»   » 'ಅಲ್ಲಮ' ಚಿತ್ರಕ್ಕೆ ರಾಷ್ಟ್ರ ಮನ್ನಣೆ: ಕನ್ನಡಕ್ಕೆ 4 ರಾಷ್ಟ್ರ ಪ್ರಶಸ್ತಿ

'ಅಲ್ಲಮ' ಚಿತ್ರಕ್ಕೆ ರಾಷ್ಟ್ರ ಮನ್ನಣೆ: ಕನ್ನಡಕ್ಕೆ 4 ರಾಷ್ಟ್ರ ಪ್ರಶಸ್ತಿ

Posted By:
Subscribe to Filmibeat Kannada

2016ನೇ ಸಾಲಿನ ಪ್ರತಿಷ್ಠಿತ 64ನೇ ರಾಷ್ಟ್ರೀಯ ಪ್ರಶಸ್ತಿ ಪ್ರಕಟವಾಗಿದೆ. ಕನ್ನಡದ 'ರಿಸರ್ವೇಷನ್' ಚಿತ್ರಕ್ಕೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದ್ದು, ಟಿ.ಎಸ್.ನಾಗಭರಣ ನಿರ್ದೇಶನದ 'ಅಲ್ಲಮ' ಚಿತ್ರಕ್ಕೆ 2 ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.

'ಅಲ್ಲಮ' ಚಿತ್ರದ ಸಂಗೀತಕ್ಕಾಗಿ ಬಾಪು ಪದ್ಮನಾಭ ಅವರಿಗೆ ಅತ್ಯುತ್ತಮ ಸಂಗೀತ ಮತ್ತು ಮೇಕಪ್ ವಿಭಾಗದಲ್ಲಿ ರಾಮಕೃಷ್ಣ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಇನ್ನು ಅತ್ಯುತ್ತಮ ಬಾಲ ನಟ ವಿಭಾಗದಲ್ಲಿ 'ರೈಲ್ವೆ ಚಿಲ್ಡ್ರನ್' ಚಿತ್ರದ ಅಭಿನಯಕ್ಕಾಗಿ ಕನ್ನಡದ ಮನೋಹರ.ಕೆ ರಾಷ್ಟ್ರ ಪ್ರಶಸ್ತಿ ಗಳಿಸಿಕೊಂಡಿದ್ದಾರೆ. ['ಅಲ್ಲಮ' ವಿಮರ್ಶೆ: ಸಿನಿಮಾ ಮಾಯೆಯೆಂಬರು, ಮಾಯೆ ಅಲ್ಲ ಗುಹೇಶ್ವರ!]

64th National Film Awards Announced: 4 Awards for Kannada

ಇನ್ನು ಮರಾಠಿಯ 'ಕಾಸವ್' ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿದ್ದು, 'ರುಸ್ತಂ' ಚಿತ್ರದ ಅಭಿನಯಕ್ಕಾಗಿ ನಟ ಅಕ್ಷಯ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ.

English summary
64th National Film Awards Announced: 4 Awards for Kannada. 'Allamma' Movie wins 2 National Awards.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada