For Quick Alerts
  ALLOW NOTIFICATIONS  
  For Daily Alerts

  'ಸೌತ್ ಫಿಲ್ಮ್ ಫೇರ್' ಪ್ರಶಸ್ತಿ: ಅತ್ಯುತ್ತಮ ನಿರ್ದೇಶಕ ರಿಷಬ್ ಶೆಟ್ಟಿ

  By Suneel
  |

  ದಕ್ಷಿಣ ಭಾರತದ ಪ್ರತಿಷ್ಠಿತ 64 ನೇ ಜಿಯೋ ಫಿಲ್ಮ್‌ಫೇರ್ ಪ್ರಶಸ್ತಿ ಪ್ರಕಟವಾಗಿದೆ. ಹೈದರಾಬಾದ್ ಅಂತರಾಷ್ಟ್ರೀಯ ಕನ್ವೆಷನ್ ಸೆಂಟರ್ ನಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಿನ್ನೆ(ಜೂನ್ 17) ನೆರವೇರಿದೆ.

  2017 ನೇ ಸಾಲಿನ ಸೌತ್ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತೆಲುಗು ಭಾಷೆಯಲ್ಲಿ 'ಪೆಳ್ಳಿ ಚೂಪುಲು', ತಮಿಳಿನಲ್ಲಿ 'ಜೋಕರ್' ಸಿನಿಮಾಗಳು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದಿವೆ.

  ಕನ್ನಡದಿಂದಲೂ ಹಲವು ಚಿತ್ರಗಳು ಮತ್ತು ನಟರು ಸೌತ್ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದ ಬಗ್ಗೆ ಹೇಳಿದ್ವಿ. ಈಗ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆ ಆಗಿದ್ದು, ಕನ್ನಡದ ಯಾವ ಚಿತ್ರ, ಯಾವ ನಟ, ನಟಿ ಪ್ರಶಸ್ತಿ ಪಡೆದಿದ್ದಾರೆ ಎಂಬುದರ ಲಿಸ್ಟ್ ಇಲ್ಲಿದೆ..

  ಅತ್ಯುತ್ತಮ ಚಿತ್ರ

  ಅತ್ಯುತ್ತಮ ಚಿತ್ರ

  ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ 'ತಿಥಿ' ಸಿನಿಮಾ 64 ನೇ ಸೌತ್ ಫಿಲ್ಮ್ ಫೇರ್‌ನ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಈ ಚಿತ್ರಕ್ಕೆ ರಾಮ್ ರೆಡ್ಡಿ ಆಕ್ಷನ್ ಕಟ್ ಹೇಳಿದ್ದರು.

  ಅತ್ಯುತ್ತಮ ನಿರ್ದೇಶಕ

  ಅತ್ಯುತ್ತಮ ನಿರ್ದೇಶಕ

  ಸ್ಯಾಂಡಲ್ ವುಡ್ ನಲ್ಲಿ 150 ದಿನಗಳು ಪ್ರದರ್ಶನ ಕಂಡು ಈ ವರ್ಷ ದಾಖಲೆ ಸೃಷ್ಟಿಸಿದ 'ಕಿರಿಕ್ ಪಾರ್ಟಿ' ಚಿತ್ರದ ನಿರ್ದೇಶನಕ್ಕೆ ರಿಷಬ್ ಶೆಟ್ಟಿ ರವರು ಕನ್ನಡ ವಿಭಾಗದಿಂದ ಸೌತ್ ಫಿಲ್ಮ್ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ವಿಜೇತರಾಗಿದ್ದಾರೆ.

  ಅತ್ಯುತ್ತಮ ನಟ

  ಅತ್ಯುತ್ತಮ ನಟ

  'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಅಭಿನಯಕ್ಕಾಗಿ ಅನಂತ್ ನಾಗ್ ರವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಈ ಚಿತ್ರವನ್ನು ಹೇಮಂತ್ ಎಂ ರಾವ್ ನಿರ್ದೇಶನ ಮಾಡಿದ್ದರು.

  ಅತ್ಯುತ್ತಮ ನಟಿ

  ಅತ್ಯುತ್ತಮ ನಟಿ

  ನಿರ್ದೇಶಕ ಪವನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದ 'ಯೂ ಟರ್ನ್' ಚಿತ್ರದಲ್ಲಿಯ ನಟನೆಗಾಗಿ ನಟಿ ಶ್ರದ್ಧಾ ಶ್ರೀನಾಥ್ ರವರಿಗೆ 64ನೇ ಸೌತ್ ಫಿಲ್ಮ್ ಫೇರ್‌ನ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ.

  ಅತ್ಯುತ್ತಮ ಪೋಷಕ ನಟ

  ಅತ್ಯುತ್ತಮ ಪೋಷಕ ನಟ

  'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿಯ ಅಭಿನಯಕ್ಕಾಗಿ ವಸಿಷ್ಠ ಎನ್ ಸಿಂಹ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ.

  ಅತ್ಯುತ್ತಮ ಪೋಷಕ ನಟಿ

  ಅತ್ಯುತ್ತಮ ಪೋಷಕ ನಟಿ

  'ಕಿರಿಕ್ ಪಾರ್ಟಿ' ಚಿತ್ರದಲ್ಲಿಯ ಅಭಿನಯಕ್ಕಾಗಿ ಸಂಯುಕ್ತಾ ಹೆಗಡೆ ರವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ.

  ಬೆಸ್ಟ್ ಲಿರಿಕ್ಸ್

  ಬೆಸ್ಟ್ ಲಿರಿಕ್ಸ್

  ಗಣೇಶ್ ಅಭಿನಯದ 'ಮುಂಗಾರು ಮಳೆ 2' ಚಿತ್ರದಲ್ಲಿಯ ಜಯಂತ್ ಕಾಯ್ಕಿಣಿ ರವರು ಬರೆದ 'ಸರಿಯಾಗಿ ನೆನಪಿದೆ' ಹಾಡು ಬೆಸ್ಟ್ ಲಿರಿಕ್ಸ್ ಪ್ರಶಸ್ತಿ ಪಡೆದಿದೆ.

  ಹಿನ್ನೆಲೆ ಗಾಯಕ

  ಹಿನ್ನೆಲೆ ಗಾಯಕ

  'ಕಿರಿಕ್ ಪಾರ್ಟಿ' ಚಿತ್ರದ 'ಬೆಳಗೆದ್ದು ಯಾರ ಮುಖವ' ಹಾಡಿಗಾಗಿ ವಿಜಯ್ ಪ್ರಕಾಶ್ ರವರು ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಪಡೆದಿದ್ದಾರೆ.

  ಹಿನ್ನೆಲೆ ಗಾಯಕಿ

  ಹಿನ್ನೆಲೆ ಗಾಯಕಿ

  'ರಾಮಾ ರಾಮ ರೇ' ಚಿತ್ರದಲ್ಲಿನ 'ನಮ್ಮ ಕಾಯೋ ದೇವರೇ' ಹಾಡಿರುವ ಅನನ್ಯ ಭಟ್ ಗೆ ಅತ್ಯುತ್ತಮ ಗಾಯಕಿ ಪ್ರಶಸ್ತಿ ಲಭಿಸಿದೆ.

  English summary
  'Kirik Party' director Rishab Shetty has got 64th South Filmfare Best Director award in Kannada category. Here is Complete Winners List of Sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X