ಎನಿಸಿಕೊಳ್ಳುತ್ತಿದ್ದಾರೆ.

  ಸೆಪ್ಟೆಂಬರ್ ಮೊದಲ ವಾರದಲ್ಲಿ ವಿವೇಕ್ ಮತ್ತು ಪ್ರಿಯಾಂಕಾರ ನಿಶ್ಚಿತಾರ್ಥ ನಡೆಯಲಿದೆ ಎಂದು ಆಳ್ವ ಕುಟುಂಬ ಮೂಲಗಳು ದೃಢಪಡಿಸಿವೆ. ಪ್ರಿಯಾಂಕಾ ಅವರು ಲಂಡನ್ ನಲ್ಲಿ ಶಿಕ್ಷಣ ಪಡೆದಿದ್ದಾರೆ. ಇವರಿಬ್ಬರ ವಿವಾಹವು ಅಕ್ಟೋಬರ್ 29ರಂದು ನೆರವೇರಲಿದೆ.

  ಈ ಹಿಂದೆ ವಿವೇಕ್ ತನ್ನ ಗೆಳತಿ ಗುರುಪ್ರೀತ್ ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಅವರ ನಿಶ್ಚಿತಾರ್ಥ ಆರಂಭದಲ್ಲೆ ಮುರಿದು ಬಿದ್ದಿತ್ತು. ಬಾಲಿವುಡ್ ನ ಕೆಲವು ನಟಿಯರ ಜೊತೆ ವಿವೇಕ್ ಹೆಸರು ಕೇಳಿಬಂದಿತ್ತು. ಅವರಲ್ಲಿ ಮುಖ್ಯವಾಗಿ ನೀರು ಬಾಜ್ವ, ಜಾಕ್ವಲೈನ್ ಫರ್ನಾಂಡೀಸ್ ಹಾಗೂ ಐಶ್ವರ್ಯ ರೈ ಸಹ ಇದ್ದರು. ಕಟ್ಟಕಡೆಗೆ ಕನ್ನಡತಿಯ ಕೈಹಿಡಿಯುತ್ತಿದ್ದಾರೆ ವಿವೇಕ್.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X