»   »  ಈ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತಿಲ್ಲ: ಪ್ರೇಮ್

ಈ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತಿಲ್ಲ: ಪ್ರೇಮ್

Subscribe to Filmibeat Kannada
Director Prem
ಈ ಬಾರಿಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ನಟ, ನಿರ್ದೇಶಕ ಪ್ರೇಮ್ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಅವರ ಬಿಜೆಪಿ ಸೇರ್ಪಡೆ, ಮಂಡ್ಯ ಲೋಕಸಭೆಯಿಂದ ಕಣಕ್ಕಿಳಿಯುತ್ತಾರೆ ಎಂಬ ಮಾತುಗಳಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ.

'ರಾಜ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸುವಂತೆ ಬಿಜೆಪಿಯಿಂದ ಕರೆ ಬಂದಿತ್ತು. ಆದರೆ ಸಿನಿಮಾ, ಚಿತ್ರೀಕರಣ ಅಂತ ಬಿಡುವಿಲ್ಲದ ಕಾರಣ ಸದ್ಯಕ್ಕೆ ಚುನಾವಣಾ ಅಖಾಡಕ್ಕ್ಕಿಳಿಯಲು ಸಾಧ್ಯವಾಗುತ್ತಿಲ್ಲ. ಮುಂಬರುವ ಚುನಾವಣೆಗೆ ನೋಡೋಣ. ಈ ಬಗ್ಗೆ ಅಂಬರೀಶ್ ಅವರು ಅಂತಿಮ ನಿರ್ಧಾರ ಕೈಗೊಳ್ಳುತ್ತ್ತಾರೆ ಎಂದರು.

ನಿರ್ದೇಶಕ ಪ್ರೇಮ್ ಗೆ ಇರುವ ಚರಿಷ್ಮಾವನ್ನು ಬಳಸಿಕೊಳ್ಳಲು ತೆರೆಮರೆಯಲ್ಲಿ ಬಿಜೆಪಿ ಭಾರಿ ಸಾಹಸ ನಡೆಸಿತ್ತು. ಹ್ಯಾಟ್ರಿಕ್ ನಿರ್ದೇಶಕ ಎಂಬ ಖ್ಯಾತಿ ಹೊಂದಿರುವ ಪ್ರೇಮ್ ಅವರು ಮಂಡ್ಯದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದನ್ನೆಲ್ಲಾ ದೃಷ್ಟಿಯಲ್ಲಿಟ್ಟುಕೊಂಡ ಬಿಜೆಪಿ ಮುಖಂಡರು ಪ್ರೇಮ್ ಗೆ ಗಾಳಹಾಕಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ರಾಜಕೀಯಕ್ಕೆ ನಿರ್ದೇಶಕ ಪ್ರೇಮ್ ಪ್ರವೇಶ ಸಾಧ್ಯತೆ
ಲೋಕಸಭೆ ಚುನಾವಣೆಗೆ ತಾರೆಗಳ ಸಮರ
ಬಳ್ಳಾರಿ ರೆಡ್ಡಿಗಳ ವಿರುದ್ಧ ನಟ ಸುದೀಪ್ ಸ್ಪರ್ಧೆ!?
ತುಮಕೂರಿನಿಂದ ನಟ ಅಶೋಕ್ ಲೋಕಸಭೆಗೆ
'ಮೈಲಾರಿ'ಯಾಗಿ ಮತ್ತೆ ನಟನೆಗೆ ಮರಳಿದ ಪ್ರೇಮ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada