For Quick Alerts
  ALLOW NOTIFICATIONS  
  For Daily Alerts

  ಬಹಳಷ್ಟು ಚಿತ್ರಗಳಿಗೆ ಬುಕ್ ಆದ 'ಮುಮ್ತಾಜ್' ಪಾರುಲ್

  |

  ಗೋವಿಂದಾಯ ನಮಃ ಚಿತ್ರದ "ಪ್ಯಾರ್ಗೆ ಅಗ್ಬಿಟ್ಟೈತೆ... ಓ ನಮ್ದೂಕೆ ಪ್ಯಾರ್ಗೆ ಅಗ್ಬಿಟ್ಟೈತೆ... ಎಂದು ಕಪ್ಪು-ಬಿಳುಫು ದೃಶ್ಯವೈಭವದಲ್ಲಿ ಕುಣಿದಿದ್ದೇ ತಡ, ನಟಿ ಪಾರುಲ್ ಯಾದವ್ ವೃತ್ತಿಜೀವನ ಕ್ಲಿಕ್ ಆಗತೊಡಗಿದೆ. ಈಗವರು ಓಡುವ ಕುದುರೆಯಾಗಿ ಬದಲಾಗಿದ್ದಾರೆ. ಮೂರ್ನಾಲ್ಕು ವರ್ಷಗಳಿಂದ ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದರೂ ಇಷ್ಟು ಗುರುತಿಸಿಕೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ.

  ಇದೀಗ ಈ ಹಾಡು ಹಿಟ್ ಆದ ನಂತರ ಆಕೆಯ ಕಾಲ್ ಶೀಟ್ ಗೆ ನಿರ್ಮಾಪಕರು ಕಾಯುವಂತಾಗಿದೆ. ಈಗ ಚಿತ್ರೋದ್ಯಮ ಹಾಗೂ ಪ್ರೇಕ್ಷಕರು ಗುರುತಿಸಿದ್ದಾರೆ, ಈಗ ಪಾರುಲ್ ಕುಂತರೂ, ನಿಂತರೂ ಸುದ್ದಿ. ಅವರೀಗ ಕಿಚ್ಚ ಸುದೀಪ್ ಗೂ, ಒಲವೇ ಮಂದಾರ ಶ್ರೀಕಾಂತ್‌ಗೂ ಹೀರೋಯಿನ್ ಆಗ್ತಿದ್ದಾರೆ.

  ಕೆ. ಮಂಜು ನಿರ್ಮಾಣದ ಚಿತ್ರಕ್ಕೆ ಈಕೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇನ್ನೊಂದು ಒಲವೇ ಮಂದಾರದ ಶ್ರೀಕಾಂತ್ ಹೀರೋ ಆಗಿರುವ ಚಿತ್ರ. ಆದರೆ ಈ ಬಗ್ಗೆ ಪಾರುಲ್ "ಕೆಲವೊಂದು ಪ್ರೊಜೆಕ್ಟ್‌ಗಳ ಆಫರ್ ಬಂದಿರುವುದು ನಿಜ. ಆದರೆ ಈಗಲೇ ಅವುಗಳ ಬಗ್ಗೆ ಏನೂ ಹೇಳಲಾರೆ. ಅವೆಲ್ಲ ಇನ್ನಷ್ಟೇ ಖಚಿತವಾಗಬೇಕಿದೆ. ಎಲ್ಲವೂ ಅಂತಿಮವಾದ ನಂತರ ನಾನೇ ಹೇಳುತ್ತೇನೆ" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Actress Parul Yadav Craze is spreading after the super hit song Pyaarge Agbittaithe Song, movie Govindaya Namaha Movie
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X