twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಕ್ಕೆ ಸಿಕ್ಕಾಪಟ್ಟೆ ಹೊಡೆತ ಕೊಟ್ಟ ತೆಲುಗು ಚಿತ್ರ 'ರಚ್ಚ'

    By Rajendra
    |

    ತೆಲುಗು ಚಿತ್ರಗಳಿಗೆ ಭಾರಿ ಮಾರ್ಕೆಟ್ ಇರೋದು ಆಂಧ್ರ ಬಿಟ್ಟರೆ ನಮ್ಮ ಬೆಂಗಳೂರೇ ಅನ್ನಿಸುತ್ತದೆ. ಪರಭಾಷಾ ಚಿತ್ರಗಳ ಹೊಡೆತಕ್ಕೆ ಕನ್ನಡ ಚಿತ್ರಗಳು ತತ್ತರಿಸುತ್ತಿವೆ. ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅಭಿನಯದ 'ರಚ್ಚ' ಚಿತ್ರ ಗುರುವಾರವೇ (ಏ.5) ತೆರೆಕಂಡಿದೆ.

    ಇದರಿಂದ ಶುಕ್ರವಾರ (ಏ.6) ತೆರೆಕಂಡಿರುವ 'ದೇವ್' ಹಾಗೂ 'ಭೀಮಾ ತೀರದಲ್ಲಿ' ಎರಡು ಕನ್ನಡ ಚಿತ್ರಗಳಿಗೆ ಭಾರಿ ಹೊಡೆತ ಬಿದ್ದಂತಾಗಿದೆ. ಬೆಂಗಳೂರು ಗಾಂಧಿನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ತೆರೆಕಂಡಿರುವ 'ದೇವ್ ಸನ್ ಆಫ್ ಮುದ್ದೇಗೌಡ'ನಿಗೆ ಜನಸಂದಣಿ ಇಲ್ಲ. ಅದೇ ಪಕ್ಕದ ಅಪರ್ಣ ಚಿತ್ರಮಂದಿರದಲ್ಲಿ ತೆರೆಕಂಡಿರುವ 'ರಚ್ಚ' ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

    ಮೂಲಗಳ ಪ್ರಕಾರ 'ರಚ್ಚ' ಚಿತ್ರದ ಬ್ಲಾಕ್ ಟಿಕೆಟ್ ರು.800ಕ್ಕೆ ಮಾರಾಟವಾಗಿದೆಯಂತೆ. ಗುರುವಾರ ತೆರೆಕಂಡ 'ರಚ್ಚ' ಚಿತ್ರದ ಟಿಕೆಟ್‌ಗಾಗಿ ಜನ ಬೆಳಗ್ಗೆ 5 ಗಂಟೆಯಿಂದಲೇ ಕಾದಿದ್ದಾರೆ. ಕೆ ಆರ್ ಪುರಂನ ವೆಂಕಟೇಶ್ವರ ಚಿತ್ರಮಂದಿರದಲ್ಲಿ 11.30ಕ್ಕೆ ಆರಂಭವಾಗಬೇಕಿದ್ದ ಶೋ 7.30ಕ್ಕೆ ಆರಂಭವಾಗಿದೆ. ಕರ್ನಾಟಕದಲ್ಲಿ ತೆಲುಗು ಚಿತ್ರಗಳ ಹವಾ ಹೇಗಿದೆ ನೋಡಿ.

    ಈ ಹಿಂದೆಯೂ ರಾಮ್ ಚರಣ್ ತೇಜ ಅಭಿನಯದ ಮಗಧೀರ ಚಿತ್ರ ಅಗತ್ಯಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆಗಲೂ ಅಷ್ಟೇ ಕನ್ನಡ ಚಿತ್ರಗಳಿಗೆ ಭಾರಿ ಹೊಡೆತ ನೀಡಿತ್ತು. ಈಗ ರಚ್ಚ ಮೂಲಕ ಮತ್ತೆ ಅದೇ ರೀತಿಯ ಸಮಸ್ಯೆ ಎದುರಾಗಿದೆ. (ಏಜೆನ್ಸೀಸ್)

    English summary
    Ramacharan Tej’s 'Rachcha' hit the big screens on Thursday (5th April) in Bangalore. At the same time Kannada movies Dev Son of Mudde Gowda and Bheema Theeradalli also released. Telugu Rachcha bashes Kannada films.
    Friday, April 6, 2012, 17:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X