For Quick Alerts
  ALLOW NOTIFICATIONS  
  For Daily Alerts

  ನೋಡಿ ಆನಂದಿಸಿ ದೇವ್ ಸನ್ ಆಫ್ ಮುದ್ದೇಗೌಡ

  By Rajendra
  |

  ಈಗಾಗಲೆ ಸಾಕಷ್ಟು ವಾದ ವಿವಾದ, ಚರ್ಚೆಗೆ ಕಾರಣವಾಗಿರುವ ಇಂದ್ರಜಿತ್ ಲಂಕೇಶ್ ಅವರ ದೇವ್ ಸನ್ ಆಫ್ ಮುದ್ದೇಗೌಡ ಇದೇ ವಾರ (ಏ.6) ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಜೆಡ್ ಪ್ಲಾಂಟ್ಸ್ ವೆಂಚರ್ ಸಂಸ್ಥೆ ಲಾಂಛನದಲ್ಲಿ ಶಿಲ್ಪಾರಮೇಶ್‌ರಮಣಿ ಅವರು ನಿರ್ಮಿಸಿರುವ ಚಿತ್ರವಿದು.

  ಚಿತ್ರದ ಶೀರ್ಷಿಕೆ ಬಗ್ಗೆ ಒಕ್ಕಲಿಗ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರದ ಟೈಟಲ್‌ಗೆ ಅನುಮತಿ ನೀಡಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಟಾರ್ಗೆಟ್ ಮಾಡಿಕೊಂಡು ಚಿತ್ರವನ್ನು ತೆರೆಗೆ ತರಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.

  ದಿಗಂತ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಬೆಡಗಿ ಚಾರ್ಮಿ. ಅನಂತನಾಗ್, ಶರಣ್, ಸುಧಾಬೆಳವಾಡಿ, ರಾಜುತಾಳಿಕೋಟೆ, ಮತಾಲಿಯಾ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು. ಇಂದ್ರಜಿತ್ ಲಂಕೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಜೆಸ್ಸಿಗಿಫ್ಟ್ ಸಂಗೀತ ನೀಡಿದ್ದಾರೆ.

  ಸಂತೋಷ್ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ಕವಿರಾಜ್ ಗೀತರಚನೆ ಹಾಗೂ ಕೆ.ಡಿ.ವೆಂಕಟೇಶ್ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಬಿ.ಎ.ಮಧು ಮತ್ತು ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  The much-debated and controversal Kannada film Dev Son of Mudde Gowda, directed by Indrajit Lankesh is ready for release on 06th April 2012. This is a romantic comedy film starring Diganth and Charmee Kaur in the lead roles. Ananth Nag plays a prominent supporting role while the model-turned-actress Nathalia Kaur makes a special appearance

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X