»   » 'ಅಂಬಿ ನಿಂಗ್ ವಯಸ್ಸಾಯ್ತೋ' ಈ ಟೈಟಲ್ ಕೊಟ್ಟಿದ್ದು ಯಾರು?

'ಅಂಬಿ ನಿಂಗ್ ವಯಸ್ಸಾಯ್ತೋ' ಈ ಟೈಟಲ್ ಕೊಟ್ಟಿದ್ದು ಯಾರು?

Posted By:
Subscribe to Filmibeat Kannada

ರೆಬೆಲ್ ಸ್ಟಾರ್ ಅಂಬರೀಶ್ ಮತ್ತೆ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸುತ್ತಿದ್ದು, ಈ ಚಿತ್ರಕ್ಕೆ ಅಂಬಿ ನಿಂಗೆ ವಯಸ್ಸಾಯ್ತೋ' ಎಂಬ ಶೀರ್ಷಿಕೆಯನ್ನಿಡಲಾಗಿದೆ.

ಈ ಚಿತ್ರವನ್ನ ಕಿಚ್ಚ ಸುದೀಪ್ ಅವರು ನಿರ್ಮಾಣ ಮಾಡಲಿದ್ದು, ನಂದಕಿಶೋರ್ ನಿರ್ದೇಶನ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇಷ್ಟೆಲ್ಲಾ ವಿಶೇಷಗಳ ಮಧ್ಯೆ 'ಅಂಬಿ ನಿಂಗೆ ವಯಸ್ಸಾಯ್ತೋ' ಟೈಟಲ್ ಕೊಟ್ಟಿದ್ದು ಯಾರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

'ಅಂಬಿ ನಿಂಗೆ ವಯಸ್ಸಾಯ್ತೋ' ಅಂತ ಹೇಳುತ್ತಿದ್ದಾರೆ ಕಿಚ್ಚ ಸುದೀಪ್.!

A Story Behind the Title Ambi Ninge Vayassaithu

ಈ ಚಿತ್ರಕ್ಕೆ ಈ ಟೈಟಲ್ ಕೊಟ್ಟಿರುವುದೇ ಸುದೀಪ್ ಅವರಂತೆ. ಚಿತ್ರದಲ್ಲೂ ವಿಶೇಷ ಪಾತ್ರವನ್ನ ಕೂಡ ಸುದೀಪ್ ನಿರ್ವಹಿಸಲಿದ್ದಾರೆ. ''ಅಂಬರೀಶ್ ಅವರಲ್ಲಿ ಒಂದು ಎನರ್ಜಿ ಕಾಣಿಸುತ್ತಿದೆ. ನನ್ನ ಮೇಲೆ ನಂಬಿಕೆ ಇಟ್ಟು ಸಿನಿಮಾ ಮಾಡುತ್ತಿದ್ದಾರೆ. ಒಂದು ಟ್ರೈಲರ್ ಕೂಡ ಮಾಡುತ್ತಿದ್ದೇವೆ. ಅಂಬರೀಶ್ ಅವರಿಗೆ ಸೂಕ್ತವಾಗುವಂತೆ ಬರವಣಿಗೆ ಕೆಲಸಗಳು ನಡೆಯುತ್ತಿದೆ'' ಎಂದು ಸುದೀಪ್ ತಿಳಿಸಿದ್ದಾರೆ.

ಅಂದ್ಹಾಗೆ, ಇದು ತಮಿಳಿನ 'ಪವರ್ ಪಾಂಡಿ' ಚಿತ್ರದ ರೀಮೇಕ್ ಎನ್ನಲಾಗುತ್ತಿದೆ. ಆದ್ರೆ, ಅಧಿಕೃತವಾಗಿ ಹೊರಬಿದ್ದಿಲ್ಲ.

English summary
A Story Behind the Title of 'Ambi Ninge Vayassaithu'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X