»   » ಪವನ್ ಕಲ್ಯಾಣ್ ಗೆ ಸಿಕ್ಕ ಅತ್ಯಮೂಲ್ಯ ಗಿಫ್ಟ್ ಯಾವ್ದು?

ಪವನ್ ಕಲ್ಯಾಣ್ ಗೆ ಸಿಕ್ಕ ಅತ್ಯಮೂಲ್ಯ ಗಿಫ್ಟ್ ಯಾವ್ದು?

Posted By:
Subscribe to Filmibeat Kannada

ಪವರ್ ಸ್ಟಾರ್ ಪವನ್ ಕಲ್ಯಾಣ್ ಅಂದ್ರೇನೇ ಹಾಗೆ, ಟಾಲಿವುಡ್ ನ ಹೈವೋಲ್ಟೇಜ್ ಕರೆಂಟ್ ಇದ್ಹಾಗೆ. ರೀಲ್ ನಲ್ಲಿ ಪವನ್ ಕಲ್ಯಾಣ್ ಹೇಗೆ ಪವರ್ ಫುಲ್ಲೋ, ರಿಯಲ್ ನಲ್ಲೂ ಅಷ್ಟೇ ಡೇರಿಂಗ್ ಅಂಡ್ ಡ್ಯಾಶಿಂಗ್.

ಇದೇ ಕಾರಣಕ್ಕೆ ಟಾಲಿವುಡ್ ನ ಪವರ್ ಸ್ಟಾರ್ ಗೆ ಅತಿ ಹೆಚ್ಚು ಫ್ಯಾನ್ ಫಾಲೋವಿಂಗ್ ಇರುವುದು. ಆಡುವ ಒಂದೊಂದು ಮಾತಲ್ಲೂ ಪವರ್ ಪಂಚ್ ಕೊಡುವ ಪವನ್ ಕಂಡ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಅಕ್ಕರೆ. ಎಲ್ಲೇ ಹೋದರೂ ಅವರನ್ನ ಜಪಿಸುವ ಆಭಿಮಾನಿಗಳಿಗೆ ಆರಾಧ್ಯಧೈವ ಈ ತೆಲುಗಿನ ಗಬ್ಬರ್ ಸಿಂಗ್. [ಪವರ್ ಸ್ಟಾರ್ ಪವನ್ ಕಲ್ಯಾಣ್ ಆಸ್ತಿಪಾಸ್ತಿ ಅಷ್ಟೇನಾ?]

ಮಾಸ್ ಅಭಿಮಾನಿಗಳ ಪಾಲಿಗೆ ಅಕ್ಷರಶಃ ದೇವರಾಗಿರುವ ಪವರ್ ಸ್ಟಾರ್ ಗೆ ಅಭಿಮಾನಿಯೊಬ್ಬರಿಂದ ಬೆಲಕಟ್ಟಲಾಗದ ಅತ್ಯಮೂಲ್ಯ ಉಡುಗೊರೆಯೊಂದು ಸಿಕ್ಕಿದೆ. ಆ ಉಡುಗೊರೆಯೇ ಈ ಏಳುವರೆ ಅಡಿ ಎತ್ತರದ ಕಂಚಿನ ಪ್ರತಿಮೆ.

a-statue-for-power-star-pawan-kalyan

ಪವನ್ ಕಲ್ಯಾಣ್ ರವರ ಕಟ್ಟಾ ಅಭಿಮಾನಿಯಾಗಿರುವ ಚಂದು ಮೋಹನ್ ಎಂಬುವರು ಪವರ್ ಸ್ಟಾರ್ ಗಾಗಿ ಈ ಪ್ರತಿಮೆ ರೂಪಿಸಿದ್ದಾರೆ. 'ಜನಸೇನ' ಪಕ್ಷದ ಉದ್ಘಾಟನಾ ಸಮಾರಂಭದಲ್ಲಿ ಪವನ್ ಕಲ್ಯಾಣ್ ಆಡಿದ ಮಾತುಗಳಿಂದ ಪ್ರೇರಣೆ ಪಡೆದಿರುವ ಚಂದು ಮೋಹನ್, ಅಂದು ಪವನ್ ಭಾಷಣ ಮಾಡಿದ ಸ್ಟೈಲ್ ನಲ್ಲೇ ಪ್ರತಿಮೆ ನಿರ್ಮಿಸಿದ್ದಾರೆ.

'ಅನ್ಯಾಯವನ್ನ ಪ್ರಶ್ನಿಸಿ, ನ್ಯಾಯಕ್ಕಾಗಿ ಹೋರಾಡುವ' ಪವನ್ ಕಲ್ಯಾಣ್, ಚಂದು ಮೋಹನ್ ಪಾಲಿಗೆ ಕಲಿಯುಗದ ದೇವರಂತೆ. ಹೀಗಾಗಿ ಅವರ ಪ್ರತಿಮೆಯನ್ನು ನಿರ್ಮಿಸಿ, ಅವರ ಸಂದೇಶವನ್ನು ಇಡೀ ಜಗತ್ತಿಗೆ ಸಾರಲು ಮುಂದಾಗಿದ್ದಾರೆ. ಈಗಾಗ್ಲೇ ಮಣ್ಣಿನಿಂದ ರೂಪ ಪಡೆದುಕೊಂಡುಕೊಂಡಿರುವ ಪ್ರತಿಮೆಗೆ ಇನ್ನು ಕೆಲವೇ ದಿನಗಳಲ್ಲಿ ಕಂಚಿನ ಲೇಪನವನ್ನು ನೀಡ್ತಾರಂತೆ. [ಪವನ್ ಚಿತ್ರದ 'ಪವರ್ ಫುಲ್'ಗಳಿಕೆ ಕುಸಿತ]

ಪ್ರತಿಮೆ ಸಂಪೂರ್ಣವಾಗಿ ರೆಡಿಯಾದ ನಂತರ ಪಶ್ಚಿಮ ಗೋದಾವರಿಯ ತಡೆಪಲ್ಲಿಗುಡೆಮ್ ನಲ್ಲಿರುವ ಹೈವೇ ರೋಡ್ ನಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು ಅಂತ ಚಂದು ಮೋಹನ್ ತಿಳಿಸಿದ್ದಾರೆ. ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಾಗಿರುವ ಈ ಪ್ರತಿಮೆಯ ಅನಾವರಣ, ಪವನ್ ಕಲ್ಯಾಣ್ ಕೈಯಿಂದಲೇ ಆಗಬೇಕು ಅನ್ನುವ ಆಸೆ ಅಭಿಮಾನಿಗಳದ್ದು. ಇದಕ್ಕೆ 'ಗೋಪಾಲ ಗೋಪಾಲ' ಅಸ್ತು ಅನ್ನುತ್ತಾರಾ..?? (ಏಜೆನ್ಸೀಸ್)

English summary
Power Star Pawan Kalyan's hard-core fan, Chandu Mohan has commissioned a 7.5'ft statue of the actor to be unveiled in Tadepalligudem, West Godavari.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada