For Quick Alerts
  ALLOW NOTIFICATIONS  
  For Daily Alerts

  ಅಮಿತ್ ಕೈಹಿಡಿದ ಸಿನಿಮಾ ತಾರೆ ಡೈಸಿ ಬೋಪಣ್ಣ

  By Rajendra
  |

  ಕನ್ನಡ, ತೆಲುಗು, ತಮಿಳು ಚಿತ್ರರಂಗದ ಸಿನಿಮಾ ತಾರೆ ಡೈಸಿ ಬೋಪಣ್ಣ ಶನಿವಾರ (ಮೇ.28) ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರ ಮಾಜಿ ಸೆಕ್ರೆಟರಿ ಪ್ರಕಾಶ್ ಜಾಜು ಪುತ್ರ ಅಮಿತ್ ಅವರನ್ನು ಡೈಸಿ ವರಿಸಿದ್ದಾರೆ. ಇವರ ಮದುವೆ ಇಂಡೋರ್‌‍ನಲ್ಲಿ ನೆರೆವೇರಿದೆ.

  ಅಮಿತ್ ಅವರು ಸಲಹಾ ಕಂಪನಿಯ ವಂಚನೆ ಮತ್ತು ತನಿಖೆ ವಿಭಾಗದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿಂದಿಯಲ್ಲಿ ಅಕ್ಷಯ್ ಕುಮಾರ್ ಜೊತೆ 'ಗರಮ್ ಮಸಾಲಾ' ಚಿತ್ರದಲ್ಲೂ ಡೈಸಿ ಅಭಿನಯಿಸಿದ್ದರು. ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಅಭಿನಯಿಸುವ ಮೂಲಕ ಸೈ ಅನ್ನಿಸಿಕೊಂಡಿದ್ದರು ಡೈಸಿ.

  ಕನ್ನಡದಲ್ಲಿ ಕಮಲ ಹಾಸನ್ ಜೊತೆ ರಾಮ ಶಾಮ ಭಾಮ, ಉಪೇಂದ್ರ ಜೊತೆ ಐಶ್ವರ್ಯ, ರಮೇಶ್ ಅರವಿಂದ ಜೊತೆ ಸತ್ಯವಾನ್ ಸಾವಿತ್ರಿ ಸೇರಿದಂತೆ ಭಗವಾನ್, ಬಿಂಬ, ತವರಿನ ಸಿರಿ, ಜಾಕ್ ಪಾಟ್, ಗಾಳಿಪಟ, ಒಲವೇ ಜೀವನ ಲೆಕ್ಕಾಚಾರ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Actress Daisy Bopanna has entered into wedlock with Amit, son of Priyanka Chopra's former secretary Prakash Jaju on Saturday, 28th May, 2011 in Indore. She acted in the Telugu films Satyavan Saavithri, Rama Shama Bhama , Thavarina Siri, Gaalipata etc.
  Tuesday, May 31, 2011, 14:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X