ನಟ ದುನಿಯಾ ವಿಜಯ್ ಗೆ ಜಾಮೀನು
Recommended Video

ಮಾಸ್ತಿಗುಡಿ ದುರಂತ ಪ್ರಕರಣದಲ್ಲಿ ಆರೋಪಿ ಆಗಿರುವ ನಿರ್ಮಾಪಕ ಸುಂದರ್ ಪಿ ಗೌಡ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಹಿನ್ನಲೆಯಲ್ಲಿ ನಟ ದುನಿಯಾ ವಿಜಯ್ ವಿರುದ್ಧ ದೂರು ದಾಖಲಾಗಿತ್ತು. ದೂರು ದಾಖಲಾದ ಬಳಿಕ ಪೊಲೀಸರಿಗೆ ಸಿಗದಂತೆ ತಲೆಮರೆಸಿಕೊಂಡಿದ್ದ ದುನಿಯಾ ವಿಜಯ್ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿತ್ತು. ಒಂದು ವಾರದಿಂದ ಕಾಣೆಯಾಗಿದ್ದ ವಿಜಯ್ ಅವರನ್ನು ಪೊಲೀಸರು ಇಂದು ಬೆಳಗ್ಗೆ ತಮಿಳುನಾಡಿನ ರೆಸಾರ್ಟ್ ನಲ್ಲಿ ಬಂಧಿಸಿದರು.
ತಮಿಳುನಾಡಿನಿಂದ ಬೆಂಗಳೂರಿಗೆ ಕರೆತರುವಷ್ಟರಲ್ಲಿ ನಟ ದುನಿಯಾ ವಿಜಯ್ ಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ. 65 ನೇ ಸೆಷನ್ಸ್ ಕೋರ್ಟ್ ನಿಂದ ಜಾಮೀನು ಮಂಜೂರಾಗಿದ್ದು ಒಬ್ಬರ ಶ್ಯೂರಿಟಿ ಜೊತೆಯಲ್ಲಿ 50 ಸಾವಿರ ಬಾಂಡ್ ಪಡೆದು ಜಾಮೀನು ನೀಡಲಾಗಿದೆ.

ದುನಿಯ ವಿಜಯ್ ಪರ ವಕೀಲರಾದ ಶಿವಕುಮಾರ್ ರಿಂದ ಜಾಮೀನು ಅರ್ಜಿ ಸಲ್ಲಿಸಲಾಗಿದೆ. ಇಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ನ್ಯಾಯಾಧೀಶ ಮಂಜುನಾಥ್ ಆದೇಶ ಹೊರಡಿಸಿದ್ದಾರೆ.
ಸದ್ಯ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರ ವಶದಲ್ಲಿರುವ ದುನಿಯಾ ವಿಜಯ್ ಸ್ಟೇಷನ್ ನಲ್ಲಿ ಜಾಮೀನು ಪ್ರಕ್ರಿಯೆ ಮುಗಿಸಿದ ನಂತರ ಮನೆಗೆ ತೆರಳಲಿದ್ದಾರೆ.


Click it and Unblock the Notifications











