ಹುಬ್ಬಳ್ಳಿಯಲ್ಲಿ ಸಾದಾ ಸೀದಾ ಹೈದ ಮೈಲಾರಿ ಶತದಿನೋತ್ಸವ

By Rajendra

ಊರಿಂದ ಓಡಿಬಂದ ಜೋಗಿ ನಾನಲ್ಲಾರಿ, ಓಮಿಂದ ಎದ್ದುಬಂದಸತ್ಯಾನು ಅಲ್ಲಾರಿ, ಹಳ್ಳಿಯ ಸೀದಾ ಸಾದಾ ಹೈದಮೈಲಾಪುರದ ಮೈಲಾರಿ...ಎಂದು ಬಂದ 'ಮೈಲಾರಿ' ಏಪ್ರಿಲ್ 1ನೇ ತಾರೀಖಿಗೆ ಶತಕ ಬಾರಿಸಲಿದ್ದಾನೆ. ಬಹಳ ಸುದೀರ್ಘ ಸಮಯದ ಬಳಿಕ ಶಿವರಾಜ್ ಕುಮಾರ್ ಚಿತ್ರ ಶತಕ ಸಿಡಿಸಿರುವುದು ಚಿತ್ರೋದ್ಯಮದಲ್ಲಿ ಹೊಸ ಅಲೆ ಎಬ್ಬಿಸಿದೆ.

ಬೆಂಗಳೂರಿನ ನರ್ತಕಿ ಸೇರಿದಂತೆ ರಾಜ್ಯದ ಇತರೆಡೆ 'ಮೈಲಾರಿ' ಶತಕ ಸಂಭ್ರಮದಲ್ಲಿದೆ. ಶಿವರಾಜ್ ಕುಮಾರ್ ಅವರ 99ನೇ ಚಿತ್ರ ನೂರರ ಅಂಕಿ ದಾಟುತ್ತಿರುವುದು
ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಹಾಗೂ ಕೆ ಪಿ ಶ್ರೀಕಾಂತ್ ಅವರ ಉತ್ಸಾಹವನ್ನು ಇಮ್ಮಡಿಸಿದೆ. 'ಮೈಲಾರಿ' ಚಿತ್ರದ ಪ್ರಚಾರ ತಂತ್ರಕ್ಕೆ ಜೈ ಎನ್ನಲೇಬೇಕು.

ಏಪ್ರಿಲ್ 17ರಂದು 'ಮೈಲಾರಿ' ಶತದಿನೋತ್ಸವ ಸಂಭ್ರಮ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಅಂದು ಸಂಜೆ 6 ಗಂಟೆಗೆ ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಮೈಲಾರಿ ಸಡಗರ, ಸಂಭ್ರಮವನ್ನು ಶಿವಣ್ಣನ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು. ಶಿವಣ್ಣನ ವೃತ್ತಿ ಜೀವನದಲ್ಲಿ ಮೈಲಾರಿ ಹೊಸ ತಿರುವು ನೀಡಿದ ಚಿತ್ರ ಎನ್ನಬಹುದು.

ಇದೇ ಸಂತಸದಲ್ಲಿ ನಿರ್ಮಾಪಕ ಕನಕಪುರ ಶ್ರೀನಿವಾಸ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಶಿವಣ್ಣ ನಾಯನ ನಟನಾಗಿ 'ಶಿವ' ಚಿತ್ರ ಸೆಟ್ಟೇರಲು ಸಿದ್ಧವಾಗಿದೆ. ಈ ಚಿತ್ರಕ್ಕೆ ಮಾಸ್ ಚಿತ್ರಗಳ ಸರದಾರ ಓಂ ಪ್ರಕಾಶ್ ರಾವ್ ಆಕ್ಷನ್, ಕಟ್ ಹೇಳಲಿದ್ದಾರೆ. ಈ ಹಿಂದೆ ಶಿವಣ್ಣನ ಕೈಗೆ 'ಎಕೆ 47' ಕೊಟ್ಟು 'ಸಿಂಹದ ಮರಿ' ಮೂಲಕ ಉತ್ತಮ ಬ್ರೇಕ್ ನೀಡಿದ್ದರು. ಈ ಚಿತ್ರಕ್ಕೆ ಕ್ಯಾಮೆರಾ ಸತ್ಯ ಹೆಗಡೆ.

More from Filmibeat

English summary
Shivarajkumar lead film Mylari has completing 100 days on 1st of April 2011. The 100 days function to be held in Hubli on 17th of April in Hubli at Nehru stadium. Meanwhile producer Kanakapura Srinivas in RS Productions announced ‘Shiva’ as Shivarajkumar new film with KP Srikanth. The movie is directing by N Omprakash Rao.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X