For Quick Alerts
  ALLOW NOTIFICATIONS  
  For Daily Alerts

  ನವ್ಯಾ ನಾಯರ್ ಮಗುವಿಗೊಂದು ಮುದ್ದಾದ ಹೆಸರು

  By Rajendra
  |

  ಮಲ್ಲು ಬೆಡಗಿ ನವ್ಯಾ ನಾಯರ್ ತನ್ನ ಮಗುವಿಗೊಂದು ಮುದ್ದಾದ ಹೆಸರಿಟ್ಟಿದ್ದಾರೆ. ಶ್ರೀಕೃಷ್ಣ ಪರಮಾತ್ಮನ ಪರಮ ಭಕ್ತೆಯಂತೆ ನವ್ಯಾ ನಾಯರ್, ತನ್ನ ಮಗನಿಗೆ ಸಾಯಿ ಕೃಷ್ಣ ಎಂದು ನಾಮಕರಣ ಮಾಡಿದ್ದಾರೆ. ತ್ರಿವೇಂಡ್ರಂನ ಕಿಮ್ಸ್ ಆಸ್ಪತ್ರೆಯಲ್ಲಿ ನವ್ಯಾ ನಾಯರ್ ನ.22, 2010ರಂದು ಗಂಡು ಮಗುವಿಗೆ ಜನನ ನೀಡಿದ್ದರು.

  ತ್ರಿಶೂರಿನಲ್ಲಿರುವ ತನ್ನ ಮನೆಯಲ್ಲಿ ಇತ್ತೀಚೆಗೆ ನಾಮಕರಣ ಸಮಾರಂಭ ನಡೆಯಿತು. ಪತಿ ಸಂತೋಷ್ ಮೆನನ್ ಹಾಗೂ ತನ್ನ ಕಂದನೊಂದಿಗೆ ನವ್ಯಾ ನಾಯರ್ ಛಾಯಾಗ್ರಾಹಕರಿಗೆ ಸ್ಮೈಲ್ ಕೊಡುತ್ತಾ ಪೋಸ್ ನೀಡಿದರು. ಜನವರಿ 21, 2010ರಲ್ಲಿ ಸಂತೋಷ್ ಮೆನನ್ ಅವರೊಂದಿಗೆ ನವ್ಯಾ ಮದುವೆ ನಡೆದಿತ್ತು.

  ಛಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ 'ಬಾಸ್' ಹಾಗೂ 'ಗಜ' ಚಿತ್ರಗಳಲ್ಲಿ, ಶಿವರಾಜ್ ಕುಮಾರ್ ಅವರೊಂದಿಗೆ 'ಭಾಗ್ಯದ ಬಳೆಗಾರ' ಚಿತ್ರದಲ್ಲಿ ನವ್ಯಾ ಅಭಿನಯಿಸಿದ್ದಾರೆ. 'ನಮ್ ಯಜಮಾನ್ರು' ಹಾಗೂ 'ಕಲ್ಲರಳಿ ಹೂವಾಗಿ' ಚಿತ್ರಗಳಲ್ಲೂ ಗಮನಸೆಳೆಯುವ ಪಾತ್ರಗಳಲ್ಲಿ ನವ್ಯಾ ಕಾಣಿಸಿಕೊಂಡಿದ್ದರು. [ನವ್ಯಾ ನಾಯರ್]

  English summary
  Malayalam actress Navya Nair, who had delivered her husband Santhosh Menon baby boy at KIMS hospital Trivandrum 22nd 
 November, 2010, has named the baby as Sai Krishna. He is an ardent devotee of Lord Krishna and named her son after the deity.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X