For Quick Alerts
  ALLOW NOTIFICATIONS  
  For Daily Alerts

  ಸಾಮೂಹಿಕ ವಿವಾಹದಲ್ಲಿ ನವನೀತ್ ಕೌರ್ ರಾಣಾ ಮದುವೆ

  By Rajendra
  |

  ಕನ್ನಡ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಹಾಟ್ ಮತ್ತು ಸೆಕ್ಸಿ ತಾರೆ ನವನೀತ್ ಕೌರ್ ಮದುವೆ ಫೆಬ್ರವರಿ 2ರಂದು ಅಮರಾವತಿಯಲ್ಲಿ ನಡೆಯಲಿದೆ. ಮಹಾರಾಷ್ಟ್ರದ ಬಾದ್‌ನೆರಾ ಕ್ಷೇತ್ರದ ಸ್ವತಂತ್ರ ಶಾಸಕ ರವಿ ರಾಣಾ ಅವರ ಕೈಹಿಡಿಯಲಿದ್ದಾರೆ ಕೌರ್.

  ಅಮರಾವತಿಯ ಸೈನ್ಸ್ ಕೋರ್ ಮೈದಾನದಲ್ಲಿ ನಡೆಯಲಿರುವ 2834 ಜೋಡಿಗಳ ಸಾಮೂಹಿಕ ವಿವಾಹದಲ್ಲಿ ನವನೀತ್ ಕೌರ್ ಹಾಗೂ ರಾಣಾ ಒಂದಾಗಲಿದ್ದಾರೆ. ಈ ಸಾಮೂಹಿಕ ವಿವಾಹ ವಿಶ್ವ ದಾಖಲೆಗೆ ಕಾರಣವಾಗಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಣಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ಶಾಸಕರಾಗಿದ್ದ ಸುಲ್ಬಾ ಕೋಡ್ಕೆ ಅವರನ್ನು ಸೋಲಿಸಿದ್ದರು.

  ನಮ್ಮದು ಪ್ರೇಮ ವಿವಾಹವಲ್ಲ ಎನ್ನುವ ರಾಣಾ, ಗುರು ಹಿರಿಯರು ನಿಶ್ಚಯಿಸಿದ ಮದುವೆ ಎನ್ನುತ್ತಾರೆ. ಬಾಬಾ ಒಬ್ಬರು ಇವರಿಬ್ಬರನ್ನು ಹರಿದ್ವಾರದಲ್ಲಿ ಗಂಟು ಹಾಕಿದನಂತೆ. ಅಂದಹಾಗೆ ಮದುವೆಗೆ ಅಮಿತಾಬ್ ಬಚ್ಚನ್, ಪ್ರಿಯಾಂಕಾ ಚೋಪ್ರಾ, ಕಂಗನಾ ರನೌತ್, ಸಂಜಯ್ ದತ್ ಸೇರಿದಂತೆ ಬಾಲಿವುಡ್‍ನ ತಾರೆಗಳು ಆಗಮಿಸಲಿದ್ದಾರೆ.

  ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಸೇರಿದಂತೆ ಹಲವಾರು ರಾಜಕೀಯ ಗಣ್ಯರು ಮದುವೆಗೆ ಆಗಮಿಸಿ ನೂತನ ದಂಪತಿಗಳಿಗೆ ಶುಭ ಕೋರಲಿದ್ದಾರೆ. ಅಂದಹಾಗೆ ನವನೀತ್ ಕೌರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ದರ್ಶನ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು. ಈಗ ಈಕೆ ತಮಿಳು, ತೆಲುಗಿನಲ್ಲಿ ಬಿಜಿ ನಟಿ. [ನವನೀತ್ ಕೌರ್]

  English summary
  Punjabi girl Navneet Kaur marrige to be held on February 2 with Ravi Rana at Amravati. Ravi Rana is a politician and independent MLA from Badnera Constituency in Maharashtra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X