For Quick Alerts
  ALLOW NOTIFICATIONS  
  For Daily Alerts

  ಪ್ರಶಸ್ತಿ ಆಯ್ಕೆ ಸಮಿತಿಗೆ ನೋ ಎಂದ ಭಾರತಿ ವಿಷ್ಣುವರ್ಧನ್

  By Rajendra
  |

  2009-10 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿ ಅಧ್ಯಕ್ಷ ಸ್ಥಾನನ್ನು ಕನ್ನಡ ಚಿತ್ರರಂಗದಹಿರಿಯ ತಾರೆ ಭಾರತಿ ವಿಷ್ಣುವರ್ಧನ್ ಅವರು ಒಲ್ಲೆ ಎಂದಿದ್ದಾರೆ. ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದಆಪ್ತರಕ್ಷಕ ಹಾಗೂ ಮಾಸ್ಟರ್ ಚಿತ್ರಗಳಿರುವುದೇ ಇದಕ್ಕೆ ಕಾರಣ.

  ಇದನ್ನು ಗಮನಿಸದ ಕರ್ನಾಟಕ ಘನ ಸರಕಾರ ತರಾತುರಿಯಲ್ಲಿ ಭಾರತಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ತಮ್ಮ ಪತಿಯ ಚಿತ್ರಗಳು ಸ್ಪರ್ಧೆಯಲ್ಲಿರುವ ಕಾರಣ ತಾವು ಸ್ಥಾನವನ್ನು ಅಲಂಕರಿಸುತ್ತಿಲ್ಲ ಎಂದು ಭಾರತಿ ಅವರು ಸ್ಪಷ್ಟಪಡಿಸಿದ್ದಾರೆ. ಭಾರತಿ ಅವರ ಪ್ರಕಾರ, ಆಪ್ತರಕ್ಷಕ ಚಿತ್ರ ಕನಿಷ್ಠ ಆರು ವಿಭಾಗಗಳಲ್ಲಿ ಪ್ರಶಸ್ತಿ ಬಾಚುವ ಸಾಧ್ಯತೆಗಳಿವೆಯಂತೆ.

  ಚಲನಚಿತ್ರ ನಿರ್ದೇಶಕರಾದ ಮಹೇಂದ್ರ , ರಂಗಕರ್ಮಿ ಕಾಸರಗೋಡು ಚಿನ್ನ, ನಿರ್ದೇಶಕರಾದಎಂ.ಎಸ್. ರಾಜಶೇಖರ್, ಸಂಗೀತ ನಿರ್ದೇಶಕರಾದ ರಾಜನ್(ನಾಗೇಂದ್ರ) ಹಾಗೂ ಕಲಾವಿದರಾದ ಲೋಹಿತಾಶ್ವ, ಸಾಹಿತಿ ಬೋಳುವಾರು ಮಹಮ್ಮದ್ ಕುಂಞ್, ಪತ್ರಕರ್ತ ಚ.ಹ. ರಘುನಾಥ್ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Kannada films renowned actress Bharathi Vishnuvardhan says no to heads the Karnataka State Film Awards committee for 2009-2010. Because Dr Vishnuvardhana’s ‘Aptha Rakshaka’, ‘Master’ in the fray for awards.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X